ETV Bharat / state

ಅಕ್ರಮ ಗಣಿಗಾರಿಕೆ ವಿರುದ್ಧ ಸೂಕ್ತ ತನಿಖೆ ನಡೆಯುತ್ತಿದೆ: ಸಚಿವ ಮುರುಗೇಶ್ ನಿರಾಣಿ

ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ಎಷ್ಟೇ ಪ್ರಭಾವಿಗಳು ಇದರ ಹಿಂದಿದ್ದರೂ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮುರುಗೇಶ್​ ನಿರಾಣಿ ಹೇಳಿದ್ದಾರೆ.

Bangalore
ಅಕ್ರಮ ಗಣಿಗಾರಿಕೆ ವಿರುದ್ಧ ಸೂಕ್ತ ತನಿಖೆ ನಡೆಯುತ್ತಿದೆ: ಸಚಿವ ಮುರುಗೇಶ್ ನಿರಾಣಿ
author img

By

Published : Mar 16, 2021, 7:50 PM IST

ಬೆಂಗಳೂರು: ಅಕ್ರಮ ಗಣಿಗಾರಿಕೆ ವಿರುದ್ಧ ಸೂಕ್ತ ತನಿಖೆ ನಡೆಯುತ್ತಿದೆ. ಇಲ್ಲಿ ಭ್ರಷ್ಟಾಚಾರ ಇದೆ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ನಿಯಮ 68ರ ಅಡಿ ವಿಧಾನ ಪರಿಷತ್​ನಲ್ಲಿ ಚಿಕ್ಕಬಳ್ಳಾಪುರ ಭಾಗದ ಅಕ್ರಮ ಗಣಿಗಾರಿಕೆ ಕುರಿತ ಚರ್ಚೆಗೆ ಉತ್ತರಿಸಿದ ಅವರು, ಶೇ. 40ರಷ್ಟು ಅಧಿಕಾರಿ, ಸಿಬ್ಬಂದಿ ಕೊರತೆಯಿದೆ. ಇದನ್ನು ತುಂಬಿಕೊಳ್ಳಬೇಕು. ಗಣಿಗಾರಿಕೆ ಅಕ್ರಮದಲ್ಲಿ ತೊಡಗಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ಎಷ್ಟೇ ಪ್ರಭಾವಿಗಳು ಇದರ ಹಿಂದಿದ್ದರೂ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸುಧಾರಣೆ ಸವಾಲಿನದ್ದಾಗಿದೆ. ಆದರೂ ‌ಪ್ರಯತ್ನ ಮುಂದುವರೆಸಿದ್ದೇವೆ. ವಿವಿಧ ಇಲಾಖೆಯ ಪರವಾನಗಿ ಬೇಕು. ಎಲ್ಲರ ನಿರಪೇಕ್ಷಣಾ ಪತ್ರ ಸಿಗಬೇಕಿದೆ. ಇದಕ್ಕೆ ಕಾಲಾವಕಾಶ ಹಿಡಿಯಲಿದೆ. ಇದಕ್ಕಾಗಿ ಹೊಸ ಕೈಗಾರಿಕಾ ನೀತಿ ತರುತ್ತಿದ್ದೇವೆ. ಸರಳೀಕರಣ ಹಾಗೂ ಸುಗಮ ಆಗಿರಬೇಕು. ಸರ್ಕಾರಕ್ಕೆ ಆದಾಯ ಬರಬೇಕು. ಕಾಯ್ದೆ ಅಂತಿಮ ಆಗುವ ಮುನ್ನ ಪ್ರತಿಪಕ್ಷ ನಾಯಕರೂ ಸೇರಿದಂತೆ ಎಲ್ಲರಿಗೂ ಕರಡು ಪ್ರತಿ ಕಳಿಸುತ್ತೇನೆ. ಬದಲಾವಣೆಗೆ ಸೂಚನೆ ಸಿಕ್ಕರೆ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.

ವಿವಿಧ ಸರಳೀಕೃತ ಕ್ರಮ ಕೈಗೊಳ್ಳುತ್ತೇವೆ. ಕಡಿಮೆ ಸ್ಥಳಾವಕಾಶದಲ್ಲಿ ಗಣಿಗಾರಿಕೆ ಮಾಡುವವರಿಗೆ ಸ್ಕೂಲ್ ಆಫ್ ಮೈನಿಂಗ್ ಆರಂಭಿಸಿ ತರಬೇತಿ ನೀಡುತ್ತೇವೆ. ಗಣಿಗಾರಿಕೆ ಅಕಾಡೆಮಿ ಸ್ಥಾಪಿಸುವ ಗುರಿ ನಮ್ಮದು. ಹಂತ ಹಂತವಾಗಿ ಮಾಡುತ್ತೇವೆ. ಗಣಿಗಾರಿಕೆ ಮಾಡುವವರು 5-10 ಕೋಟಿ ಹಣ ಹೂಡಿ ಗಣಿಗಾರಿಕೆ ಆರಂಭಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಕೆಲಸ ನಿಂತಿದೆ. ಅವರಿಗೆ ಸಮಸ್ಯೆಯಾಗುತ್ತಿದೆ. ಲೈಸೆನ್ಸ್ ಪ್ರಕ್ರಿಯೆ ಆನ್​ಲೈನ್​​ ಮೂಲಕ ಮಾಡಿದರೂ ಕಾಲಾವಕಾಶ ಹಿಡಿಯಲಿದೆ. ಆದಾಗ್ಯೂ ಸಾಕಷ್ಟು ತ್ವರಿತವಾಗಿ ಕ್ರಮಕ್ಕೆ ಮುಂದಾಗುತ್ತೇವೆ.

ಮರಳು ನಿಯಮ ಜಾರಿಗೆ ತರುವ ಚಿಂತನೆ ಸಹ ಇದೆ. ದ್ವಿಗುಣ ಸಮಸ್ಯೆ ನಿವಾರಣೆ ಆಗಲಿದೆ. ಲಕ್ಷಾಂತರ ಮನೆಗಳಿಗೆ ಉಚಿತವಾಗಿ ಮರಳು ನೀಡಿಕೆ ಆಗಲಿದೆ. ಈ ಚಿಂತನೆ ಇದೆ. 10 ಲಕ್ಷ ರೂ. ಮೇಲ್ಪಟ್ಟ ಮೊತ್ತದ ಮನೆ ಕಟ್ಟುವಾಗ ಎರಡು ಹಂತದಲ್ಲಿ ರಾಯಲ್ಟಿ ಕಟ್ಟಿಸಿಕೊಳ್ಳುವ ಕಾರ್ಯ ಮಾಡುತ್ತೇವೆ. ಇದಿನ್ನೂ ಚಿಂತನೆಯ ಹಂತದಲ್ಲಿದೆ. ಆದಷ್ಟು ಬೇಗ ಆರಂಭವಾಗಲಿದೆ.

ಜಲ್ಲಿ ಕ್ರಷರ್ ನಿಲ್ಲಿಸಿದ್ದು, ಪಕ್ಕದ ತಮಿಳುನಾಡು, ಆಂಧ್ರ ಪ್ರದೇಶದಿಂದ ಅನಿಯಮಿತವಾಗಿ ಜಲ್ಲಿ ತರಿಸಲಾಗುತ್ತಿದೆ. ಇದರಿಂದ ಯಾವುದೇ ತೆರಿಗೆ ಆದಾಯ ಸರ್ಕಾರಕ್ಕೆ ಸಿಗುತ್ತಿಲ್ಲ. ಇದಕ್ಕೂ ಹೊಸ ನಿಯಮ ರೂಪಿಸುವ ಚಿಂತನೆ ನಡೆಸಿದ್ದೇವೆ. ಆದಷ್ಟು ಬೇಗ ಗಣಿಗಾರಿಕೆ ನಿಯಮ ಸರಳೀಕರಣಗೊಳಿಸಿ ಕ್ರಮ ಕೈಗೊಳ್ಳುತ್ತಿದ್ದೇವೆ. ಪಾರದರ್ಶಕತೆಗಾಗಿ ಸಂಬಂಧಿಸಿದವರ ಜತೆ ಚರ್ಚೆ ನಡೆಸುತ್ತೇವೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಶೇ. 100ರಷ್ಟು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಸಿಒಡಿ ತನಿಖೆ ನಡೆದಿದೆ. ಕಾರಣರಾದವರ ಬಂಧನವಾಗಿದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಚಿಕ್ಕಬಳ್ಳಾಪುರದಲ್ಲಿ ಘಟನೆ ನಂತರ ಭೇಟಿ ನೀಡಿ ಸಭೆ ನಡೆಸಿದ್ದೇವೆ. ಕೇಸ್​ ದಾಖಲಾಗಿದ್ದು, ಕೆಲವರ ಬಂಧನವಾಗಿದೆ. ಪೊಲೀಸ್ ಇಲಾಖೆ ವತಿಯಿಂದ ಕ್ರಮಕ್ಕೆ ಸೂಚಿಸಿದ್ದೇವೆ. ಜಿಲ್ಲಾಧಿಕಾರಿ ಮೂಲಕ ಸೂಚನೆ ಕೊಡಲಾಗಿದೆ. ಗಣಿಗಾರಿಕೆ ಮಾಲೀಕರು, ಸಾಗಾಣಿಕೆ ಮಾಡಿದವರು, ಮಾರಾಟ ಮಾಡಿದವರ ವಿರುದ್ಧ ಎಫ್ಐಆರ್ ಆಗಿದ್ದು, ಬಂಧಿಸಲಾಗಿದೆ.

ಅಕ್ರಮ ಸಂಗ್ರಹ ಇದ್ದರೆ 8 ದಿನದಲ್ಲಿ ವಾಪಸ್ ನೀಡಿದರೆ ಪ್ರಕರಣ ದಾಖಲಿಸುವುದಿಲ್ಲ ಎಂದಿದ್ದೇವೆ. ಆದರೆ ಬೇರೆಡೆ ಎಸೆಯಲು ಹೋದಾಗ ದುರ್ಘಟನೆ ನಡೆದಿದೆ. ಹೆಚ್ಚಿನವರು ಹೆದರುತ್ತಿದ್ದಾರೆ. ಬೆಂಗಳೂರಿನಲ್ಲಿ ಗಣಿ ಮಾಲೀಕರ ಜತೆ ಸಭೆ ನಡೆಸುತ್ತಿದ್ದೇನೆ. ಮಾಸಾಂತ್ಯಕ್ಕೆ ಎಲ್ಲರಿಗೂ ಮನವರಿಕೆ ಮಾಡುತ್ತೇವೆ ಎಂದು ಸಚಿವ ಮುರುಗೇಶ್ ನಿರಾಣಿ ಭರವಸೆ ಇತ್ತರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.