ETV Bharat / state

2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಿ ಹೊರಹೊಮ್ಮಲಿದೆ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ - ಜಿ20ಯ ಸರಣಿ ಸಭೆಗಳು ದೆಹಲಿಯ ಹೊರಗೆ

ಪ್ರಧಾನ ಮಂತ್ರಿಗಳು ಕೇಂದ್ರ ಹಣಕಾಸು ಸಚಿವಾಲಯದ ಮೂಲಕ ಹಲವಾರು ಪ್ಯಾಕೇಜುಗಳನ್ನು ತಂದಿದ್ದಾರೆ ಮತ್ತು 20 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಆತ್ಮನಿರ್ಭರ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

india-will-emerge-as-a-developed-economy-by-2047-says-nirmala-sitharaman
2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಿ ಹೊರಹೊಮ್ಮಲಿದೆ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
author img

By

Published : Sep 29, 2022, 10:58 PM IST

ಬೆಂಗಳೂರು: ಸಬ್ ಕಾ ಪ್ರಯಾಸ್​​ನಿಂದ 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಎಫ್‌ಕೆಸಿಸಿಐನ 105ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮತ್ತು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಫೆಡರೇಶನ್ ನೀಡಿದ ಹಲವು ಸಲಹೆಗಳಿಗೆ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿದೆ. ಕೇಂದ್ರದಿಂದ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸುವುದರ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಧಾನ ಮಂತ್ರಿಗಳು ಕೇಂದ್ರ ಹಣಕಾಸು ಸಚಿವಾಲಯದ ಮೂಲಕ ಹಲವಾರು ಪ್ಯಾಕೇಜುಗಳನ್ನು ತಂದಿದ್ದಾರೆ ಮತ್ತು 20 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಆತ್ಮನಿರ್ಭರ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆರ್ಥಿಕತೆಯ ಬೆನ್ನೆಲುಬಾಗಿರುವ ಎಂಎಸ್‌ಎಂಇ ವಲಯಕ್ಕೆ ಅನುಕೂಲವಾಗುವಂತೆ ಮತ್ತು ಗರಿಷ್ಠ ಉದ್ಯೋಗವನ್ನು ಸೃಷ್ಟಿಸಲು ಹೆಚ್ಚಿನ ಪ್ಯಾಕೇಜ್‌ಗಳನ್ನು ಹೊರತರಲಾಗಿದೆ ಎಂದು ಮಾಹಿತಿ ನೀಡಿದರು.

india-will-emerge-as-a-developed-economy-by-2047-says-nirmala-sitharaman
2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಿ ಹೊರಹೊಮ್ಮಲಿದೆ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಭಾರತೀಯ ಫಾರ್ಮಾ ಕಂಪನಿಗಳಿಂದ ಲಸಿಕೆ ಅಭಿವೃದ್ಧಿ: ಕೋವಿಡ್ ಸಮಯದಲ್ಲಿ ಭಾರತೀಯ ಫಾರ್ಮಾ ಕಂಪನಿಗಳಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡುವ ಅತ್ಯಂತ ದಿಟ್ಟ ನಿರ್ಧಾರಕ್ಕೆ ಪ್ರಧಾನ ಮಂತ್ರಿ ಬಂದಿದ್ದರು. ಈ ಕಾರಣದಿಂದಾಗಿ ನಾವೆಲ್ಲರೂ ಸುಖವಾಗಿ ವಾಸಿಸುತ್ತಿದ್ದೇವೆ. 100 ಕೋಟಿಗೂ ಹೆಚ್ಚು ಭಾರತೀಯರಿಗೆ ಯಶಸ್ವಿಯಾಗಿ ಲಸಿಕೆ ನೀಡಲಾಗಿದೆ. ಹಲವು ದೇಶಗಳ ಜನರನ್ನು ಉಳಿಸಲು ಹಲವಾರು ದೇಶಗಳಿಗೆ ಲಸಿಕೆಗಳನ್ನು ರಫ್ತು ಮಾಡಲಾಗಿದೆ ಎಂದು ತಿಳಿಸಿದರು

ದಾಬಸ್ ಪೇಟೆಯಲ್ಲಿ ನಮ್ಮ ಉತ್ಕೃಷ್ಟತಾ ಕೇಂದ್ರ: ದಾಬಸ್​ ಪೇಟೆಯಲ್ಲಿ ನಮ್ಮ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು 5 ಕೋಟಿ ರೂಪಾಯಿಗಳ ಅನುದಾನವನ್ನು ಶಿಫಾರಸು ಮಾಡಿದ್ದಕ್ಕಾಗಿ ಸಿಎಂ ಬೊಮ್ಮಾಯಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಯೋಜನೆ ಅನೇಕ ಯುವಕರಿಗೆ ಕೌಶಲ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆಯಲು ಪ್ರಯಾಯೋಜನವಾಗಲಿದೆ ಎಂದು ಹೇಳಿದರು.

ಭಾರತದಿಂದ ಯಶಸ್ವಿ ಕೋವಿಡ್ ನಿರ್ವಹಣೆ: ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ನಿಂದಾಗಿ ಭಾರತದಲ್ಲಿ ಅನೇಕರು ಬಳಲಿದ್ದರೂ ಹಣದುಬ್ಬರ ನಿರ್ವಹಣೆ, ಲಸಿಕೆ ಹಾಕುವ ಕ್ರಿಯೆ ಮತ್ತು ಬಡವರಿಗೆ ಪರಿಹಾರವನ್ನು ಖಾತರಿಪಡಿಸುವುದು ಸೇರಿದಂತೆ ಹಲವು ವಿಚಾರದಲ್ಲಿ ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ದೇಶ ನಿಂತಿತ್ತು. ಕೋವಿನ್ ಅಪ್ಲಿಕೇಶನ್ ಮತ್ತು ಸಂಶೋಧನಾ ಸಂಸ್ಥೆಗಳಿಗೆ ಮನ್ನಣೆ ನೀಡಲಾಗಿತ್ತು.

ಹೆಚ್ಚಿನ ಜನರಿಗೆ ತ್ವರಿತವಾಗಿ ಪರಿಹಾರವನ್ನು ತಲುಪಿಸಲು, ಲಸಿಕೆ ಉತ್ಪಾದಿಸಲು ಹೆಚ್ಚಿಸಲು ಸಹಾಯ ಮಾಡಲಾಗಿತ್ತು. ಉತ್ಪಾದನೆ ಮತ್ತು ತ್ವರಿತವಾಗಿ ಕೋಟಿಗಟ್ಟಲೆ ಜನರಿಗೆ ಲಸಿಕೆ ಹಾಕಿಸುವಲ್ಲಿ ಯಶ ಕಂಡೆವು ಎಂದು ಹೇಳಿದರು.

ಅಭಿವೃದ್ಧಿ ಹೊಂದಿದ ಆರ್ಥಿಕತೆಯ ಕನಸು ನನಸಾಗಲಿದೆ: ಪ್ರಧಾನಮಂತ್ರಿಗಳಿಗೆ ಕರೆಯಾದ ಜೈ ವಿಜ್ಞಾನದ ಹೊರತಾಗಿ ಜೈ ಜವಾನ್, ಜೈ ಕಿಸಾನ್‌ಗೆ ಜೈ ಅನುಸಂಧಾನಕ್ಕೆ (ಆವಿಷ್ಕಾರಕ್ಕೆ) ಒತ್ತು ನೀಡಲಾಗಿದೆ. ಅಭಿವೃದ್ಧಿ ಹೊಂದಿದ ಆರ್ಥಿಕತೆಯ ಕನಸನ್ನು ನನಸಾಗಿಸಲು ಮುನ್ನಡೆಯಲಿದ್ದೇವೆ ಎಂದೂ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಅಟಲ್ ಇನ್ನೋವೇಶನ್ ಮಿಷನ್​ನಿಂದ ಟಿಂಕರಿಂಗ್ ಲ್ಯಾಬ್‌: ನೀತಿ ಆಯೋಗದ ಸಹಯೋಗದಲ್ಲಿ ಅಟಲ್ ಇನ್ನೋವೇಶನ್ ಮಿಷನ್ ಉತ್ತರ ಕನ್ನಡದಿಂದ ಮಂಗಳೂರಿನವರೆಗೆ ಶಾಲೆಗಳಲ್ಲಿ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಲು ಸಹಾಯ ಮಾಡಿದೆ. 2 ವಿಶ್ವವಿದ್ಯಾನಿಲಯಗಳಲ್ಲಿ ಇನ್ನೋವೇಶನ್ ಹಬ್‌ಗಳನ್ನು ಪ್ರಾರಭಿಸಲಾಗಿದೆ. ಸ್ಟಾರ್ಟ್-ಅಪ್‌ಗಳಿಗೆ ಮಾರ್ಗದರ್ಶನ ನೀಡುವ ಉನ್ನತ ನಾವೀನ್ಯತೆ ಕೇಂದ್ರವಾಗಿ ಮುಂದೆ ಐಐಎಸ್‌ಸಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಪ್ಟಿಕಲ್ ನೆಟ್‌ವರ್ಕ್​​ ಪಂಚಾಯತಿ ವ್ಯಾಪ್ತಿಯಲ್ಲಿ: ಆಪ್ಟಿಕಲ್ ನೆಟ್‌ವರ್ಕ್​ಗಳನ್ನು ಪಂಚಾಯತಿಗಳ ವ್ಯಾಪ್ತಿಯಲ್ಲಿ ಕನ್ನೆಕ್ಟ್ ಮಾಡಿರುವುದರಿಂದ ಯುವಕರು ಬೆಂಗಳೂರಿಗೆ ಬರಬೇಕಾಗಿಲ್ಲ. ಮನೆಯಿಂದ ಕೆಲಸ ಮಾಡುವ ಪರಿಕಲ್ಪನೆಯು ಉದ್ಯೋಗ ಸೃಷ್ಟಿಕರ್ತರಾಗಲು ಅನುವು ಮಾಡಿಕೊಡಲಿದೆ. ಆವಿಷ್ಕಾರಗಳಿಗೆ ಪ್ರೋತಾಹಿಸಲಿದೆ ಮತ್ತು ಇದರಿಂದ ಹೊಸ ಆರ್ಥಿಕತೆ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.

ಮುಂದಿನ ವರ್ಷ ರಾಗಿ ವರ್ಷ: ಕರ್ನಾಟಕವು ರಾಗಿ ಉತ್ಪಾದನೆಯಲ್ಲಿ ತನ್ನ ಪಾತ್ರವನ್ನು ವಿಸ್ತರಿಸಲು ಮತ್ತು ಹೊಸ ಮಾರುಕಟ್ಟೆಗಳಿಗೆ ಮುನ್ನುಗ್ಗಲು ಅಗಾಧವಾದ ಸಾಮರ್ಥ್ಯ ಹೊಂದಿದೆ. ಮುಂದಿನ ವರ್ಷವನ್ನು ರಾಗಿ ವರ್ಷವಾಗಿ ಆಚರಿಸುವ ಸಂದರ್ಭದಲ್ಲಿ ಪ್ಯಾಕೇಜಿಂಗ್ ಮತ್ತು ಸಂಸ್ಕರಣೆಯಲ್ಲಿ ಮೌಲ್ಯವರ್ಧನೆ ತರಲು ಸ್ಟಾರ್ಟ್ ಅಪ್​ಗಳು ಮುಂದಾಗಬೇಕು ಎಂದು ಕರೆ ನೀಡಿದರು.

ಜಿ20ಯ ಸರಣಿ ಸಭೆಗಳು ದೆಹಲಿಯ ಹೊರಗೆ: ಭಾರತವು ಮುಂದಿನ ವರ್ಷ ದೆಹಲಿಯ ಹೊರತಾಗಿ ಬೇರೆ ನಗರದಲ್ಲಿ ಜಿ20ಯ ಸರಣಿ ಸಭೆಗಳು ನಡೆಯಲಿದೆ. ಈ ಸುಸಂದರ್ಭವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ರಾಜ್ಯ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವ ಎಫ್​ಕೆಸಿಸಿಐಅನ್ನು ನಿರ್ಮಲಾ ಸೀತಾರಾಮನ್ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಜೀವ ರಕ್ಷಾ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಆಶಾ ಸ್ವಾಮಿ ಅವರಿಗೆ ವೈದ್ಯಕೀಯ ಆಂಬ್ಯುಲೆನ್ಸ್​ಅನ್ನು ಕೊಡುಗೆಯಾಗಿ ನೀಡಲಾಯಿತು.

ಇದನ್ನೂ ಓದಿ: ನಿಮ್ಮ ಕ್ರೆಡಿಟ್​ ಡೆಬಿಟ್​ ಕಾರ್ಡ್​​​​ ಸುರಕ್ಷತೆಗೆ ಬಂದಿದೆ ಟೋಕನೈಸೇಶನ್​.. ಏನಿದು ಆರ್​ಬಿಐನ ಹೊಸ ರೂಲ್ಸ್​​​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.