ETV Bharat / state

ಬೆಂಗಳೂರು: ರೌಡಿಶೀಟರ್​ಗಳಿಗೆ ಖಡಕ್​ ವಾರ್ನಿಂಗ್ ಕೊಟ್ಟ ಇನ್ಸ್​ಪೆಕ್ಟರ್ - ಮಾಗಡಿ ಇನ್ಸ್​ಪೆಕ್ಟರ್​ ಶ್ರೀನಿವಾಸ್​

ನಗರದಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಪೊಲೀಸ್‌ ಇನ್ಸ್​ಪೆಕ್ಟರ್ ಶ್ರೀನಿವಾಸ್ ಅವರು ರೌಡಿಗಳನ್ನು ಠಾಣೆಗೆ ಕರೆಸಿ ಪ್ರಮಾಣವಚನ ಬೋಧಿಸಿದರು.

inspector-warning-to-rowdy-sheeter
ರೌಡಿ ಶೀಟರ್​ಗಳಿಗೆ ಖಡಕ್​ ವಾರ್ನಿಂಗ್ ಕೊಟ್ಟ ಇನ್ಸ್​ಪೆಕ್ಟರ್
author img

By

Published : Nov 1, 2021, 8:22 PM IST

ಬೆಂಗಳೂರು: ಮಾಗಡಿ ರಸ್ತೆ ಪೊಲೀಸರು ರೌಡಿಶೀಟರ್​​ಗಳನ್ನು ಠಾಣೆಗೆ ಕರೆಸಿ ಖಡಕ್ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬವಿದೆ. ಹೀಗಾಗಿ, ರೌಡಿಶೀಟರ್​ಗಳ ಬಗ್ಗೆ ಮಾಹಿತಿ ಪಡೆದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಇನ್ಸ್​ಪೆಕ್ಟರ್ ಶ್ರೀನಿವಾಸ್ ಪ್ರಮಾಣವಚನ ಬೋಧಿಸಿದರು. ಈ ವೇಳೆ 20ಕ್ಕೂ ಹೆಚ್ಚು ರೌಡಿಶೀಟರ್​ಗಳಿದ್ದರು.

ರೌಡಿಶೀಟರ್​ಗಳಿಗೆ ಎಚ್ಚರಿಕೆ

ದರ್ಶನ್ ಅಲಿಯಾಸ್ ಮೂರಡಿ, ಅಮೀರ್ ಪಾಷ್, ರಾಜ್​ಕುಮಾರ್, ವೇಣುಗೋಪಾಲ್ ಸೇರಿ 20ಕ್ಕೂ ಹೆಚ್ಚು ರೌಡಿಶೀಟರ್​ಗಳನ್ನು ದೀಪಾವಳಿ ಹಬ್ಬದ ಸಂದರ್ಭ ಅಪರಾಧ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲು ಠಾಣೆಗೆ ಕರೆಸಲಾಗಿತ್ತು.

ಪ್ರತಿ ಬಾರಿ ತಿಂಗಳ ಮೊದಲನೇ ವಾರದಲ್ಲಿ ರೌಡಿಶೀಟರ್‌ಗಳನ್ನು ಠಾಣೆಗೆ ಕರೆಯಿಸಿ ವಾರ್ನಿಂಗ್ ನೀಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ: ಮಾಜಿ ಭೂಗತ ದೊರೆ ದಿ.ಮುತ್ತಪ್ಪ ರೈ ಪುತ್ರನ ವಿರುದ್ಧ ದೂರು ನೀಡಿದ ರಿಯಲ್ ಎಸ್ಟೇಟ್ ಉದ್ಯಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.