ETV Bharat / state

ಇನ್​ಸ್ಟಾಗ್ರಾಂ ಲವ್​​: ಯುವತಿ ನಂಬಿಸಿ 2 ಲಕ್ಷ ರೂ. ಎಗರಿಸಿದ ನಯವಂಚಕ' - ನ್ಯಾಯಕ್ಕಾಗಿ ಯುವತಿ ಅಳಲು - man flirts women and cheating 2 lakhs

ಹಂತ ಹಂತವಾಗಿ 2 ಲಕ್ಷ ರೂ. ನಗದು ಹಾಗೂ 6 ಗ್ರಾಂ. ಚಿನ್ನದ ಉಂಗುರ ಪಡೆದುಕೊಂಡು ಪಾಂಡಿಚೇರಿಗೂ ಕರೆಸಿಕೊಂಡಿದ್ದ. ಎಲ್ಲ ಮುಗಿದ ಮೇಲೆ ನಿನ್ನ ಜೊತೆಗೆ ಮದುವೆಯಾಗಲು ಪೋಷಕರು ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ, ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಸಬೂಬು ಹೇಳಿದ್ದ. ಅಲ್ಲದೇ, ಪ್ರೀತಿಸಿರುವ ವಿಚಾರವನ್ನೇ ಇಟ್ಟುಕೊಂಡು ಎಲ್ಲಿಗಾದರೂ ಹೋದರೆ, ಜೀವ ಸಹಿತ ಬಿಡುವುದಿಲ್ಲ ಎಂದೂ ಬೆದರಿಕೆ ಹಾಕಿದ್ದಾನೆ.

ಯುವತಿಯ ಅಳಲು
ಯುವತಿಯ ಅಳಲು
author img

By

Published : Nov 30, 2020, 7:18 AM IST

ಬೆಂಗಳೂರು: ಇನ್​​ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಯುವತಿಯನ್ನು ಪ್ರೀತಿಯ ಬಲೆ ಬೀಳಿಸಿ, ಮದುವೆಯಾಗುವುದಾಗಿಯೂ ನಂಬಿಸಿ 2 ಲಕ್ಷ ರೂ. ಪಡೆದು ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಪಾಂಡಿಚೇರಿ ಮೂಲದ ಕಾರ್ತಿಕ್ ವಂಚನೆ ಮಾಡಿರುವ ವ್ಯಕ್ತಿ, ಈತ ನಗರದ ಎ. ನಾರಾಯಣಪುರ ನಿವಾಸಿಯಾಗಿರುವ ಯುವತಿಗೆ 2017ರಲ್ಲಿ ಇನ್​ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ. ಪರಿಚಯ ಫೋನ್​ ನಂಬರ್​​ ವಿನಿಮಯಕ್ಕೆ ದಾರಿ ಮಾಡಿಕೊಟ್ಟಿದೆ. ಬಳಿಕ ನಿತ್ಯ ವ್ಯಾಟ್ಸ್‌ಆ್ಯಪ್​ನಲ್ಲಿ ಕುಶಲೋಪರಿ ವಿಚಾರಿಸುತ್ತಿದ್ದ. 2018ರಲ್ಲಿ ಶಾಪಿಂಗ್ ಮಾಲ್‌ವೊಂದರಲ್ಲಿ ಇಬ್ಬರು‌ ನೇರವಾಗಿ ಭೇಟಿಯಾಗಿದ್ದರು. ತಾನು ಯೂನಿಟ್ ಇನ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬಾಣಸವಾಡಿಯಲ್ಲಿ ಕಚೇರಿಯಿದೆ ಎಂದು ಯುವತಿಗೆ ಪ್ರೇಮ ನಿವೇದನೆ ಮಾಡಿದ್ದು, ಮದುವೆಯಾಗುವುದಾಗಿ ಹೇಳಿದ್ದ. ಇದಕ್ಕೆ ಯುವತಿ ಒಪ್ಪಿಗೆ ಸೂಚಿಸಿದ್ದಳು. ಇದಾದ ಬಳಿಕ ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ತಿಕ್ ಬೆಂಗಳೂರಿಗೆ ಬಂದು ಭೇಟಿಯಾಗಿ ಹೋಗುತ್ತಿದ್ದ. ಮೈಸೂರು ಪ್ರವಾಸಕ್ಕೆ ಕೂಡಾ ಕರೆದೊಯ್ದಿದ್ದ.

ಈ ಅವಧಿಯಲ್ಲಿಯೇ ಹಂತ ಹಂತವಾಗಿ 2 ಲಕ್ಷ ರೂ. ನಗದು ಹಾಗೂ 6 ಗ್ರಾಂ. ಚಿನ್ನದ ಉಂಗುರ ಪಡೆದುಕೊಂಡು ಪಾಂಡಿಚೇರಿಗೂ ಕರೆಸಿಕೊಂಡಿದ್ದ. ಎಲ್ಲ ಮುಗಿದ ಮೇಲೆ ನಿನ್ನ ಜೊತೆಗೆ ಮದುವೆಯಾಗಲು ಪೋಷಕರು ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ, ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಸಬೂಬು ಹೇಳಿದ್ದ. ಅಲ್ಲದೇ, ಪ್ರೀತಿಸಿರುವ ವಿಚಾರವನ್ನೇ ಇಟ್ಟುಕೊಂಡು ವಿಷಯ ಎಲ್ಲಿಗಾದರೂ ಹೋದರೆ, ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಖಾಸಗಿ ಫೊಟೋಗಳನ್ನು ಜಾಲತಾಣದಲ್ಲಿ ಅಪ್ಲೋಡ್​ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ.

ಇತ್ತೀಚೆಗೆ ಫೋನ್ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಯುವತಿ ದೂರಿನಲ್ಲಿ ವಿವರಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.