ETV Bharat / state

ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ ಹೆಚ್ಚಳ: ಹೊಸ ಗೈಡ್​​ಲೈನ್ ಹೊರತಂದ ಸರ್ಕಾರ - ಹೊಸ ಗೈಡ್​​ಲೈನ್ ಹೊರತಂದ ಸರ್ಕಾರ

ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ ಹೆಚ್ಚಾದ ಬೆನ್ನಲ್ಲೇ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಂದ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಹೊಸ ಸುತ್ತೋಲೆ ಹೊರಡಿಸಿದೆ.

increasing-corona-case-in-maharashtra-government-gets-new-guideline
ಹೊಸ ಗೈಡ್​​ಲೈನ್ ಹೊರತಂದ ಸರ್ಕಾರ
author img

By

Published : Feb 20, 2021, 7:22 PM IST

ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ ಹೆಚ್ಚಾದ ಬೆನ್ನಲ್ಲೇ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಂದ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಹೊಸ ಸುತ್ತೋಲೆ ಹೊರಡಿಸಿದೆ.

ಶಿಕ್ಷಣ ಸಂಸ್ಥೆಗಳು, ಮೆಡಿಕಲ್ ಕಾಲೇಜುಗಳು, ನರ್ಸಿಂಗ್ ಕಾಲೇಜುಗಳು, ರೆಸಾರ್ಟ್, ಲಾಡ್ಜ್ ಗಳಿಗೆ ಬರುವ ಮಹಾರಾಷ್ಟ್ರದವರಿಗೆ ಪ್ರತ್ಯೇಕ ಸುತ್ತೋಲೆ ಹೊರಡಿಸಿದೆ‌.

ಏನಿದೆ ಸುತ್ತೋಲೆಯಲ್ಲಿ?
- ವಿಮಾನ ಪ್ರಯಾಣ ಮಾಡಿಕೊಂಡು ಬರುವ ಮಹಾರಾಷ್ಟ ಪ್ರಯಾಣಿಕರ ಕೋವಿಡ್ ನೆಗೆಟಿವ್ ರಿಪೋರ್ಟ್ ಅನ್ನು ಅಧಿಕಾರಿಗಳು ಪರಿಶೀಲನೆ ಮಾಡಲು ಆದೇಶ
- ಬಸ್ ಮೂಲಕ ಮಹಾರಾಷ್ಟ್ರ ಪ್ರಯಾಣ ಮಾಡುವವರ ಕೋವಿಡ್ ನೆಗೆಟಿವ್ ರಿಪೋರ್ಟ್ ಅನ್ನು ಬಸ್ ಕಂಡಕ್ಟರ್ ಚೆಕ್​ ಮಾಡಬೇಕು.
- ರೈಲಿನ ಮೂಲಕ ಪ್ರಯಾಣ ಮಾಡುವವರ ನೆಗೆಟಿವ್ ರಿಪೋರ್ಟ್ ಅನ್ನು ಟಿಟಿ ಚೆಕ್ ಮಾಡಬೇಕು
- 5 ಅಥವಾ 5 ಕ್ಕಿಂತ ಜಾಸ್ತಿ ಕೊರೋನಾ ಕೇಸ್ ಗಳು ಪತ್ತೆಯಾದರೆ ಅದು *ಕಂಟೈನ್ ಮೆಂಟ್ ಜೋನ್* ಎಂದು ಘೋಷಿಸಲಾಗತ್ತೆ
- ಕಂಟೇನ್ಮೆಂಟ್ ವಲಯ ಎಂದು ಘೋಷಣೆ ಮಾಡಿದ 7 ದಿನಗಳ ಬಳಿಕ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಾಗುವುದು.
- ಮಹಾರಾಷ್ಟ್ರದಿಂದ ಬಂದು ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡ್ತಿರುವವರು, ಕ್ಯಾಂಪಸ್ ಹಾಗೂ ಹಾಸ್ಟೆಲ್ ಗಳಲ್ಲಿ ಕಡ್ಡಾಯ ಮಾಸ್ಕ್ ಹಾಕುವುದು, ಸ್ಯಾನಿಟೈಸರ್ ಬಳಕೆ, ಅಂತರ ಕಾಪಾಡಿಕೊಳ್ಳದೇ ಇದ್ದರೆ ಸಂಸ್ಥೆಯ ಮಾಲೀಕರೇ ಹೊಣೆಗಾರರು
- ‎ಮಹಾರಾಷ್ಟ್ರದಿಂದ ಬರುವವರು ಶಿಕ್ಷಣಕ್ಕಾಗಿ, ಪ್ರವಾಸಕ್ಕಾಗಿ, ರೆಸಾರ್ಟ್‌ ಗಳಲ್ಲಿ ಉಳಿದುಕೊಳ್ಳುವವರಾಗಲೀ RT-PCR ನೆಗೆಟಿವ್ ರಿಪೋರ್ಟ್ ಕಡ್ಡಾಯ
- ಅದೂ ಕೂಡ 72 ಗಂಟೆಯ ಒಳಗೆ ಟೆಸ್ಟ್ ಮಾಡಿಸಿರಬೇಕು
- ಮಹಾರಾಷ್ಟ್ರದಿಂದ ಬಂದವರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದರೆ ಅವರ ಸ್ಯಾಂಪಲ್ ಜೀನೋಮ್ ಸೀಕ್ವೆನ್ಸಿಂಗ್ ಗೆ ಒಳಪಡಿಸಲಾಗುತ್ತೆ
- ‎ಮಹಾರಾಷ್ಟ್ರದಿಂದ ಬಂದು ವ್ಯಾಸಂಗ ಮಾಡ್ತಿರುವ ವಿದ್ಯಾರ್ಥಿಗಳನ್ನ ಪೋಷಕರು ಭೇಟಿ ಮಾಡಲು ಕೋವಿಡ್ ನೋಡಲ್ ಆಫೀಸರ್ ಅನುಮತಿ ಕಡ್ಡಾಯ
- ವಿದ್ಯಾರ್ಥಿಗಳು ಕೂಡ 72 ಒಳಗೆ ಟೆಸ್ಟ್ ಮಾಡಿರುವ ಕೋವಿಡ್ ನೆಗೆಟಿವ್ ರಿಪೋರ್ಟ್ ಸಲ್ಲಿಸಬೇಕು
- ‎ಹಾಸ್ಟೆಲ್ ನಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳು ಇರುವಂತೆ ನೋಡಿಕೊಳ್ಳುವುದು
- ಸೂಪರ್ ಸ್ಪ್ರೆಡರ್ ಕಾರ್ಯಕ್ರಮಗಳಿಗೆ ನಿಷೇಧ
- ಕಾಲೇಜು ಕ್ಯಾಂಪಸ್, ಹಾಸ್ಟೆಲ್ ಗಳಲ್ಲಿ ಗುಂಪುಗೂಡುವ ಕಾರ್ಯಕ್ರಮ, ಗುಂಪುಗೂಡಿ ಊಟ ಮಾಡುವುದಕ್ಕೆ ಬ್ರೇಕ್
- ಮಹಾರಾಷ್ಟ್ರದಿಂದ ಬಂದು ಹೋಗುವ ವಿದ್ಯಾರ್ಥಿಗಳಿದ್ದರೆ ಪ್ರತಿ 15 ದಿನಗಳಿಗೊಮ್ಮೆ ಕೋವಿಡ್ ಟೆಸ್ಟ್ ಕಡ್ಡಾಯ.
- ಕಳೆದ ಎರಡು ವಾರಗಳಿಂದ ಮಹಾರಾಷ್ಟ್ರದಿಂದ ಬಂದಿರುವವರು ಟೆಸ್ಟ್ ಮಾಡಿಸಿಕೊಳ್ಳಲು ಆದೇಶ.
- ಮಹಾರಾಷ್ಟ್ರದಿಂದ ಬಂದಿರುವವರು ಟೆಸ್ಟ್ ಮಾಡಿಸದೇ ಇರುವವರ ಬಗ್ಗೆ ಆಯಾ ಕಂಪನಿ, ಶಿಕ್ಷಣ ಸಂಸ್ಥೆಗಳು ಮಾಹಿತಿ ನೀಡಬೇಕು
- ಅಂತಹವರ ಟೆಸ್ಟ್ ಆಗುವ ತನಕ ಪ್ರತ್ಯೇಕವಾಗಿ ಇರುವಂತೆ ಸೂಚಿಸಬೇಕು.
- ನರ್ಸಿಂಗ್ ಕಾಲೇಜು, ಪ್ಯಾರಾಮೆಡಿಕಲ್ ಕಾಲೇಜುಗಳಲ್ಲಿ ಮತ್ತೊಮ್ಮೆ ಎಲ್ಲರಿಗೂ ಕೋವಿಡ್ ಟೆಸ್ಟ್
- ಮಹಾರಾಷ್ಟ್ರದಿಂದ ವ್ಯಾಸಂಗಕ್ಕಾಗಿ ಬಂದವರು ಪದೇ ಪದೆ ಊರಿಗೆ ಹೋಗುವಂತಿಲ್ಲ
- ಒಂದು ವೇಳೆ ಮಹಾರಾಷ್ಟ್ರಕ್ಕೆ ಹೋದರೆ ಬರುವಾಗ ಕಡ್ಡಾಯ ನೆಗೆಟಿವ್ ರಿಪೋರ್ಟ್ ತರಬೇಕು
- ‎ ಎಂಎನ್ ಸಿ ಕಂಪೆನಿ, ಹೋಟೆಲ್, ರೆಸಾರ್ಟ್, ಲಾಡ್ಜ್, ಹೋಮ್ ಸ್ಟೇ ನಲ್ಲಿ ಕೆಲಸ ಮಾಡ್ತಿರುವವರಿದ್ದರೆ ಅವರೇ ದುಡ್ಡಿನಲ್ಲೇ ಕೋವಿಡ್ ಟೆಸ್ಟ್ ಮಾಡಿಸಬೇಕು
- ಕಾಲೇಜ್ ಗಳಲ್ಲಿ, ನರ್ಸಿಂಗ್ ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್ ಹೆಚ್ಚಿಸುವಂತೆ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.