ಬೆಂಗಳೂರು: ಲಹರಿ ಮ್ಯೂಸಿಕ್ಸ್ ಹಾಡುಗಳನ್ನು ಕದಿಯಲಾಗುತ್ತಿದೆ ಆರೋಪದಡಿ ಮೊಹಲ್ಲಾ ಟೆಕ್ ಪ್ರೈವೇಟ್ ಲಿಮಿಟೆಡ್ ಮೇಲೆ ಯಶವಂತಪುರ ಠಾಣಾ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕೋರಮಂಗಲದಲ್ಲಿರುವ ಮೊಹಲ್ಲಾ ಟೆಕ್ ಪ್ರೈವೇಟ್ ಲಿಮಿಟೆಡ್, ಆರೋಪಿಗಳು ತಮ್ಮದೇ ಆ್ಯಪ್ ಮೂಲಕ ಲಹರಿ ಮ್ಯೂಸಿಕ್ ಹಾಡುಗಳನ್ನು ಅನುಮತಿ ಪಡೆಯದೆ ಬಳಸಿಕೊಳ್ಳುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಲಹರಿ ಗ್ರೂಪ್ ಸಿಬ್ಬಂದಿ ಯಶವಂತಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
![police raid on mohalla tech](https://etvbharatimages.akamaized.net/etvbharat/prod-images/kn-bng-08-lahari-7204498_11032020174025_1103f_1583928625_158.jpg)
ದೂರು ಆಧರಿಸಿ ದಾಳಿ ಮಾಡಿದ ಯಶವಂತಪುರ ಪೊಲೀಸರು ಮೊಹಲ್ಲಾ ಟೆಕ್ ಪ್ರೈ.ಲಿ ನಿಂದ ಲ್ಯಾಪ್ ಟ್ಯಾಪ್, ಹಾರ್ಡ್ ಡಿಸ್ಕ್ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.