ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಈಟಿವಿ ಭಾರತ ನೇತೃತ್ವದಲ್ಲಿ ದೇಶದ ವಿವಿಧ ಗಾಯಕರ ಸಿರಿಕಂಠದಿಂದ ಮೂಡಿಬಂದಿರುವ ವೈಷ್ಣವ ಜನತೋ.. ಗೀತೆಗೆ ಐಪಿಎಸ್ ಅಧಿಕಾರಿ ಡಿ.ರೂಪಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
- — D Roopa IPS (@D_Roopa_IPS) October 2, 2019 " class="align-text-top noRightClick twitterSection" data="
— D Roopa IPS (@D_Roopa_IPS) October 2, 2019
">— D Roopa IPS (@D_Roopa_IPS) October 2, 2019
ರೈಲ್ವೆ ಇಲಾಖೆಯ ಐಜಿಪಿಯಾಗಿರುವ ರೂಪಾ, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.
ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ರೂಪಾ, ಗಾಂಧೀಜಿ ಬದುಕಿದ್ದಾಗ ವೈಷ್ಣವ ಜನತೋ ಸಾಹಿತ್ಯವನ್ನು ಬಹಳ ಮೆಚ್ಚಿಕೊಂಡಿದ್ದರು. ಇದೇ ಸಾಹಿತ್ಯವನ್ನು ಬಳಸಿ ನಿಮ್ಮ ತಂಡ ದೇಶದ ವಿವಿಧ ಪ್ರಖ್ಯಾತ ಗಾಯಕರಿಂದ ಹಾಡನ್ನು ಹಾಡಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದೀರಿ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.