ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಆರ್ಭಟ ಹೇಗೆ ಇದೆ ಅನ್ನೋದು ಗೊತ್ತಿರುವ ವಿಷಯವೇ. ಕೇವಲ ಒಂದೇ ತಿಂಗಳಲ್ಲಿ ಇಡೀ ವಾತಾವರಣವೇ ಬದಲಾಗಿ ಹೋಗಿದೆ. ನೂರರಲ್ಲಿ ಇದ್ದ ಸೋಂಕಿತರ ಸಂಖ್ಯೆ ಇದೀಗ 50 ಸಾವಿರ ಗಡಿ ದಾಟಿಯಾಗಿದೆ. ಇದೊಂದು ರೀತಿಯ ಆತಂಕವಾದರೆ ಮತ್ತೊಂದು ಕಡೆ ರಾಜ್ಯದಲ್ಲಿ ಕೊರೊನಾ ಸಾವುಗಳು ಹೆಚ್ಚಾಗುತ್ತಿವೆ. ಅದು ಕೂಡ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವ ಮುನ್ನವೇ ಮನೆಯಲ್ಲೇ ಪ್ರಾಣ ಬಿಡುವಂತಾಗಿದೆ.
ಇಷ್ಟಕ್ಕೂ ಇದಕ್ಕೆ ಕಾರಣ, ಆರಂಭದಲ್ಲೇ ಎಚ್ಚರ ವಹಿಸದ ಪರಿಣಾಮ ಸಾವುಗಳು ಹೆಚ್ಚಾಗುತ್ತಿವೆ. ರೋಗದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಟೆಸ್ಟ್ ಮಾಡಿಸಿ ಚಿಕಿತ್ಸೆ ಪಡೆಯಬೇಕಿದೆ. ಇಲ್ಲದೇ ಹೋದರೆ ಸೋಂಕು ಗಂಭೀರ ಸ್ವರೂಪ ಪಡೆದುಕೊಳ್ಳಲ್ಲಿದೆ. ಆಕ್ಸಿಜನ್ ಸ್ಯಾಚುರೇಷನ್ ಕಡಿಮೆ ಆಗೋಕೆ ಶುರುವಾಗಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಮೃತರಾಗುತ್ತಿದ್ದಾರೆ.
ಕೊರೊನಾ ಸಾವಿನ "ಮನೆ":
ದಿನಾಂಕ | ಮನೆಯಲ್ಲಿ ಸಾವು | ಮಾರ್ಗಮಧ್ಯೆ ಸಾವು |
ಮೇ 1 | 15 | 3 |
ಮೇ 2 | 02 | 03 |
ಮೇ 3 | 02 | 03 |
ಮೇ 4 | 11 | 08 |
ಮೇ 5 | 00 | 14 |
ಮೇ 6 | 51 | 03 |
ಮೇ 7 | 58 | 11 |
ಒಟ್ಟು | 139 | 45 |
ಈಗಲೂ ಜನರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಭೀಕರ ಪರಿಸ್ಥಿತಿ ಸೃಷ್ಟಿಯಾಗಲಿದೆ. ಕೊರೊನಾ ಲಕ್ಷಣಗಳು ಕಾಣಿಸಿಕೊಂಡಾಗ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಿ, ಕೊರೊನಾ ಮುಂಜಾಗ್ರತಾ ಕ್ರಮ ಅನುಸರಿಸಿ.
ಜಸ್ಟ್ 7 ದಿನಗಳಲ್ಲಿ 2,285 ಸೋಂಕಿತರು ಕೊರೊನಾಗೆ ಬಲಿ:
ಇನ್ನು ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯು ಹೆಚ್ಚಾಗಿದ್ದು ಆತಂಕ ಮೂಡಿಸುತ್ತಿದೆ. ಯಾಕೆಂದರೆ 7 ದಿನಗಳಲ್ಲಿ ಬರೋಬ್ಬರಿ 2,285 ಸೋಂಕಿತರು ಮೃತರಾಗಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಎಲ್ಲ ಸಾಧ್ಯತೆ ಇದ್ದು, ಹೊರಗೆ ಎಲ್ಲೂ ಓಡಾಡದೆ ಸುರಕ್ಷಿತವಾಗಿ ಇರುವುದು ಮುಖ್ಯವಾಗಿದೆ.
ದಿನಾಂಕ | ಮೃತರ ಸಂಖ್ಯೆ |
ಮೇ 1 | 271 |
ಮೇ 2 | 217 |
ಮೇ 3 | 239 |
ಮೇ 4 | 292 |
ಮೇ 5 | 346 |
ಮೇ 6 | 328 |
ಮೇ 7 | 592 |
ಒಟ್ಟು | 2,285 |