ಬೆಂಗಳೂರು: ಕೊರೊನಾ ಸೋಂಕಿತರ, ಶಂಕಿತರ ಕಾಲ್ ಹಿಸ್ಟರಿ ಮೂಲಕ ಸಂಪರ್ಕಿತರ ಪತ್ತೆ ಹೆಚ್ಚಲು ನಿರ್ಧರಿಸಿದ್ದು, ಕಾಲ್ ಡೀಟೇಲ್ಸ್ ನೀಡುವಂತೆ ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ, ಸೋಂಕಿತರ ಪ್ರೈಮರಿ ಕಾಂಟ್ಯಾಕ್ಟ್ ಹಿಸ್ಟರಿ, ಕಾಲ್ ಡಿಟೇಲ್ಸ್ ಅನ್ನು 12 ಗಂಟೆಯಲ್ಲಿ ನೀಡಬೇಕು. ಸೋಂಕಿತರ ಸೆಕೆಂಡರಿ ಕಾಂಟ್ಯಾಕ್ಟ್ ಕಾಲ್ ಡೀಟೇಲ್ಸ್ ಅನ್ನು 24 ಗಂಟೆಯಲ್ಲಿ ನೀಡುವಂತೆ ಸೂಚನೆ ನೀಡಿದ್ದೇವೆ. ಇದಕ್ಕಾಗಿ ಜಿಲ್ಲಾಡಳಿತದ ವತಿಯಿಂದ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಕಾಲ್ ಡೀಟೇಲ್ಸ್ ಗಳನ್ನು ಆಯಾ ನೋಡಲ್ ಅಧಿಕಾರಿಗಳಿಗೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.
ಕೊರೊನಾ ಪಾಸಿಟಿವ್ ಬಂದಿರುವ ಕೆಲವರು ಟ್ರಾವೆಲ್ ಹಿಸ್ಟರಿ ನೀಡಲು ಹಿಂಜರಿಯುತ್ತಿದ್ದಾರೆ. ಸರಿಯಾಗಿ ಸಹಕಾರ ನೀಡುತ್ತಿಲ್ಲ, ಮಾಹಿತಿಯನ್ನು ಮರೆಮಾಚುತ್ತಿದ್ದಾರೆ. ಹಾಗಾಗಿ ನಾವು ಅನಿವಾರ್ಯವಾಗಿ ಅವರ ಸಂಪರ್ಕಿತ ವ್ಯಕ್ತಿಗಳ ಪತ್ತೆಗೆ ಫೋನ್ ಕಾಲ್ ಡೀಟೇಲ್ಸ್ ಮೊರೆ ಹೋಗುತ್ತಿದ್ದೇವೆ ಎಂದು ಡಿಸಿ ಶಿವಮೂರ್ತಿ ಸ್ಪಷ್ಟಪಡಿಸಿದರು.