ETV Bharat / state

ಕೆಎಂಸಿ ಕಾಯಿದೆಯಲ್ಲಿ ವ್ಯಕ್ತಿ, ರಾಜ್ಯ ಸರ್ಕಾರ ಪದಗಳನ್ನು ಒಂದೇ ರೀತಿಯಲ್ಲಿ ಅರ್ಥೈಸಲಾಗದು: ಹೈಕೋರ್ಟ್

ಕರ್ನಾಟಕ ಮುನ್ಸಿಪಲ್ ಕಾಪೋರೇಷನ್ ಕಾಯ್ದೆ ಅಡಿಯಲ್ಲಿ ವ್ಯಕ್ತಿ, ರಾಜ್ಯ ಸರ್ಕಾರ ಪದಗಳನ್ನು ಒಂದೇ ರೀತಿಯಲ್ಲಿ ಅರ್ಥೈಸಲಾಗದು ಎಂದು ಹೈಕೋರ್ಟ್ ತಿಳಿಸಿದೆ.

High Court
ಹೈಕೋರ್ಟ್
author img

By ETV Bharat Karnataka Team

Published : Sep 26, 2023, 1:25 PM IST

ಬೆಂಗಳೂರು: ಕರ್ನಾಟಕ ಮುನ್ಸಿಪಲ್ ಕಾಪೋರೇಷನ್ ಕಾಯ್ದೆಯಲ್ಲಿ (ಕೆಎಂಸಿ) ವ್ಯಕ್ತಿ ಹಾಗೂ ರಾಜ್ಯ ಸರ್ಕಾರ ಎಂಬ ಪದಗಳನ್ನು ಒಂದೇ ರೀತಿಯಲ್ಲಿ ಅರ್ಥೈಸಲು ಸಾದ್ಯವಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯಿದೆ 1999 (ಕೆಟಿಪಿಪಿ) ನಿಯಮಗಳನ್ನು ಉಲ್ಲಂಘಿಸಿ ಅರಣ್ಯ ಇಲಾಖೆಯಿಂದ ಕಟ್ಟಡ ನಿರ್ಮಾಣವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಸರ್ಕಾರಿ ಜಮೀನಿನಲ್ಲಿ ಅರಣ್ಯ ಇಲಾಖೆಯಿಂದ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ಕ್ರಮವನ್ನು ಪ್ರಶ್ನಿಸಿ ಹುಬ್ಬಳ್ಳಿ ನಿವಾಸಿ ಮಂಜುನಾಥ್ ಬದಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ಧೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ.

ಕೆಪಿಟಿಟಿ ಕಾಯಿದೆಯಲ್ಲಿ ಉಲ್ಲೇಖಿಸಿರುವಂತೆ ಯಾವುದೇ ವ್ಯಕ್ತಿಯಿಂದ ಕಟ್ಟಡ ನಿರ್ಮಾಣಕ್ಕೆ ಅನಮತಿ ಕಡ್ಡಾಯವಾಗಿದೆ. ಆದರೆ, ಸರ್ಕಾರದಿಂದ ಎಂಬುದು ಒಳಗೊಂಡಿಲ್ಲ. ಈ ಕಟ್ಟಡ ಸರ್ಕಾರವೇ ನಿರ್ಮಾಣ ಮಾಡುತ್ತಿದೆ. ಅಲ್ಲದೆ, ಕಾಯಿದೆಯ ಸೆಕ್ಷನ್ 299ರಲ್ಲಿ ಉಲ್ಲೇಖಿಸಿರುವ ವ್ಯಕ್ತಿ ಮತ್ತು ಸರ್ಕಾರ ಎಂಬ ಪದಗಳ ನಡುವೆ ದೊಡ್ಡ ಮಟ್ಟದ ವ್ಯತ್ಯಾಸವಿದೆ. ಯಾವುದೇ ವ್ಯಕ್ತಿ ಎಂಬ ಪದ ಇರುವಲ್ಲಿ ಸರ್ಕಾರವನ್ನು ಸೇರಿಸಲಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಅತ್ಯಗತ್ಯ ಕಟ್ಟಡ ನಿಮಾರ್ಣಕ್ಕೆ ಸರ್ಕಾರ 2016ರಲ್ಲಿ ಕೆಟಿಪಿಪಿ ಕಾಯಿದೆಯಲ್ಲಿ ಅವಕಾಶ ಮಾಡಿಕೊಟ್ಟಿದೆ. ಆದರೆ, ಅರ್ಜಿದಾರರ ಇದನ್ನು ಪ್ರಶ್ನಿಸಿಲ್ಲ. ಈ ರೀತಿಯ ಕಟ್ಟಡ ನಿರ್ಮಾಣ ಅತ್ಯಂತ ಮಹತ್ವವನ್ನು ಹೊಂದಿದ್ದು, ಈ ರೀತಿಯಲ್ಲಿ ಚಟುವಟಿಕೆಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿದ್ದು, ಅರ್ಜಿಯಲ್ಲಿ ಪುರಸ್ಕರಿಸುವುದಕ್ಕೆ ಯೋಗ್ಯವಾದ ಕಾರಣಗಳು ಇಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಕಾಯಿದೆ ಹೇಳಿರುವಂತೆ ಯಾವುದೇ ವ್ಯಕ್ತಿಯಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಬೇಕಾಗಿದೆ ಎಂಬುದು ತಿಳಿಸಿದೆ. ಆದರೆ, ಈ ನಿಯಮ ಸರ್ಕಾರಕ್ಕೆ ಇಲ್ಲ. ಕಾಯಿದೆಯ ಸೆಕ್ಷನ್ 299ರ ಕಟ್ಟಡಗಳ ನಿರ್ಮಾಣ ವಿಚಾರದಲ್ಲಿ ಯಾವುದೇ ವ್ಯಕ್ತಿ ಎಂಬ ಪದವನ್ನು ಬಳಸಲಾಗಿದೆ. ಆದರೆ, ರಾಜ್ಯ ಸರ್ಕಾರವನ್ನು ಎಂಬುದಾಗಿ ಇಲ್ಲ ಎಂದು ತಿಳಿಸಿರುವ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಕರ್ನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮ(ಕೆಆರ್‌ಐಡಿಎಲ್) ಮೂಲಕ ಅರಣ್ಯ ಇಲಾಖೆಯು ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಅರ್ಜಿದಾರ ಮಂಜುನಾಥ್ ಬದಿ ಎಂಬವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಕಟ್ಟಡ ನಿರ್ಮಾಣಕ್ಕೆ ಪ್ಲಾನ್ ಅನುಮತಿ ಪಡೆದುಕೊಂಡಿಲ್ಲ ಹಾಗೂ ಕೆಟಿಪಿಪಿ ಕಾಯಿದೆಯ ನಿಯಮಗಳನ್ನು ಅನುಸರಿಸಿಲ್ಲ ಎಂದು ವಾದಿಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರಿ ವಕೀಲರು, ಅರಣ್ಯ ಇಲಾಖೆಯ ಕಚೇರಿಗಳು ಹಾಗೂ ಸಿಬ್ಬಂದಿಯ ವಸತಿ ನಿಲಯಗಳಿಗಾಗಿ ಕಟ್ಟಡ ಅತ್ಯಗತ್ಯವಿದ್ದು, ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೇ ಸ್ಥಳದಲ್ಲಿ ಸರ್ಕಾರ ಕಟ್ಟಡ ನಿರ್ಮಾಣಕ್ಕಾಗಿ ಅನುಮತಿ ಹಾಗೂ ಪರವಾನಗಿ ಪಡೆದುಕೊಳ್ಳುವುದಕ್ಕೆ ಕಾನೂನಿನಲ್ಲಿ ಅಗತ್ಯವಿಲ್ಲ. ಅಲ್ಲದೆ, ಈ ರೀತಿಯಲ್ಲಿ ನಿರ್ಮಾಣವಾಗುವ ಕಟ್ಟಡಗಳಿಗೆ ಕೆಪಿಟಿಟಿ ಕಾಯಿದೆಯಲ್ಲಿ ವಿನಾಯ್ತಿ ನೀಡಿ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ನ್ಯಾಯ ಪೀಠಕ್ಕೆ ವಿವರಿಸಿದ್ದರು.

ಇದನ್ನೂ ಓದಿ: ಶಕ್ತಿ ಸೌಧಕ್ಕೂ ತಟ್ಟಿದ ಬೆಂಗಳೂರು ಬಂದ್ ಬಿಸಿ: ಸಚಿವಾಲಯದ ಹಲವು ಸಿಬ್ಬಂದಿ ಗೈರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.