ETV Bharat / state

ಗ್ಯಾಂಬಿಯಾದಲ್ಲಿ ಭಾರತ ಉತ್ಪಾದಿಸಿದ ಸಿರಪ್‌ನಿಂದ 66 ಮಕ್ಕಳ ಸಾವು, ದೊಡ್ಡ ಅವಮಾನ: ನಾರಾಯಣಮೂರ್ತಿ - ಇನ್ಫೋಸಿಸ್‌ ಪ್ರಶಸ್ತಿ

ಭಾರತವು ಕೋವಿಡ್‌ ಉತ್ಪಾದಿಸುವ ಹಾಗೂ ದೇಶದ ಜನರಿಗೆ ಲಸಿಕೆ ಹಾಕುವ ಸಾಧನೆ ಸಾಧಿಸಿದ್ದರೂ ಸಂಶೋಧನಾ ಕ್ಷೇತ್ರದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ ಎಂದು ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

infosys-founder-narayana-murthy-spoke-about-the-death-of-66-children-in-gambia
ಗ್ಯಾಂಬಿಯಾದಲ್ಲಿ ಭಾರತ ಉತ್ಪಾದಿಸಿದ ಸಿರಪ್‌ನಿಂದ 66 ಮಕ್ಕಳ ಸಾವು, ದೊಡ್ಡ ಅವಮಾನ: ನಾರಾಯಣಮೂರ್ತಿ
author img

By

Published : Nov 17, 2022, 6:13 PM IST

ಬೆಂಗಳೂರು: ಭಾರತದಲ್ಲಿ ಉತ್ಪಾದಿಸಿದ ಕೆಮ್ಮು ಸಿರಪ್‌ನಿಂದಾಗಿ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಸಾವನ್ನಪ್ಪಿದ್ದು, ಇದು ದೇಶಕ್ಕೆ ಆದ ದೊಡ್ಡ ಅವಮಾನ ಎಂದು ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಹೇಳಿದ್ದಾರೆ.

ಇನ್ಫೋಸಿಸ್‌ ಸೈನ್ಸ್‌ ಫೌಂಡೇಶನ್‌ ವತಿಯಿಂದ ಆರು ಜನ ಗಣ್ಯರಿಗೆ ಇನ್ಫೋಸಿಸ್‌ ಪ್ರಶಸ್ತಿ ಘೋಷಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣಮೂರ್ತಿ, ಭಾರತವು ಕೋವಿಡ್‌ ಉತ್ಪಾದಿಸುವ ಹಾಗೂ ದೇಶದ ಜನರಿಗೆ ಲಸಿಕೆ ಹಾಕುವ ಸಾಧನೆಯನ್ನು ಸಾಧಿಸಿದ್ದರೂ ಸಹ ಸಂಶೋಧನಾ ಕ್ಷೇತ್ರದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ ಎಂದರು.

ಇದನ್ನೂ ಓದಿ: 6 ವಿಭಾಗಗಳಲ್ಲಿ ಪ್ರಶಸ್ತಿ ಘೋಷಿಸಿದ ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌

100 ಕೋಟಿ ಕೋವಿಡ್‌ 19 ಲಸಿಕೆಗಳನ್ನು ತಯಾರಿಸಿದ ಮತ್ತು ಸರಬರಾಜು ಮಾಡಿದ ಕಂಪನಿಗಳನ್ನು ಶ್ಲಾಘಿಸಿದ ಅವರು, ಇದು ಅದ್ಭುತ ಸಾಧನೆಯಾಗಿದೆ. ಅಲ್ಲದೇ, ಪ್ರೊಫೆಸರ್‌ ಕಸ್ತೂರಿರಂಗನ್‌ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೊರತಂದಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.

ದೊಡ್ದ ಸವಾಲುಗಳು ಎದುರಿವೆ: ಪ್ರೊಫೆಸರ್‌ ಗಗನ್‌ದೀಪ್‌ ಕಾಂಗ್‌ ಸೇರಿದಂತೆ ಹಲವರು ಲಂಡನ್‌ನಲ್ಲಿರುವ ರಾಯಲ್ ಸೊಸೈಟಿ ಸಂಶೋಧಕರಾಗಿದ್ದಾರೆ. ಅಲ್ಲದೇ, ಪ್ರೊಫೆಸರ್‌ ಅಶೋಕ್‌ ಸೇನ್‌ ಮಿಲೇನಿಯಂ ಪ್ರಶಸ್ತಿ ಗೆದ್ದಿದ್ದಾರೆ. ಇದೆಲ್ಲವೂ ನಮಗೆ ಪ್ರೇರಣೆ ಹಾಗೂ ಸಂತಸದ ಘಟನೆಗಳಾಗಿವೆ. ಭಾರತದ ಸಂಪೂರ್ಣವಾಗಿ ಈಗ ಬೆಳವಣಿಗೆ ಹಂತದಲ್ಲಿದೆ. ಆದರೆ ನಮಗೆ ಇನ್ನೂ ದೊಡ್ಡ ಸವಾಲುಗಳಿವೆ ಎಂದು ನಾರಾಯಣಮೂರ್ತಿ ತಿಳಿಸಿದ್ದಾರೆ.

ಡೆಂಘೀ ಚಿಕೂನ್​​ ಗುನ್ಯಾ ರೋಗಗಳಿಗೆ ಲಸಿಕೆ ಇಲ್ಲ: 2020ರಲ್ಲಿ ಘೋಷಿಸಲಾದ ವಿಶ್ವವಿದ್ಯಾನಿಲಯದ ಜಾಗತಿಕ ಶ್ರೇಯಾಂಕದ ಟಾಪ್‌ 250ರಲ್ಲಿ ಭಾರತದ ಉನ್ನತ ಶಿಕ್ಷಣ ಸಂಸ್ಥೆಯ ಒಂದೇ ಒಂದು ಸಂಸ್ಥೆಯೂ ಇಲ್ಲ. ನಾವು ತಯಾರಿಸಿದ ಲಸಿಕೆಗಳು ಮುಂದುವರಿದ ದೇಶಗಳ ತಂತ್ರಜ್ಞಾನ ಆಧರಿಸಿ ಅಥವಾ ಅಭಿವೃದ್ಧಿ ಹೊಂದಿದ ಸಂಶೋಧನೆಯ ಆಧಾರದ ಮೇಲೆ ಜಗತ್ತು ಉತ್ತೇಜನಗೊಂಡಿದೆ.

ಆದರೆ, ಕಳೆದ 70 ವರ್ಷಗಳಿಂದ ನಮ್ಮ ಜನರನ್ನು ಕಾಡುತ್ತಿರುವ ಡೆಂಘೀ ಹಾಗೂ ಚಿಕೂನ್​​​ಗುನ್ಯಾ ರೋಗಗಳಿಗೆ ಇನ್ನೂ ಲಸಿಕೆಯನ್ನು ಕಂಡುಹಿಡಿಯಲಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಕುತೂಹಲ ಹುಟ್ಟುಹಾಕುವ ಕೊರತೆ: ತಕ್ಷಣದ ಸಮಸ್ಯೆಗಳನ್ನು ಪರಿಹರಿಸಲು ಭಾರತದಲ್ಲಿ ಸಂಶೋಧನೆಯನ್ನು ಬಳಸಲು ಚಿಕ್ಕ ವಯಸ್ಸಿನಲ್ಲಿಯೇ ಕುತೂಹಲವನ್ನು ಹುಟ್ಟುಹಾಕುವ ಕೊರತೆ ಶುದ್ಧ ಮತ್ತು ಅನ್ವಯಿಕ ಸಂಶೋಧನೆಗಳ ನಡುವೆ ಸಂಪರ್ಕ ಕಡಿತ, ಉನ್ನತ ಶಿಕ್ಷಣ ಸಂಸ್ಥಗಳಲ್ಲಿ ಅಸಮರ್ಪಕ ಅತ್ಯಾಧುನಿಕ ಸಂಶೋಧನಾ ಮೂಲಸೌಕರ್ಯ ಕಾರಣ ಎಂದು ಅನೇಕ ತಜ್ಞರು ಭಾವಿಸುತ್ತಾರೆ.

ಇದಕ್ಕೆ ಜಾಗತಿಕ ಸಂಶೋಧನಾ ಸಂಸ್ಥೆಗಳೊಂದಿಗೆ ಜ್ಞಾನ ಹಂಚಿಕೆಗಾಗಿ ಸಂಶೋಧನೆ ಮತ್ತು ಅಸಮರ್ಪಕ ವೇದಿಕೆಗಳನ್ನು ರಚಿಸುವಲ್ಲಿ ಸಾಕಷ್ಟು ಅನುದಾನಗಳು ಹಾಗೂ ವಿಳಂಬ ಧೋರಣೆಯೇ ಕಾರಣ ಎಂದು ಹೇಳಿದ್ದಾರೆ.

ಸಂಶೋಧನೆಗೆ ಹಣವು ಪ್ರಾಥಮಿಕ ಸಂಪನ್ಮೂಲವಲ್ಲ: ಆವಿಷ್ಕಾರ ಅಥವಾ ನಾವೀನ್ಯತೆಯಲ್ಲಿ ಯಶಸ್ಸಿಗೆ ಹಣವು ಪ್ರಾಥಮಿಕ ಸಂಪನ್ಮೂಲವಲ್ಲ ಎಂದ ನಾರಾಯಣಮೂರ್ತಿ, ಯಶಸ್ಸಿಗೆ ಎರಡು ನಿರ್ಣಾಯಕ ಅಂಶಗಳಿವೆ. ಅದರಲ್ಲಿ ಮೊದಲನೆಯದು ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಸಾಕ್ರೆಟಿಕ್ ಪ್ರಶ್ನೆಗಳ ಕಡೆಗೆ ಹೊಸ ದಿಗ್ದರ್ಶನದ ಬೋಧನೆ ಹಾಗೂ ತರಗತಿಗಳಲ್ಲಿ ಕಲಿತದ್ದನ್ನು ಉತ್ತೀರ್ಣರಾಗುವ ಬದಲು ತಮ್ಮ ಸುತ್ತಲಿನ ನೈಜ ಪ್ರಪಂಚದ ಸಮಸ್ಯೆಗಳಿಗೆ ತಾಳೆ ಹಾಕಿ ನೋಡುವುದಾಗಿದೆ.

ಎರಡನೇಯದಾಗಿ ಸಂಶೋಧಕರು ತಕ್ಷಣದ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸುವುದಾಗಿದೆ. ಅಂತಹ ಮನಸ್ಥಿತಿಯು ಅನಿವಾರ್ಯವಾಗಿ ದೊಡ್ಡ ಸವಾಲಗಳನ್ನು ಪರಿಹರಿಸಲು ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ರಾಜಕೀಯ ಬಿಡ್ತೀನಿ ಹೊರತು, ಮಂಡ್ಯ ಬಿಡಲ್ಲ: ಸಂಸದೆ ಸುಮಲತಾ ಅಂಬರೀಶ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.