ಬೆಂಗಳೂರು: ಅನರ್ಹ ಶಾಸಕರೆಲ್ಲ ಬಿಜೆಪಿಯಿಂದಲೇ ಸ್ಪರ್ಧಿಸಬೇಕು. ನಾವು ಬಿಜೆಪಿ ಸೇರುವುದು ಶಾಸ್ತ್ರವಷ್ಟೇ ಎಂದು ಅನರ್ಹ ಶಾಸಕ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಸಿಎಂ ಮನೆಗೆ ಭೇಟಿ ನೀಡಿದ ವೇಳೆಯಲ್ಲಿ ಮಾತನಾಡಿದ ಅವರು, ಜೆಡಿಎಸ್, ಕಾಂಗ್ರೆಸ್ನಲ್ಲಿಯೂ ಚುನಾವಣೆ ಸಂದರ್ಭದಲ್ಲಿ ಆಂತರಿಕ ಚುನಾವಣೆ ಸಮರ ನಡೆದಿದೆ. ಹಾಗೇ ಬಿಜೆಪಿಯಲ್ಲಿ ಉಪಚುನಾವಣೆ ಸಂದರ್ಭದಲ್ಲಿ ಕೆಲವರು ಟಿಕೆಟ್ ಆಕಾಂಕ್ಷಿಗಳು ಇದ್ದಾರೆ ಎಂದು ಸಮರ್ಥಿಸಿಕೊಂಡರು.
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರೇ ಸಮ್ಮಿಶ್ರ ಸರ್ಕಾರ ಕೆಡವಿದ ಮಹಾಭೂಪರು. ಸುಮ್ಮನೆ ನಮ್ಮ ವಿರುದ್ಧ ಆರೋಪ ಮಾಡಿರೋದು ಎಂದು ವಿಶ್ವನಾಥ್ ಹೇಳಿದರು.
ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಇಂದು ಸಂಜೆ ಹಾಗೂ ನಾಳೆಯೊಳಗಾಗಿ ತೀರ್ಪು ಹೊರಬೀಳಲಿದೆ. ನಮ್ಮ ಪರವಾಗಿ ಉತ್ತಮ ವಾದ ಮಂಡನೆಯಾಗಿದೆ. ನಾನು ಯಾವುದೇ ಆತಂಕವಿಟ್ಟುಕೊಂಡು ಸಿಎಂ ಭೇಟಿಯಾಗಲ್ಲಿ. ಕ್ಷೇತ್ರದ ಕೆಲಸದ ಸಂಬಂಧ ಬಂದಿದ್ದೇನೆ ಎಂದು ಹೇಳಿದರು.
ಉಪಚುನಾವಣೆಯಲ್ಲಿ ನಾನು ಅಥವಾ ನನ್ನ ಮಗ ಸ್ಪರ್ಧಿಸಬೇಕು ಎಂಬುದರ ಕುರಿತು ಇನ್ನೂ ನಿರ್ಧರಿಸಿಲ್ಲ. ನಮ್ಮ ಕ್ಷೇತ್ರದಲ್ಲಿ, ನಾವು ಸ್ಪರ್ಧಿಸಲು ಬಿಜೆಪಿ ನಾಯಕರ ವಿರೋಧವಿಲ್ಲ ಎಂದು ಇದೇ ವೇಳೆ ಹೆಚ್ ವಿಶ್ವನಾಥ್ ಅಭಿಪ್ರಾಯಪಟ್ಟರು.