ETV Bharat / state

ಎಕ್ಸ್​​​​ಪ್ರೆಸ್ ವೇನಲ್ಲಿ ಅಪಘಾತ ಹೆಚ್ಚಳಕ್ಕೆ ಅತಿವೇಗವೇ ಕಾರಣ: ಜಾರಕಿಹೊಳಿ - ಕೊಡಗಿನಲ್ಲಿ ಭೂ ಪರಿವರ್ತನೆ

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ, ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದರು.

Satish Jarkiholi spoke.
ವಿಧಾನ ಪರಿಷತ್ ಕಲಾಪದಲ್ಲಿ ಸತೀಶ್ ಜಾರಕಿಹೊಳಿ ಮಾತನಾಡಿದರು.
author img

By

Published : Jul 5, 2023, 7:47 PM IST

ಬೆಂಗಳೂರು: ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ದಲ್ಲಿ ಅಪಘಾತ ಹೆಚ್ಚಳ ಸೇರಿದಂತೆ ಇರುವ ನ್ಯೂನತೆ ಕುರಿತು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತಂದಿದ್ದು, ಸುರಕ್ಷಿತ ಪ್ರಯಾಣ ಮತ್ತು ನ್ಯೂನತೆ ಸರಿಪಡಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಕ್ಸ್‌ಪ್ರೆಸ್‌ ವೇ ನಲ್ಲಿನ ಅಪಘಾತಗಳು ಹೆಚ್ಚಾಗುತ್ತಿವೆ, ಟೋಲ್​​ಗೆ ಜನರ ಗಲಾಟೆಯಾಗುತ್ತಿದೆ, ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಲ್ಲುತ್ತಿದೆ ಎಂದಿದ್ದಾರೆ ಈ ಸಂಬಂಧ ಈಗಾಗಲೇ ನಿನ್ನೆ ಸಭೆ ಕರೆದು ಚರ್ಚೆ ಮಾಡಿದ್ದೇವೆ.

ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಂತ್ರಣದಲ್ಲಿದೆ. ಲೋಪಗಳಿದ್ದಲ್ಲಿ ಅದನ್ನು ಪ್ರಾಧಿಕಾರದ ಜೊತೆ ಸಂಪರ್ಕ ಮಾಡಿ ಚರ್ಚಿಸಲಾಗುತ್ತದೆ. ಅಪಘಾತಕ್ಕೆ ಅತಿವೇಗ ಕಾರಣ, ಕೆಲವೆಡೆ ಅವೈಜ್ಞಾನಿಕ ಸಮಸ್ಯೆ ಇದೆ, ಎಲ್ಲ ನಿಯಂತ್ರಣ ಮಾಡಲು ಕ್ರಮ ವಹಿಸಲಾಗುತ್ತದೆ. ಎಲ್ಲ ಸಮಸ್ಯೆ ಕುರಿತು ಗಡ್ಕರಿ ಗಮನಕ್ಕೂ ತಂದಿದ್ದೇವೆ. ಪರಿಶೀಲಿಸಿ ಕ್ರಮ ವಹಿಸಲಿದ್ದೇವೆ ಎಂದು ಉತ್ತರಿಸಿದರು.

ವಸತಿ ಯೋಜನೆ ಅರ್ಜಿ ವಿಲೇವಾರಿಗೆ ಕ್ರಮ:ವಸತಿ ಯೋಜನೆಗಳಡಿ ಮಂಜೂರಾತಿಗಾಗಿ ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುತ್ತಿದೆ. ಹಿಂದಿನ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಗೆ ಹೋಲಿಸಿದಲ್ಲಿ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕಡಿಮೆ ಮನೆಗಳ ನಿರ್ಮಾಣವಾಗಿದೆ. ಹಾಗಾಗಿ ವಸತಿ ಯೋಜನೆಯಡಿ ಮನೆಗಳ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಲಾಗುತ್ತದೆ ಎಂದು ಸಚಿವ ಕೃಷ್ಣಬೈರೇಗೌಡ ಭರವಸೆ ನೀಡಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣಬೈರೇಗೌಡ, 519498 ಮನೆ ಕಳೆದ ನಾಲ್ಕು ವರ್ಷದಲ್ಲಿ ನಿರ್ಮಾಣವಾಗಿದೆ. ಆದರೆ, ಈ ಹಿಂದೆ 2014-2019 ರ ವರೆಗೆ 18 13 298 ಮನೆಗಳ ನಿರ್ಮಾಣ ಕೇವಲ ಐದು ವರ್ಷದಲ್ಲಿ ಆಗಿತ್ತು. ಅದಕ್ಕೆ ಹೋಲಿಸಿದಲ್ಲಿ ಈಗಿನ ನಾಲ್ಕು ವರ್ಷ ಕಡಿಮೆ ಮನೆಗಳ ನಿರ್ಮಾಣ ಆಗಿದೆ.

ಹಾಗಾಗಿ ವಸತಿ ಯೋಜನೆಗಳ ಅಡಿ ಮನೆಗಳ ನಿರ್ಮಾಣಕ್ಕೆ ವೇಗ ನೀಡಲಾಗುತ್ತದೆ. ಆಯ್ಕೆ ಸಮಿತಿಯಿಂದ ಅಂತಿಮಗೊಂಡು ಬಂದ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಲಾಗುತ್ತದೆ. ಇದೇ ವೇಳೆ, ಗ್ರಾಪಂನಲ್ಲಿ ಉತ್ತಮ ಕೆಲಸ ಮಾಡಿದವರಿಗೆ ಪ್ರಶಂಸೆ ನೀಡುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.

ಫ್ರೀ ಬಸ್ ನಿಂದ ಆಟೊ ಕ್ಯಾಬ್​​ಗೆ ತೊಂದರೆ ಇಲ್ಲ: ಶಕ್ತಿ ಯೋಜನೆ ಜಾರಿಯಿಂದಾಗಿ ಆಟೊ ಹಾಗೂ ಕ್ಯಾಬ್ ಚಾಲಕರಿಗೆ ತೊಂದರೆಯಾಗುತ್ತಿರುವ ಕುರಿತು ಯಾವುದೇ ದೂರು ಬಂದಿಲ್ಲ. ಯೋಜನೆ ಜಾರಿಯಾದ ತಕ್ಷಣದಲ್ಲಿ ಅದರ ಪರಿಣಾಮ ಗೊತ್ತಾಗಲ್ಲ. ಹಾಗಾಗಿ ಸ್ವಲ್ಪ ಸಮಯ ನೋಡಿ ಪರಿಶೀಲಿಸಿ, ಒಂದು ವೇಳೆ ನಮ್ಮ ಯೋಜನೆಯಿಂದ ಆಟೊ, ಕ್ಯಾಬ್​​ಗಳಿಗೆ ತೊಂದರೆಯಾಗುತ್ತಿದ್ದಲ್ಲಿ ಅವರಿಗೇನು ಮಾಡಬಹುದು ಎಂದು ಪರಿಶೀಲಿಸುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಬೋಜೆಗೌಡ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ, ತಿಂಗಳು ಕಾಯೋಣ, ಶಕ್ತಿ ಯೋಜನೆಯಿಂದ ಆಗುವ ಪರಿಣಾಮ ನೋಡಿ ಆಟೊ, ಕ್ಯಾಬ್ ಇತ್ಯಾದಿ ಸಮಸ್ಯೆ ಆಗಿದ್ದಲ್ಲಿ ಪರಿಹಾರಕ್ಕೆ ಕ್ರಮ ವಹಿಸಲಿದ್ದೇವೆ. ಶಕ್ತಿ ಯೋಜನೆಯಿಂದ ತೊಂದರೆಯಾಗಿದೆ ಎಂದು ಯಾವ ಆಟೊ ಚಾಲಕ ಹಾಗೂ ಚಾಲಕರ ಸಂಘ ನನ್ನನ್ನು ಭೇಟಿ ಆಗಿಲ್ಲ, ಇಲಾಖೆಗೂ ದೂರು ನೀಡಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಬಂದಿದೆ. ಯೋಜನೆ ಜಾರಿಯಾಗಿ ವಾರದಲ್ಲೇ ಎಲ್ಲ ಗೊತ್ತಾಗಲ್ಲ. ಒಂದು ತಿಂಗಳು ಕಾದು ನೋಡಿ ಪರಿಣಾಮ ಪರಿಶೀಲಿಸಿ ನಂತರ ಮುಂದೇನು ಮಾಡಬಹುದೆಂದು ವಿಚಾರಿಸುತ್ತೇವೆ ಎಂದು ಪ್ರತ್ಯುತ್ತರ ನೀಡಿದರು.

ಕೊಡಗಿನಲ್ಲಿ ಭೂ ಪರಿವರ್ತನೆ ಕಾನೂನು ಪರಿಶೀಲನೆ: ಕೊಡಗಿನಲ್ಲಿ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಿರುವುದರಿಂದ ಭೂ ಕುಸಿತದ ಆತಂಕ ವ್ಯಕ್ತವಾಗಿದೆ. ಈ ಸಂಬಂಧ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕುಶಾಲಪ್ಪ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣಬೈರೇಗೌಡ, ಕೊಡಗಿನಲ್ಲಿ ಭೂ ಕುಸಿತ ತಪ್ಪಿಸಲು ಭೂ ಪರಿವರ್ತನೆ ಬಿಗಿ ಕ್ರಮ ಇದೆ. 15-20 ಸೆಂಟ್ ಹೊರತು ಭೂ ಪರಿವರ್ತನೆ ಮಾಡುವಂತಿಲ್ಲ.

ಅದೂ ಕೂಡ ನಿವಾಸ ನಿರ್ಮಾಣಕ್ಕಾಗಿ ಮಾತ್ರ ವಿನಾಯಿತಿ ನೀಡಿ ಹಿಂದೆ ನಾವು ಕಾನೂನು ಮಾಡಿದ್ದೆವು ಆದರೆ ಅದಕ್ಕೆ ಹಿಂದಿನ ಸರ್ಕಾರ ಸ್ವಲ್ಪ ಬದಲಾವಣೆ ಮಾಡಿ ರಿಯಾಯಿತಿ ನೀಡಿದೆ. ಸಮಿತಿ ನೀಡುವ ಶಿಫಾರಸು ಆಧಾರದಲ್ಲಿ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಿದೆ‌. ಮುಂದೆ ಅಲ್ಲಿಯೇ ಬಂದು ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಇದನ್ನೂಓದಿ:ವಿಧಾನಸಭೆಯಲ್ಲಿ ಎಪಿಎಂಸಿ ತಿದ್ದುಪಡಿ ಸೇರಿದಂತೆ 6 ವಿಧೇಯಕಗಳ ಮಂಡನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.