ಬೆಂಗಳೂರು: ಎಂಟು ತಿಂಗಳ ಮಗುವಿನಿಂದ 80 ವರ್ಷದ ವೃದ್ಧರವರೆಗೂ ಇನ್ನೂರಕ್ಕೂ ಹೆಚ್ಚು ಮಂದಿಗೆ ಕಾಕ್ಲಿಯರ್ ಇಂಪ್ಲಾಂಟ್ ( ಶ್ರವಣ ಸಾಧನ ಅಳವಡಿಸುವಿಕೆ) ನಡೆಸುವ ಮೂಲಕ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ ಯಶಸ್ವಿಯಾಗಿದೆ.
ಹುಟ್ಟಿನಿಂದ ಕಿವುಡಾಗಿರುವವರು, ಶ್ರವಣ ದೋಷದ ಬಗ್ಗೆ ಜಾಗೃತಿ ಇಲ್ಲದೆ ಹೆಚ್ಚು ಸಮಸ್ಯೆಗಳನ್ನು ತಂದುಕೊಳ್ಳುತ್ತಾರೆ. ಎಂಟು ತಿಂಗಳಿಂದ 6 ವರ್ಷದೊಳಗೆ ಕಾಕ್ಲಿಯರ್ ಇಂಪ್ಲಾಂಟ್ ಮಾಡುವ ಮೂಲಕ ಸಂಕೀರ್ಣ ತೊಂದರೆಗಳಿಂದ ಚೇತರಿಕೆ ಕಾಣಬಹುದಾಗಿದೆಯಂತೆ
ಈ ಕಾಂಕ್ಲಿಯರ್ ಇಂಪ್ಲಾಂಟ್ ಬಗ್ಗೆ ಜನರಲ್ಲಿ ಅರಿವು ಇಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶ್ರವಣ ಮುಕ್ತ ರಾಜ್ಯ ಯೋಜನೆಯಡಿ ಶ್ರವಣದೋಷ ಉಳ್ಳವರಿಗೆ ಶಸ್ತ್ರಚಿಕಿತ್ಸೆ ಮೂಲಕ ಕಿವುಡುತನಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬಹುದು. ವಿದೇಶದಿಂದ ತಂತ್ರಜ್ಞಾನವನ್ನು ತರಿಸಿಕೊಂಡು ಇಲ್ಲಿ ಅಗತ್ಯವುಳ್ಳವರಿಗೆ ಅಳವಡಿಸಲಾಗುವುದು. ಸರ್ಕಾರದ ಸಬ್ಸಿಡಿ ಕೂಡ ಅರ್ಹರಿಗೆ ನೀಡಲಾಗುವುದು ಎಂದು ಇಲ್ಲಿನ ಅಧಿಕಾರಿಗಳು ಮಾಹಿತಿ ನೀಡಿರು.
ಚಿಕ್ಕವಯಸ್ಸಿನಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶ್ರವಣ ಸಾಧನ ಅಳವಡಿಸಿಕೊಳ್ಳುವ ಮೂಲಕ ಎಳೆಯ ವಯಸ್ಸಿನಲ್ಲಿಯೇ ಗುರುತಿಸಿ, ಮಗುವಿಗೆ ಉನ್ನತ ತಂತ್ರಜ್ಞಾನ ಬಳಸಿ ಚಿಕಿತ್ಸೆ ನೀಡಬಹುದು. ಅಲ್ಲದೇ, ಶಿಕ್ಷಣವನ್ನೂ ಪಡೆಯಬಹುದಾಗಿದೆ. ಇಂಪ್ಲಾಂಟ್ ನಿಂದಾಗಿ ಮಿದುಳಿನಲ್ಲಿ ದ್ವನಿಯ ಗ್ರಹಿಕೆಯೇ ಶ್ರವಣ ಕಾರ್ಯ. ಕಿವಿಯಲ್ಲಿನ ಸೂಕ್ಷ್ಮ ಕಂಪನಗಳು ನರಗಳ ಮೂಲಕ ಮೆದುಳಿಗೆ ತಲುಪುತ್ತದೆ ಶ್ರವಣ ದೋಷಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ.