ಬ್ಯಾಕ್ಪ್ಯಾಕ್ನಲ್ಲಿ ಮರೆಮಾಚಿ ಅಕ್ರಮ ಚಿನ್ನ ಸಾಗಣಿಕೆ.. ಕಸ್ಟಮ್ಸ್ ಬಲೆಗೆ ಬಿದ್ದ ಪ್ರಯಾಣಿಕ - ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಸೆಪ್ಟೆಂಬರ್ 23ರಂದು ದುಬೈನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನನ್ನು ಸಂಶಯದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಣಿಕೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ದೇವನಹಳ್ಳಿ: ಬ್ಯಾಕ್ಪ್ಯಾಕ್ನ ಚಕ್ರದಲ್ಲಿ ಮರೆಮಾಚಿ ಅಕ್ರಮವಾಗಿ ಚಿನ್ನ ಸಾಗಣಿಕೆ ಮಾಡುತ್ತಿದ್ದ ಪ್ರಯಾಣಿಕ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಆರೋಪಿಯಿಂದ 7 ಲಕ್ಷ ಮೌಲ್ಯದ 142 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ.
ಸೆಪ್ಟೆಂಬರ್ 23ರಂದು ದುಬೈನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನನ್ನು ಸಂಶಯದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಣಿಕೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿ ಬ್ಯಾಕ್ ಪ್ಯಾಕ್ (ಬ್ಯಾಗ್)ನ ಚಕ್ರದಲ್ಲಿ ಮತ್ತು ಪೌಚ್ನಲ್ಲಿ ಅಕ್ರಮವಾಗಿ ಚಿನ್ನವನ್ನು ಸಾಗಾಣಿಕೆ ಮಾಡುತ್ತಿದ್ದ, 7,38,900 ರೂಪಾಯಿ ಮೌಲ್ಯದ 142.100 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಚಪ್ಪಲಿ, ಬನಿಯನ್, ಕಾರ್ಟನ್ ಬಾಕ್ಸ್ನಲ್ಲಿಟ್ಟು ಗೋಲ್ಡ್ ಸ್ಮಗ್ಲಿಂಗ್.. ಮಂಗಳೂರು ಏರ್ಪೋರ್ಟ್ನಲ್ಲಿ ಚಿನ್ನ ವಶಕ್ಕೆ