ETV Bharat / state

ಐಎಂಎ ಪ್ರಕರಣ: ಮೂವರು ನಾನ್‌ ಐಪಿಎಸ್ ಅಧಿಕಾರಿಗಳ ಅಮಾನತು; ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ? - ಸರ್ಕಾರ ಆದೇಶ

ಬಹುಕೋಟಿ ಐಎಂಎ ವಂಚನೆ ಪ್ರಕರಣದ ಆರೋಪಕ್ಕೆ ಒಳಗಾಗಿರುವ ಮೂವರು ಪೊಲೀಸ್​ ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

vidhanasoudha
ವಿಧಾನಸೌಧ
author img

By

Published : Oct 19, 2020, 3:33 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಆರೋಪಕ್ಕೊಳಗಾಗಿರುವ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಆದರೆ ಸರ್ಕಾರ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿಯವರನ್ನು ಅಮಾನತುಗೊಳಿಸದೆ, ನಾನ್ ಐಪಿಎಸ್ ಅಧಿಕಾರಿಗಳಿಗೆ ಸುಣ್ಣ, ಐಪಿಎಸ್ ಅಧಿಕಾರಿಗಳಿಗೆ ಬೆಣ್ಣೆ ಎಂಬಂತೆ ದ್ವಿಮುಖ ಧೋರಣೆ ಪ್ರದರ್ಶಿಸಿದೆ.

ಸಿಬಿಐ ಸಲ್ಲಿಸಿದ ಚಾರ್ಜ್ ಶೀಟ್​ನಲ್ಲಿ ಈ ಮೂವರು ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಲಾಗಿತ್ತು. ಇದರ ಬೆನ್ನಲ್ಲೇ ಅಧಿಕಾರಿಗಳನ್ನು ಅಮಾನತು ಮಾಡಿ, ಇಲಾಖಾ ತನಿಖೆಗೆ ಅದೇಶ ನೀಡಲಾಗಿದೆ. ಸಿಐಡಿಯಲ್ಲಿದ್ದ ಡಿಎಸ್​ಪಿ ಇ.ಬಿ. ಶ್ರೀಧರ್ ಮತ್ತು ಕಮರ್ಶಿಯಲ್ ಸ್ಟ್ರೀಟ್ ಇನ್ಸ್​ಪೆಕ್ಟರ್​ ಎಂ. ರಮೇಶ್ ಹಾಗೂ ಅಂದಿನ ಸಬ್ ಇನ್ಸ್ ಪೆಕ್ಟರ್ ಗೌರಿಶಂಕರ್​ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಮೊನ್ನೆಯಷ್ಟೇ ಸಿಬಿಐ ಬಹುಕೋಟಿ ಐಎಂಎ ವಂಚನೆ ಪ್ರಕರಣ ಸಂಬಂಧ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಚಾರ್ಜ್ ಶೀಟ್​ನಲ್ಲಿ ಸಿಬಿಐ 28 ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಲಾಗಿತ್ತು. ಈ ಪೊಲೀಸ್ ಅಧಿಕಾರಿಗಳು ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಜೊತೆ ಕೈ ಜೋಡಿಸಿದ್ದರು. ಜೊತೆಗೆ ಅಕ್ರಮ ಗಮನಕ್ಕೆ ಬಂದಿದ್ದರೂ ಅದನ್ನು ಮರೆಮಾಚಿ ಆರೋಪಿಗೆ ಸಹಾಯ ಮಾಡಿದ್ದರು. ಕಮರ್ಷಿಯಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರಿಗೆ ಮನ್ಸೂರ್ ಖಾನ್ ಮಾಡಿರುವ ಬಹುಕೋಟಿ ವಂಚನೆ ಪ್ರಕರಣ ಗೊತ್ತಿದ್ರೂ, ಪೊಲೀಸರು ಸರಿಯಾಗಿ ತನಿಖೆ ಮಾಡಿರಲಿಲ್ಲ. ಕೆಪಿಐಡಿ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳದೇ, ಕಾನೂನಿನಡಿ ಸೂಕ್ತ ತನಿಖೆ ನಡೆಸದೆ ಬದಲಿಗೆ ಅವರ ಮೇಲಿರುವ ಆರೋಪವನ್ನು ತಳ್ಳಿ ಹಾಕಿ ದೂರುಗಳನ್ನು ಮುಚ್ಚಿಹಾಕುವಂತೆ ಶಿಫಾರಸ್ಸು ಮಾಡಿರುವ ಆರೋಪ ಇವರ‌ ಮೇಲಿದೆ.

ಐಪಿಎಸ್ ಅಧಿಕಾರಿಗಳಿಗೆ ಇಲ್ಲ ಅಮಾನತು ಶಿಕ್ಷೆ: ಸಿಬಿಐ ಸಲ್ಲಿಕೆ ಮಾಡಿದ್ದ ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿ ಹೆಸರನ್ನೂ ಉಲ್ಲೇಖಿಸಿತ್ತು‌.

ಆದರೆ, ಸರ್ಕಾರ ಈ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸದೇ, ನಾನ್‌ ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶ ಹೊರಡಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ

ಸರ್ಕಾರ ಐಪಿಎಸ್ ಲಾಬಿಗೆ ಒಳಗಾಯಿತೇ ಎಂಬ ಕೂಗು ಬಲವಾಗಿ ಕೇಳಿ ಬಂದಿದೆ. ಆರೋಪ ಪಟ್ಟಿಯಲ್ಲಿ ಐಪಿಎಸ್ ಅಧಿಕಾರಿಗಳ ಕೈವಾಡದ ಬಗ್ಗೆಯೂ ಸ್ಪಷ್ವವಾಗಿ ಉಲ್ಲೇಖಿಸಲಾಗಿದೆ. ಆದರೆ ಅವರನ್ನು ಸೇವೆಯಿಂದ ಅಮಾನತುಗೊಳಿಸದೇ ಇರುವುದು ಸರ್ಕಾರದ ದ್ವಿಮುಖ ನೀತಿಯನ್ನು ತೋರಿಸಿದೆ.

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸದೇ ಮೃಧು ದೋರಣೆ ತೋರಿಸಿದೆ. ಬರೇ ಕೆಳ ಹಂತದ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಮೂಲಕ ಇಬ್ಬಗೆ ನೀತಿ ಅನುಸರಿಸಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.