ETV Bharat / state

ರಾಜ್ಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ನಟಿಮಣಿಯರ ವಿಚಾರಣೆ ನಡೆಸಿದ ಲೇಡಿ ತನಿಖಾಧಿಕಾರಿ - Sandalwood drug scandal case

ಆರೋಪಿಗಳೆಲ್ಲಾ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಹಾಕುತ್ತಿರುವ ಹಿನ್ನೆಲೆ, ಪೇಪರ್ ವರ್ಕ್​ನಲ್ಲಿ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ. ಹೀಗಾಗಿ, ಇಂದು ಫುಲ್ ಡೇ ವಿಚಾರಣೆ ನಡೆಸ್ತಾರೆ ಅಂದುಕೊಂಡಿದ್ದ ನಟಿಮಣಿಯರಿಗೆ, ಕೇವಲ ಮಧ್ಯಾಹ್ನ 1 ಗಂಟೆ ಹಾಗೂ ಸಂಜೆ ಅರ್ಧ ಗಂಟೆ ಮಾತ್ರವೇ ವಿಚಾರಣೆ ಮಾಡಲಾಗಿದೆ..

Investigation of actress Ragini and Sanjana by CCB
ಸಿಸಿಬಿ
author img

By

Published : Sep 9, 2020, 8:20 PM IST

ಬೆಂಗಳೂರು : ಸ್ಯಾಂಡಲ್​ವುಡ್ ಡ್ರಗ್ಸ್‌ ಮಾಫಿಯಾದಲ್ಲಿ ಭಾಗಿಯಾದ ಆರೋಪದಲ್ಲಿ ನಟಿಯರಾದ ಸಂಜನಾ ಹಾಗೂ ರಾಗಿಣಿಯನ್ನು ಮಡಿವಾಳದ ಎಫ್‌ಎಸ್​ಎಲ್​ಗೆ ಕರೆದೊಯ್ದು ವಿಚಾರಣೆ ನಡೆಸಬೇಕೆಂದು ಪ್ಲಾನ್ ಮಾಡಿದ್ದ ಸಿಸಿಬಿ ಅಧಿಕಾರಿಗಳು, ಇಂದು ರಾಜ್ಯ ಮಹಿಳಾ ಸಾಂತ್ವನ ಕೇಂದ್ರದಲ್ಲೇ ವಿಚಾರಣೆ ನಡೆಸಿದ್ದಾರೆ‌.

ಮಧ್ಯಾಹ್ನ ಸುಮಾರು 1 ಗಂಟೆ ಕಾಲ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿಯ ವಿಚಾರಣೆ ನಡೆಸಿದ ಅಧಿಕಾರಿ ಅಂಜುಮಾಲಾ,‌ ಕೆಲ ಮಾಹಿತಿಗಳನ್ನಷ್ಟೇ ಪಡೆದುಕೊಂಡು ಕೋರ್ಟ್​ಗೆ ತೆರಳಿದ್ದಾರೆ. ಆದರೆ, ಈ ವೇಳೆ ರಾಗಿಣಿ ಹಾಗೂ ಸಂಜನಾ ತಮ್ಮದೇ ನೋವನ್ನು ತನಿಖೆಯಲ್ಲಿ ಹೇಳಿದ್ದಾರೆ. ಇಬ್ಬರಿಗೂ ಗ್ಯಾಸ್ಟ್ರಿಕ್‌ ಸಮಸ್ಯೆ ಉಂಟಾದ ಕಾರಣ ತಮ್ಮ ನೋವನ್ನು ಮಹಿಳಾ ತನಿಖಾಧಿಕಾರಿಗಳ ಬಳಿ ತೋಡಿಕೊಂಡಿದ್ದಾರೆ‌. ಸಾಂತ್ವನ ಕೇಂದ್ರದ ಪಕ್ಕದಲ್ಲೇ ಆಸ್ಪತ್ರೆ ಇರುವ ಕಾರಣ ಸುತ್ತಮುತ್ತ ಸೊಳ್ಳೆಗಳ ಕಾಟ ಇದೆ. ಹೀಗಾಗಿ, ಬೇರೆ ಕಡೆ ಶಿಫ್ಟ್ ಮಾಡ್ತೀರಾ ಎಂದು ರಾಗಿಣಿ ಸಿಸಿಬಿ ಮಹಿಳಾಧಿಕಾರಿ ಬಳಿ ಮನವಿ ಮಾಡಿದ್ದಾರೆ.

ರಾಗಿಣಿ ಆರೋಗ್ಯ ವಿಚಾರಿಸಲು ಅವರ ವಕೀಲ ರವಿಶಂಕರ್ ಕೂಡ ಭೇಟಿ ಕೊಟ್ಟಿದ್ದರು. ಆರೋಪಿಗಳೆಲ್ಲಾ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಹಾಕುತ್ತಿರುವ ಹಿನ್ನೆಲೆ ಪೇಪರ್ ವರ್ಕ್​ನಲ್ಲಿ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ. ಹೀಗಾಗಿ, ಇಂದು ಫುಲ್ ಡೇ ವಿಚಾರಣೆ ನಡೆಸ್ತಾರೆ ಅಂದುಕೊಂಡಿದ್ದ ನಟಿಮಣಿಯರಿಗೆ, ಕೇವಲ ಮಧ್ಯಾಹ್ನ 1 ಗಂಟೆ ಹಾಗೂ ಸಂಜೆ ಅರ್ಧ ಗಂಟೆ ಮಾತ್ರವೇ ವಿಚಾರಣೆ ಮಾಡಲಾಗಿದೆ. ಕೋರ್ಟ್​ಗೆ ದಾಖಲೆ ಕೊಡುವಾಗ ಸ್ಪಷ್ಟ ಹಾಗೂ ಬಲವಾದ ದಾಖಲೆಗಳನ್ನು ಕೊಡ ಬೇಕಾಗುತ್ತದೆ.

ಹೀಗಾಗಿ, ಪೇಪರ್ ವರ್ಕ್​ನಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಸಿಕ್ಕಿರುವ ಸಾಕ್ಷಿಗಳ ಬಗ್ಗೆ ಒಂದೊಂದೇ ಪೇಪರ್ ವರ್ಕ್ ನಡೆಯುತ್ತಿದೆ. ಈಗಾಗಲೇ ರಾಗಿಣಿಯ ಎರಡು ದಿನದ ಕಸ್ಟಡಿ ಅವಧಿ ಮುಗಿದಿದೆ. ಇನ್ನು ಮೂರು ದಿನ ಮಾತ್ರ ಬಾಕಿ ಉಳಿದಿದೆ. ಇತ್ತ ಸಂಜನಾಗೆ ನಾಲ್ಕು ದಿನ ಮಾತ್ರ ಬಾಕಿ ಇದೆ. ಸದ್ಯ ಇಂದು ಒಂದು ದಿನದ ಮಟ್ಚಿಗೆ ನಿಟ್ಟುಸಿರು ಬಿಟ್ಟಂತಾಗಿದೆ.

ನಟಿ ರಾಗಿಣಿ ಬಂಧನದ ದಿನದಿಂದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಪೋಷಕರು ಭೇಟಿ ನೀಡುತ್ತಿದ್ದಾರೆ. ಇಂದು ಕೂಡ ಭೇಟಿಯಾಗಿ ಮಾತನಾಡಿಸಿ ತೆರಳಿದ್ದಾರೆ. ಇತ್ತ ಸಂಜನಾ ಅರೆಸ್ಟ್ ಆದ ಬಳಿಕ, ಸಂಜನಾ ‌ತಂದೆ-ತಾಯಿ ಬಂದಿಲ್ಲ. ಸದ್ಯ ಸಂಜನಾ ತಾಯಿ ದೇವನಹಳ್ಳಿಯ ತಮ್ಮನ ಮನೆಯಲ್ಲಿದ್ದಾರೆ. ಪೋಷಕರ ಭೇಟಿ ನಿರೀಕ್ಷೆಯಲ್ಲಿದ್ದ ಸಂಜನಾಗೆ ಇಂದು ಬೇಸರವಾಗಿದೆ.‌ ನಾಳೆ ಮತ್ತೆ ಸಿಸಿಬಿ ಅಧಿಕಾರಿಗಳು ನಟಿಮಣಿಯರ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.