ETV Bharat / state

ಬಿಬಿಎಂಪಿ ಆಡಳಿತಾಧಿಕಾರಿಗಳಿಂದ ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮಕ್ಕೆ ಸೂಚನೆ - ವಾರ್ಡ್ಸ್​ ಸಮಿತಿ ಸಭೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್​ಗಳಲ್ಲಿ ಪ್ರತಿ ತಿಂಗಳು ಮೊದಲ ಮತ್ತು 3ನೇ ಶನಿವಾರ ವಾರ್ಡ್ ಮಟ್ಟದಲ್ಲಿ ವಾರ್ಡ್ಸ್​ ಸಮಿತಿ ಸಭೆ ನಡೆಯಲಿದ್ದು, ಇಂದು ಆಡಳಿತಾಧಿಕಾರಿಗಳು ಹೊಯ್ಸಳ ನಗರ ವಾರ್ಡ್-80ಕ್ಕೆ ಭೇಟಿ ನೀಡಿದರು.

Instruction to take Action against unauthorized building by the Policy Administrator
ಪಾಲಿಕೆ ಆಡಳಿತಾಧಿಕಾರಿಯಿಂದ ಅನಧಿಕೃತ ಕಟ್ಟಡದ ವಿರುದ್ಧ ಕ್ರಮಕ್ಕೆ ಸೂಚನೆ
author img

By

Published : Nov 7, 2020, 9:21 PM IST

ಬೆಂಗಳೂರು: ವಾರ್ಡ್ ವ್ಯಾಪ್ತಿಯ ವಸತಿ ಪ್ರದೇಶದಲ್ಲಿ ಸಾಕಷ್ಟು ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಅದನ್ನು ತಡೆಗಟ್ಟಲು ಸೂಕ್ತ ಕ್ರಮ ವಹಿಸಬೇಕು. ಅಲ್ಲದೆ ಅನಧಿಕೃತ ಕಟ್ಟಡಗಳ ನಿರ್ಮಾಣದ ಬಗ್ಗೆ ನಿಗಾ ವಹಿಸಬೇಕು. ಪಾಲಿಕೆ, ಬೆಸ್ಕಾಂ ಹಾಗೂ ಜಲ ಮಂಡಳಿ ಇತರೆ ಸಂಸ್ಥೆಗಳ ಜೊತೆ ಸಮನ್ವಯದಿಂದ ಕೆಲಸ ಮಾಡಿದರೆ ತ್ವರಿತವಾಗಿ ಸಮಸ್ಯೆಗಳು ಬಗೆಹರಿಯಲಿವೆ. ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಂಡು ಸ್ಥಳೀಯ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿಕೊಂಡರು.

Instruction to take Action against unauthorized building by the Policy Administrator
ಪಾಲಿಕೆ ಆಡಳಿತಾಧಿಕಾರಿಯಿಂದ ಅನಧಿಕೃತ ಕಟ್ಟಡದ ವಿರುದ್ಧ ಕ್ರಮಕ್ಕೆ ಸೂಚನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್​ಗಳಲ್ಲಿ ಪ್ರತಿ ತಿಂಗಳು ಮೊದಲ ಮತ್ತು 3ನೇ ಶನಿವಾರ ವಾರ್ಡ್ ಮಟ್ಟದಲ್ಲಿ ವಾರ್ಡ್ಸ್​ ಸಮಿತಿ ಸಭೆ ನಡೆಯಲಿದ್ದು, ಇಂದು ಆಡಳಿತಾಧಿಕಾರಿಗಳು ಹೊಯ್ಸಳನಗರ ವಾರ್ಡ್-80ಕ್ಕೆ ಭೇಟಿ ನೀಡಿದರು. ಈ ವೇಳೆ ವಾರ್ಡ್-80ರ ನೋಡಲ್ ಅಧಿಕಾರಿ ಹಾಗೂ ಅಧೀಕ್ಷಕ ಅಭಿಯಂತರರು(ಯೋಜನೆ-ಕೇಂದ್ರ) ಲೋಕೇಶ್, ಆರೋಗ್ಯ ವೈದ್ಯಾಧಿಕಾರಿ, ಪೋಲೀಸ್, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ವಾರ್ಡ್ ನಿವಾಸಿಗಳು ಮಾತನಾಡಿ, ವಾರ್ಡ್ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಇದೆ. ಸಮರ್ಪಕವಾಗಿ ಕಸ ವಿಂಗಡಣೆಯಾಗುತ್ತಿಲ್ಲ. ಈ ಸಮಸ್ಯೆಯನ್ನು ಕೂಡಲೇ ನಿವಾರಿಸಬೇಕು. ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರವನ್ನು ಕೂಡಲೇ ಸ್ಥಾಪಿಸಬೇಕು ಹಾಗೂ ಉದ್ಯಾನವನಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಬಗ್ಗೆ ಆಡಳಿತಗಾರರ ಮುಂದೆ ಪ್ರಸ್ತಾಪಿಸಿದರು.

ಇದೇ ಸಭೆಯಲ್ಲಿ ಇಂದಿರಾನಗರದ 17ನೇ ಸಿ ಮತ್ತು ಡಿ ಅಡ್ಡ ರಸ್ತೆಯಲ್ಲಿ ಜಲಮಂಡಳಿ ವತಿಯಿಂದ ರಸ್ತೆ ಅಗೆದು ಸಾಕಷ್ಟು ವಿಳಂಬವಾಗಿದ್ದರೂ ಸಹ ಇನ್ನೂ ರಸ್ತೆಯನ್ನು ಮರು ನಿರ್ಮಾಣ ಮಾಡದೆ ಇರುವುದರಿಂದ ನಿವಾಸಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅದನ್ನು ಕೂಡಲೇ ಸರಿಪಡಿಸಿಕೊಡುವಂತೆ ಮನವಿ ಮಾಡಿದರು.

ವಾರ್ಡ್ ವ್ಯಾಪ್ತಿಯ ವಸತಿ ಪ್ರದೇಶದಲ್ಲಿ ಸಾಕಷ್ಟು ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಅದನ್ನು ತಡೆಗಟ್ಟಲು ಸೂಕ್ತ ಕ್ರಮ ವಹಿಸಬೇಕು. ಅಲ್ಲದೆ ಅನಧಿಕೃತ ಕಟ್ಟಡಗಳ ನಿರ್ಮಾಣದ ಬಗ್ಗೆ ನಿಗಾ ವಹಿಸಬೇಕು. ಪಾಲಿಕೆ, ಬೆಸ್ಕಾಂ, ಹಾಗೂ ಜಲ ಮಂಡಳಿ ಇತರೆ ಸಂಸ್ಥೆಗಳ ಜೊತೆ ಸಮನ್ವಯದಿಂದ ಕೆಲಸ ಮಾಡಿದರೆ ತ್ವರಿತವಾಗಿ ಸಮಸ್ಯೆಗಳು ಬಗೆಹರಿಯಲಿವೆ. ಈ ಸಂಭಂದ ಸೂಕ್ತ ಕ್ರಮ ತೆಗೆದುಕೊಂಡು ಸ್ಥಳೀಯ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಸಭೆಯಲ್ಲಿ ಆಡಳಿತಗಾರರು ಮಾತನಾಡಿ, ಸ್ಥಳೀಯ ಸಮಸ್ಯೆಗಳನ್ನು ತ್ವರಿತವಾಗಿ ನಿವಾರಣೆ ಮಾಡುವ ಉದ್ದೇಶದಿಂದಲೇ ಸ್ಥಳೀಯರ ಸಮನ್ವಯದೊಂದಿಗೆ ವಾರ್ಡ್ ಸಮಿತಿ ಸಭೆಗಳನ್ನು ರಚಿಸಲಾಗಿರುತ್ತದೆ. ಇದರ ಸದುಪಯೋಗಪಡಿಸಿಕೊಳ್ಳಬೇಕು. ಪ್ರತೀ ವಾರ್ಡ್​ಗೆ ಒಬ್ಬ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ವಾರ್ಡ್ ವ್ಯಾಪ್ತಿಯಲ್ಲಿ ಕಂಡುಬರುವ ಪ್ರತಿನಿತ್ಯದ ಸಣ್ಣ-ಪುಟ್ಟ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೇ ನಿವಾರಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು.

ರಸ್ತೆ ಗುಂಡಿ, ಕಸ ತೆಗೆಯದಿರುವುದು, ಡೆಬ್ರೀಸ್ ಸಮಸ್ಯೆ, ಪಾದಚಾರಿ ರಸ್ತೆ ದುರಸ್ತಿ ಇತ್ಯಾದಿಗಳನ್ನು ಸ್ಥಳೀಯ ಹಂತದಲ್ಲಿಯೇ ಇತ್ಯರ್ಥಪಡಿಸಬೇಕು. ಈ ನಿಟ್ಟಿನಲ್ಲಿ ಪಾಲಿಕೆ, ಜಲ ಮಂಡಳಿ, ಬೆಸ್ಕಾಂ, ಪೊಲೀಸ್ ಅಧಿಕಾರಿಗಳು ಸಮನ್ವಯದಿಂದ ಇರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಮುಂದಾಗಬೇಕು ಎಂದು ಸೂಚನೆ ನೀಡಿದರು.

ಇಂದಿರಾನಗರ 17 ನೇ ಸಿ ಮತ್ತು ಡಿ ಅಡ್ಡ ರಸ್ತೆ ತಪಾಸಣೆ:

ಸಭೆಯಲ್ಲಿ ಪ್ರಸ್ತಾಪವಾದ ಇಂದಿರಾನಗರದ 17ನೇ ಸಿ ಮತ್ತು ಡಿ ಅಡ್ಡ ರಸ್ತೆಯಲ್ಲಿ ರಸ್ತೆ ಮರು ನಿರ್ಮಾಣದ ಕುರಿತು ಕೂಡಲೇ ಸ್ಥಳ ಪರಿಶೀಲನೆ ನಡೆಸಿದ ಆಡಳಿತಗಾರರು, ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.