ETV Bharat / state

How's the josh! ಎಂದು ಪೊಲೀಸರಿಗೆ ಧೈರ್ಯ ತುಂಬಿದ ಹೇಮಂತ್ ನಿಂಬಾಳ್ಕರ್ - ಬೆಂಗಳೂರಿನಲ್ಲಿ ಕೊರೊನಾ ಪ್ರಕರಣ

ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸಿಲಿಕಾನ್ ಸಿಟಿ ಪೊಲೀಸರ ಕರ್ತವ್ಯವನ್ನು ಶ್ಲಾಘಿಸಿ ಧೈರ್ಯ ತುಂಬುವ ಟ್ವೀಟ್ ಮಾಡಿದ್ದಾರೆ.

sdsdd
ಐಪಿಎಸ್​ ಹೇಮಂತ್ ನಿಂಬಾಳ್ಕರ್
author img

By

Published : Jul 9, 2020, 3:32 PM IST

ಬೆಂಗಳೂರು: ಕೊರೊನಾ ಸೋಂಕಿನ ಆರ್ಭಟದ ನಡುವೆ ಆತ್ಮವಿಶ್ವಾಸದಿಂದ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಟ್ವೀಟ್ ಮೂಲಕ ವಿಶೇಷ ರೀತಿಯಲ್ಲಿ ಧೈರ್ಯ ತುಂಬಿದ್ದಾರೆ.

dddd
ಐಪಿಎಸ್​ ಹೇಮಂತ್ ನಿಂಬಾಳ್ಕರ್ ಟ್ವೀಟ್

ಕೊರೊನಾ ಹಾವಳಿಯಿಂದಾಗಿ ಪೊಲೀಸರು ಸ್ವಲ್ಪಮಟ್ಟಿಗೆ ತಳಮಳಗೊಂಡಿದ್ದಾರೆ.‌ ಹೀಗಾಗಿ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸವನ್ನು ಹಿರಿಯ ಅಧಿಕಾರಿಗಳು ‌ಮಾಡುತ್ತಿದ್ದಾರೆ. ಕೊರೊನಾ ಹೋರಾಟದಲ್ಲಿ ಭಾಗಿಯಾಗಿರುವ ನೀವು ಧೈರ್ಯ ಕಳೆದುಕೊಳ್ಳಬೇಡಿ.

ಸಿಬ್ಬಂದಿ ಕುಟುಂಬವೂ ಪೊಲೀಸ್ ಇಲಾಖೆಯ ಜೊತೆಗಿದೆ. ಪಾಸಿಟಿವ್ ಕೇಸ್ ಹೆಚ್ಚಾದರೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಪೊಲೀಸರು ಮುಂಚೂಣಿಯಲ್ಲಿದ್ದಾರೆ. ಉತ್ಸಾಹ ಕಳೆದುಕೊಳ್ಳಬೇಡಿ ಎನ್ನುತ್ತಾ ಜನಪ್ರಿಯ ಬಾಲಿವುಡ್‌ ಚಿತ್ರ 'ಉರಿ'ಯಲ್ಲಿ ನಾಯಕ ನಟ ವಿಕ್ಕಿ ಕೌಶಲ್‌ ತನ್ನ ವಿಶೇಷ ಕಾರ್ಯಾಚರಣೆಯ ತಂಡದ ಸದಸ್ಯರಿಗೆ ಹೇಳುವ ಹಾಗೆ How's the josh ಎಂದು ಧೈರ್ಯ ತುಂಬಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.