ETV Bharat / state

ಕೈಗಾರಿಕೆಗಳು ರೈತರಿಂದ ನೇರವಾಗಿ ಜಮೀನು ಖರೀದಿಸಲು ಸಮ್ಮತಿ - Industries Buy Land directly from Farmers

ಹಲವು ವರ್ಷದ ಬೇಡಿಕೆಯಾದ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಇದೀಗ ನೆರವೇರಿದ್ದು, ಕೈಗಾರಿಕೆಗಳು ರೈತರಿಂದ ನೇರವಾಗಿ ಜಮೀನು ಖರೀದಿಗೆ ಸಮ್ಮತಿ ನೀಡಲಾಗಿದೆ.

industries
ಕೈಗಾರಿಕೆ
author img

By

Published : May 11, 2020, 4:56 PM IST

ಬೆಂಗಳೂರು: ಕರ್ನಾಟಕ ಸರ್ಕಾರ ಭೂಸುಧಾರಣೆಗಳ 1961 ಕಾಯ್ದೆಗೆ ತಿದ್ದುಪಡಿ ತಂದು ಈಗ ಕೈಗಾರಿಕೆಗಳು ರೈತರಿಂದ ನೇರವಾಗಿ ಜಮೀನು ಖರೀದಿಗೆ ಸಮ್ಮತಿ ಸೂಚಿಸಿದೆ.

ಕೈಗಾರಿಕೆಗಳ ಬಹುವರ್ಷದ ಬೇಡಿಕೆಯಾದ ಈ ತಿದ್ದುಪಡಿ ಈಗ ದೇಶದಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಪುನಶ್ಚೇತನ ಹೊಂದಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಕೈಗಾರಿಕೆಗಳು ಕಂದಾಯ ಇಲಾಖೆಯಿಂದ ಒಪ್ಪಿಗೆಯನ್ನು ಪಡೆದು ನೇರವಾಗಿ ರೈತರಿಂದ ಜಮೀನು ಖರೀದಿಗೆ ಮುಂದಾಗಬಹುದು. ಒಂದು ವೇಳೆ, ಕಂದಾಯ ಇಲಾಖೆಯ ಉಪ ಆಯುಕ್ತರು ಯಾವುದೇ ಆಕ್ಷೇಪಣೆಯನ್ನು 30 ದಿನಗಳ ಒಳಗೆ ಸೂಚಿಸದಿದ್ದರೆ ಜಮೀನು ಖರೀದಿ ಮಾಡಬಹುದು ಎಂದು ಪರಿಗಣಿಸಬಹುದು ಎಂದು ಈ ತಿದ್ದುಪಡಿ ಕಾಯ್ದೆ ವಿವರಿಸುತ್ತದೆ.

Land Amendment Act
ಅಧಿಸೂಚನ ಪತ್ರ

ಈ ಹಿಂದೆ ಕೈಗಾರಿಕೆಗಳು ಜಮೀನು ಖರೀದಿಯನ್ನು ಸರ್ಕಾರದ ಸಂಘ-ಸಂಸ್ಥೆಗಳಿಂದ ಮಾತ್ರ ಮಾಡಬಹುದಾಗಿತ್ತು ಆದರೆ, 2020ರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯ ಪ್ರಕಾರ ಮೂರು ವರ್ಷಗಳಲ್ಲಿ ಕೈಗಾರಿಕೆಗಳು ಜಮೀನು ಖರೀದಿ ಮಾಡುವ ಸಮಯ ಈಗ ಕೇವಲ 30 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ.

ಜನವರಿ 25 ರಂದು ಮುಖ್ಯಮಂತ್ರಿ ಯಡಿಯೂರಪ್ಪ, ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 109 ರಂದು ತಿದ್ದುಪಡಿ ಮಾಡಲಾಗುವುದು ಎಂದು ಹೇಳಿದ್ದರು. ಈಗ ಏಪ್ರಿಲ್ 27ರಂದು ಕರ್ನಾಟಕ ಸರ್ಕಾರದ ತಿದ್ದುಪಡಿ ಕಾಯ್ದೆಗೆ ರಾಜ್ಯಪಾಲ ವಜುಬಾಯಿ ವಾಲಾ ಅವರ ಅಂಕಿತ ಹಾಕಿದ್ದಾರೆ.

ಕಾಸಿಯಾ ಸಂಘದ ಅಧ್ಯಕ್ಷ ರಾಜು

ಆರ್ಥಿಕ ಪುನಶ್ಚೇತನಕ್ಕೆ ತಿದ್ದುಪಡಿ ನಾಂದಿಯಾಗಲಿದೆ:

ಕಾಯ್ದೆಯ ತಿದ್ದುಪಡಿ ಆಗಿರುವುದು ಸ್ವಾಗತಾರ್ಹ ಎಂದು ಕಾಸಿಯಾ ಹೇಳಿದ್ದು, ಕಾಸಿಯಾ ಸಂಘದ ಅಧ್ಯಕ್ಷ ರಾಜು ಮಾತನಾಡಿ ಆರ್ಥಿಕ ಪುನಶ್ಚೇತನಕ್ಕೆ ಈ ತಿದ್ದುಪಡಿ ಕಾಯ್ದೆ ನಾಂದಿಯಾಗಲಿದೆ. ಜಮೀನನ್ನು 30 ದಿನಗಳ ಒಳಗೆ ಕೈಗಾರಿಕೆಗೆ ಪರಿವರ್ತನೆ ಮಾಡಿ ಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.