ETV Bharat / state

ಡೆಲಿವರಿ ಬಾಯ್ ಸೋಗಿನಲ್ಲಿ ಡ್ರಗ್ಸ್ ಪೂರೈಕೆ: ಬೆಂಗಳೂರಲ್ಲಿ ಅಂತರ್‌ರಾಜ್ಯ ದಂಧೆಕೋರರ ಬಂಧನ

author img

By

Published : Nov 8, 2022, 2:26 PM IST

ಡೆಲಿವರಿ ಬಾಯ್ ಸೋಗಿನಲ್ಲಿ ಮಾದಕ ಸರಬರಾಜು. ಡಿ.ಜೆ ಹಳ್ಳಿ ಪೊಲೀಸರಿಂದ ಅಂತರ್ ರಾಜ್ಯ ದಂಧೆಕೋರರ ಬಂಧನ.

Interstate drug peddler arrested in Bengaluru
ಆಸೀಫ್ ಬಂಧಿತ ಆರೋಪಿ

ಬೆಂಗಳೂರು: ಮಾದಕ ದಂಧೆಯ ವಿರುದ್ಧ ಬೆಂಗಳೂರು ಪೊಲೀಸರ ಕ್ರಮ ಕಟ್ಟುನಿಟ್ಟಾದಂತೆ ದಂಧೆಕೋರರು ಪರ್ಯಾಯ ಮಾರ್ಗ ಕಂಡುಕೊಳ್ಳಲು ಆರಂಭಿಸಿದ್ದಾರೆ‌. ಆನ್‌ಲೈನ್ ಆರ್ಡರ್ ಡೆಲಿವರಿ ರೀತಿ ಗಾಂಜಾ ಸರಬರಾಜು ಮಾಡುತ್ತಿದ್ದ ಅಂತರ್ ರಾಜ್ಯ ಮಾದಕ ಸರಬರಾಜುಗಾರನನ್ನು ಡಿ.ಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಕೋಜಿಕ್ಕೋಡ್ ಮೂಲದ ಆಸೀಫ್ ಬಂಧಿತ ಆರೋಪಿ. ಆಂಧ್ರ ಪ್ರದೇಶದ ವಿಶಾಖಪಟ್ಟಣಂನಿಂದ ಗಾಂಜಾ ತರುತ್ತಿದ್ದ ಈತ ಬೆಂಗಳೂರಿನಲ್ಲಿ ಗಿರಾಕಿಗಳಿಂದ ಹಣವನ್ನು ತನ್ನ ಖಾತೆಗೆ ಹಾಕಿಸಿಕೊಳ್ಳುತ್ತಿದ್ದ. ಬಳಿಕ ಆನ್‌ಲೈನ್ ಡೆಲಿವರಿ ಬಾಯ್ ನಂತೆ ಗಾಂಜಾ ಪಾರ್ಸಲ್ ತಂದು ನಿರ್ದಿಷ್ಟ ಸ್ಥಳದಲ್ಲಿ ಇಡುತ್ತಿದ್ದ ಎಂದು ತಿಳಿದು ಬಂದಿದೆ. ಸದ್ಯ ಬಂಧಿತನಿಂದ 5.50 ಲಕ್ಷ ಮೌಲ್ಯದ 9 ಕೆ.ಜಿ 400 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ‌.

Interstate drug peddler arrested in Bengaluru
ಜಪ್ತಿ ಮಾಡಲಾದ ಮಾದಕ ವಸ್ತು

ಆನ್‌ಲೈನ್ ಮಾದಕ ದಂಧೆಯ ಮೇಲೆ ಕಣ್ಣಿಟ್ಟ ಸಿಸಿಬಿ: ಮಾದಕ ದಂಧೆಕೋರರ ಹೊಸ ತಂತ್ರದ ಬಗ್ಗೆ ಸುಳಿವು ಪತ್ತೆಗಾಗಿ ಸಿಸಿಬಿ ಪೊಲೀಸರು ತನಿಖೆಗಿಳಿದಿದ್ದಾರೆ‌. ಫುಡ್ ಡೆಲಿವರಿ ಆ್ಯಪ್​​ನಂತೆ ಆ್ಯಪ್ ಆಧಾರಿತ ಡ್ರಗ್ಸ್ ಜಾಲದ ಮೇಲೆ ಸಿಸಿಬಿ ಪೊಲೀಸರು ವಿಶೇಷ ತಂಡದ ಮೂಲಕ ನಿಗಾ ಇಡಲಾರಭಿಸಿದ್ದಾರೆ. ಹೇಗೆ ಆ್ಯಪ್ ಮೂಲಕ ಮಾದಕ ಸರಬರಾಜು ಆಗುತ್ತಿದೆ?, ಪ್ಯಾಕಿಂಗ್ ಎಲ್ಲಿ ಆಗುತ್ತಿದೆ ಎನ್ನುವುದರ ಬಗ್ಗೆ ಕೂಲಂಕುಷವಾಗಿ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಕೇರಳದಿಂದ ಮಂಗಳೂರಿಗೆ ಮಾದಕವಸ್ತು ಸಾಗಣೆ, ಮೂವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.