ಬೆಂಗಳೂರು: ಭಾರತೀಯ ಕಾರ್ಟೊಸಾಟ್ -2 ಎಫ್ ಮತ್ತು ರಷ್ಯಾದ ಕನೋಪಸ್-ವಿ ಭೂಮಿಯ ಕಕ್ಷೆಯ ಬಳಿ ತೀರಾ ಹತ್ತಿರದಲ್ಲಿದ್ದು ಅಪಾಯಕಾರಿ ಪರಿಸ್ಥಿತಿಯಲ್ಲಿವೆ. ಈ ಅಪಾಯಕಾರಿ ಪರಿಸ್ಥಿತಿಯನ್ನ ಇಸ್ರೋ ಮತ್ತು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್ ಸೂಕ್ಷ್ಮವಾಗಿ ಗಮನಿಸುತ್ತಿವೆ
ಈ ಸಂಬಂಧ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್ ಹೇಳಿಕೆ ನೀಡಿದ್ದು, TsNIIMashನ ಲೆಕ್ಕಾಚಾರದ ಪ್ರಕಾರ, ರಷ್ಯಾದ ರೋಸ್ಕೋಸ್ಮೋಸ್ನ ಒಂದು ಭಾಗ ಭೂಮಿಗೆ ಸಮೀಪದ ಜಾಗದಲ್ಲಿದೆ. ರಷ್ಯಾದ ಮತ್ತು ವಿದೇಶಿ ಉಪಗ್ರಹಗಳ ನಡುವಿನ ಕನಿಷ್ಠ ಅಂತರ 224 ಮೀಟರ್.
ಸಕ್ರಿಯ ಭಾರತೀಯ ಕಾರ್ಟೊಸಾಟ್ 2 ಎಫ್ ಉಪಗ್ರಹ 700 ಕೆಜಿಗಿಂತ ಹೆಚ್ಚು ತೂಕವಿದೆ. ಅಲ್ಲದೆ ರಷ್ಯಾದ ಕನೋಪಸ್-ವಿ ಬಾಹ್ಯಾಕಾಶ ನೌಕೆಯನ್ನು ಅಪಾಯಕಾರಿ ಮಟ್ಟದಲ್ಲಿ ಸಮೀಪಿಸಿದೆ. ಎರಡೂ ಬಾಹ್ಯಾಕಾಶ ನೌಕೆಗಳನ್ನು ಭೂಮಿಯ ದೂರಸ್ಥ ಸಂವೇದನೆಗಾಗಿ ವಿನ್ಯಾಸಗೊಳಿಸಲಾಗಿದೆ. ನಾವು (ಇಸ್ರೋ) 4 ದಿನಗಳಿಂದ ಇದನ್ನು ಟ್ರ್ಯಾಕ್ ಮಾಡುತ್ತಿದ್ದೇವೆ ಮತ್ತು ರಷ್ಯಾದ ಉಪಗ್ರಹವು 150 ಮೀಟರ್‌ಗಿಂತಲೂ ಹತ್ತಿರ ಬಂದಾಗ ಮಾತ್ರ ಕಾರ್ಯಚರಣೆಗಳಿಯಲಾಗುವುದು ಎಂದು ಇಸ್ರೋ ಮೂಲಗಳು ಈಟಿವಿ ಭಾರತಕ್ಕೆ ಖಚಿತಪಡಿಸಿವೆ. ಇಸ್ರೋ ಪ್ರಕಾರ, ಕಾರ್ನೋಪಸ್-ವಿ ಕಾರ್ಟೊಸಾಟ್‌ನಿಂದ 420 ಮೀಟರ್ ದೂರದಲ್ಲಿದೆ.