ETV Bharat / state

ಕೈಗಾರಿಕೆಗಳಲ್ಲಿ ಜೀವ ಭದ್ರತೆ ಕೊರತೆ: ಅಸುರಕ್ಷಿತ ಕ್ರಮದಿಂದ ಅವಘಡಗಳು ಸಂಭವ..! - ಕೈಗಾರಿಕೆಗಳು ಸುರಕ್ಷಿತ ಕ್ರಮಕ್ಕೆ ಆದ್ಯತೆ ನೀಡಬೇಕಿದೆ

ಕೈಗಾರಿಕೆಗಳಲ್ಲಿ ಶೇ.88ರಷ್ಟು ಅವಘಡಗಳು ಅಸುರಕ್ಷಿತ ಕ್ರಮಗಳಿಂದ ಸಂಭವಿಸುತ್ತಿದ್ದು, ಪ್ರತಿಯೊಂದು ಕೈಗಾರಿಕೆಗಳು ಸುರಕ್ಷಿತ ಕ್ರಮಕ್ಕೆ ಆದ್ಯತೆ ನೀಡಬೇಕಿದೆ..

Increasing industrial disasters in the state
ಕೈಗಾರಿಕೆಗಳಲ್ಲಿ ಜೀವ ಭದ್ರತೆ ಕೊರತೆ
author img

By

Published : Dec 1, 2020, 10:58 PM IST

ಬೆಂಗಳೂರು: ಕೈಗಾರಿಕೆಗಳಲ್ಲಿ ಜೀವ ಭದ್ರತೆಯ ಕೊರತೆ ಎದ್ದು ಕಾಣುತ್ತಿದ್ದು, ಅಸುರಕ್ಷಿತ ಕ್ರಮಗಳಿಂದ ಹೆಚ್ಚಿನ ಕಾರ್ಮಿಕರು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಕೈಗಾರಿಕೆಗಳಲ್ಲಿ ಶೇ.88ರಷ್ಟು ಅವಘಡಗಳು ಅಸುರಕ್ಷಿತ ಕ್ರಮಗಳಿಂದ ಸಂಭವಿಸುತ್ತಿರುವುದು ದುರಂತದ ಸಂಗತಿ.

ನವೆಂಬರ್ 10 ರಂದು ಬೆಂಗಳೂರಿನ ಮೈಸೂರು ರಸ್ತೆಯ ರಾಸಾಯನಿಕ ಕಾರ್ಖಾನೆ ಅವಘಡವು, ಕಾರ್ಮಿಕರ ಜೀವಕ್ಕೆ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ನಿವಾಸಿಗಳ ಪ್ರಾಣದ ಜೊತೆ ಚೆಲ್ಲಾಟ ಆಡಿತ್ತು. ಅದೃಷ್ಟವಶಾತ್ ಯಾರು ಪ್ರಾಣ ಕಳೆದುಕೊಳ್ಳದಿದ್ದರೂ ಕೆಲವರು ಗಂಭೀರ ಗಾಯಗೊಂಡಿದ್ದರು. ಈ ರೀತಿಯಾದ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿದ್ದರೂ ಕಾರ್ಖಾನೆಗಳಾಗಲಿ ಅಥವಾ ಸಂಬಂಧಪಟ್ಟ ಇಲಾಖೆಗಳಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ನಿಯಮಗಳ ಪ್ರಕಾರ ಕಾರ್ಖಾನೆಗಳು ಜನವಸತಿ ಪ್ರದೇಶಗಳಿಂದ ದೂರವಿರಬೇಕು. ಆದರೆ, ಲಕ್ಷಾಂತರ ಮಂದಿ ವಾಸವಿರುವ ಸ್ಥಳಗಳ ಸಮೀಪದಲ್ಲೇ ಕೈಗಾರಿಕೆಗಳು ನಿರ್ಮಾಣವಾಗುತ್ತಿರುವುದು ಹೆಚ್ಚಾಗುತ್ತಿದೆ.

ಕೈಗಾರಿಕೆಗಳಲ್ಲಿ ಜೀವ ಭದ್ರತೆ ಕೊರತೆ

ಇನ್ನು ನಾಲ್ಕು ಕೈಗಾರಿಕಾ ವಸಾಹತು ಪ್ರದೇಶಗಳಿರುವ ಬೆಳಗಾವಿಯಲ್ಲಿ 30 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೈಗಾರಿಕಾ ಪ್ರದೇಶಗಳಲ್ಲಿ ಸುರಕ್ಷಿತ ಕ್ರಮ, ಮೂಲಸೌಕರ್ಯ ವೃದ್ಧಿ ಹಾಗೂ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಅಪಘಾತ ಪ್ರಕರಣಗಳು ಕಂಡು ಬಂದಿಲ್ಲ.

ಬೆಳಗಾವಿ ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಧಿಕ ಕಾರ್ಖಾನೆಗಳು ಇಲ್ಲಿದ್ದು, ಸ್ಥಳೀಯರು ಹಾಗೂ ಬಿಹಾರ್, ಯುಪಿ ಭಾಗದ ಕಾರ್ಮಿಕರು ಕೆಲಸ ಮಾಡುತ್ತಾರೆ. ಬಹುತೇಕ ಕಂಪನಿಗಳಲ್ಲಿ ಕಾರ್ಮಿಕರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದ್ದು, ಪೊಲೀಸರು ಕೈಗಾರಿಕೆ ಪ್ರದೇಶಗಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದ ಯಾವೊಬ್ಬ ಕಾರ್ಮಿಕನೂ ಅಪಘಾತಕ್ಕೆ ಸಿಲುಕಿಲ್ಲ ಎಂದು ಬೆಳಗಾವಿ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಇನ್ನು ಪ್ರತಿಯೊಂದು ಕೈಗಾರಿಕೆಗಳು ಸುರಕ್ಷಿತ ಕ್ರಮಕ್ಕೆ ಆದ್ಯತೆ ನೀಡಬೇಕಿದ್ದು, ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಯಂತ್ರೋಪಕರಣಗಳ ಸುರಕ್ಷತೆ, ಕೆಲಸಗಾರರು ಯಂತ್ರೋಪಕರಣಗಳಲ್ಲಿ ಕೆಲಸ ಮಾಡುವಾಗ ವಹಿಸಬೇಕಾದ ಸುರಕ್ಷತಾ ಕ್ರಮಗಳು, ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಪ್ರತಿ ವರ್ಷ ವೈದ್ಯಕೀಯ ತಪಾಸಣೆ ಸೇರಿದಂತೆ ಅನೇಕ ರೀತಿಯ ಸುರಕ್ಷತ ಕ್ರಮಗಳನ್ನು ಜಾರಿಗೊಳಿಸಬೇಕು, ಅಂದಾಗ ಮಾತ್ರ ಇಂತಹ ಘಟನೆಗಳು ಕಡಿಮೆಯಾಗಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.