ETV Bharat / state

ಈ ಟಿವಿ ಭಾರತ ಫಲಶೃತಿ: ಖಾಸಗಿ ವೈದ್ಯಕೀಯ ಸಂಸ್ಥೆಗಳಿಂದ 1135 ಬೆಡ್ ನೀಡಲು ಸೂಚನೆ - ಸರ್ಕಾರ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ಸಭೆ

ರಾಜ್ಯ ಸರ್ಕಾರ ಇಂದು ಖಾಸಗಿ ವೈದ್ಯಕೀಯ ಸಂಸ್ಥೆಗಳ ಜೊತೆ ಸಭೆ ನಡೆಸಿ, ಎರಡು ದಿನದೊಳಗೆ 1350 ಹಾಸಿಗೆಗಳನ್ನ ಕೋವಿಡ್ ಚಿಕಿತ್ಸೆಗೆ ನೀಡಬೇಕು ಎಂದು ಸೂಚಿಸಿದೆ.

instruction-given-to-private-medical-institutions-to-provide-bed

author img

By

Published : May 6, 2021, 5:23 PM IST

Updated : May 6, 2021, 5:36 PM IST

ಬೆಂಗಳೂರು: ನಿನ್ನೆ ಈ ಟಿವಿ ಭಾರತ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಸರ್ಕಾರಕ್ಕೆ 3,500 ಬೆಡ್ ನೀಡಬೇಕು ಎಂಬ ಸುದ್ದಿ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಇಂದು ಸರ್ಕಾರ ಖಾಸಗಿ ವೈದ್ಯಕೀಯ ಸಂಸ್ಥೆಗಳ ಜೊತೆ ಸಭೆ ನಡೆಸಿ ಎರಡು ದಿನದೊಳಗೆ 1,350 ಹಾಸಿಗೆಗಳನ್ನ ಕೋವಿಡ್ ಚಿಕಿತ್ಸೆಗೆ ನೀಡಬೇಕು ಎಂದು ಖಡಕ್ ಸೂಚನೆ ನೀಡಿದೆ.

ಸಭೆ ಬಳಿಕ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಶೇ. 75ರಷ್ಟು ಬೆಡ್ ಕೋವಿಡ್ ಸೊಂಕಿತರ ಚಿಕಿತ್ಸೆಗೆ ನೀಡಲು ಸೂಚಿಸಿದ್ದೇವೆ. ಇಂದು ಕಾಲೇಜು ಮುಖ್ಯಸ್ಥರ ಜೊತೆ ಚರ್ಚೆ ನಡೆಸಿದ್ದೇವೆ. ಬೆಡ್ ನೀಡಲು ಮೆಡಿಕಲ್ ಕಾಲೇಜುಗಳ‌ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ. ಆಕ್ಸಿಜನ್ ಬೆಡ್​ಗೆ ಹೆಚ್ಚು ಖಾರ್ಚಾಗಲಿದೆ ಎಂದಿದ್ದಾರೆ. ಖರ್ಚನ್ನು ಸರ್ಕಾರ ಭರಿಸುವ ಭರವಸೆಯನ್ನ ನೀಡಲಾಗಿದೆ. ಇನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಂದ 1,350 ಬೆಡ್ ಸರ್ಕಾರಕ್ಕೆ ಕೊಡಬೇಕು. ಈ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ಚರ್ಚಿಸಿ ಕೊಡುವಂತೆ ಸೂಚಿಸಿದ್ದೇವೆ ಎಂದರು.

ಈ ಟಿವಿ ಭಾರತ ಫಲಶೃತಿ

3500 ಹಾಸಿಗೆಗಳು ಇರೋದು ನಿಜ, ಆದರೆ ತಾಯಿ-ಮಕ್ಕಳ , ಕೋವಿಡ್ ಅಲ್ಲದ ಹಾಸಿಗೆಗಳನ್ನ ಇದರಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ 1350 ಬೆಡ್ ಮಾತ್ರ ಸರ್ಕಾರಕ್ಕೆ 2 ದಿನಗಲ್ಲಿ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ರೋಗಿಗಳು ನರಳುತ್ತಿದ್ದರೂ 3500 ಬೆಡ್​ಗಳನ್ನು ಸರ್ಕಾರಕ್ಕೆ ನೀಡದ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು..

ಈವರೆಗೂ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಒಟ್ಟು 6,534 ಹಾಸಿಗೆಗಳನ್ನ ಸರ್ಕಾರಕ್ಕೆ ನೀಡಿದ್ದಾರೆ. ಇನ್ನು 1135 ಬೆಡ್ ಬಾಕಿ ಇದೆ. ಆ ಪೈಕಿ 342 ಸಾಮಾನ್ಯ ಹಾಸಿಗೆ, 552 ಎಚ್ ಡಿ ಯು, 103 ಐ ಸಿ ಯು, 38 ವೆಂಟಿಲೇಟರ್ ಬೆಡ್ ನೀಡಬೇಕು ಎಂದು ಅಶೋಕ್ ವಿವರಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ ಆಕ್ಸಿಜನ್ ಬೆಡ್​ಗಳಿಗೆ ಶೇ. 75ರಷ್ಟು ಖರ್ಚನ್ನು ಸರ್ಕಾರ ಭರಿಸಲಿದೆ. ಸ್ಟೆಪ್ ಡೌನ್ ಆಸ್ಪತ್ರೆಗಳನ್ನ ಸ್ಥಾಪಿಸಲು ನಿರ್ಧಾರ ಮಾಡಿದ್ದೇವೆ. 5000 ಸಾವಿರ ಬೆಡ್​ಗಳಿಗೆ ಸ್ಟೆಪ್ ಡೌನ್ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಲ್ಪಿಸ್ತೇವೆ. ವಸತಿ ನಿಲಯಗಳು, ಹಾಲ್​ಗಳಲ್ಲಿ ಬೆಡ್ ವ್ಯವಸ್ಥೆ ಕಲ್ಪಿಸ್ತೇವೆ ಎಂದರು.

ನಂತರ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, 3ರಿಂದ ನಾಲ್ಕು ಲಕ್ಷ ಲಸಿಕೆ ಸ್ಟಾಕ್ ಇದೆ. ಒಂದು ಕೋಟಿ ಜನರಿಗೆ ಈಗಾಗಲೇ ಲಸಿಕೆ ಕೊಟ್ಟಿದ್ದೇವೆ. ಹೆಚ್ಚಿನ ಲಸಿಕೆಯನ್ನು ಕೇಂದ್ರದಿಂದ ತರಸಿಕೊಳ್ಳಲು ಕೇಂದ್ರ ಆರೋಗ್ಯ ಮಂತ್ರಿಗಳ ಜೊತೆ ಸಂಪರ್ಕದಲ್ಲಿದ್ದೇವೆ. ಕೇಂದ್ರದಿಂದ 18 ವರ್ಷದ ಮೇಲಿನವರಿಗೆ ಲಸಿಕೆ ಬಂದಿವೆ. ಗುಜರಾತ್ ಮಾತ್ರವಲ್ಲ ಮಹಾರಾಷ್ಟ್ರಕ್ಕೂ ಜಾಸ್ತಿ ಲಸಿಕೆ ಬಂದಿದೆ. ಇದು ಮಲತಾಯಿ ದೋರಣೆಯಾ ಎಂದು ಪ್ರಶ್ನಿಸಿದರು.

Last Updated : May 6, 2021, 5:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.