ಬೆಂಗಳೂರು: ಒಂದೆಡೆ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿದೆ. ಮತ್ತೊಂದೆಡೆ ನಗರದಲ್ಲಿ ಗಾಂಜಾ ಮಾರಾಟಗಾರರ ಹಾವಳಿ ಕೂಡ ಜಾಸ್ತಿಯಾಗಿದೆ. ಕೋರಮಂಗಲ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಮೂವರು ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದಾರೆ.
ಮಾರಪ್ಪ, ರವಿ, ಹಾಗೂ ರಾಜ ಕಿಶೋರ್ ನಾಯಕ್ ಬಂಧಿತರು. ಇವರು ಆಂಧ್ರದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಅಂದಾಜು 32 ಲಕ್ಷ ಮೌಲ್ಯದ 84 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬೈಕ್-ಕಾರ್ ಮಧ್ಯೆ ಅಪಘಾತ: ಸವಾರ ಸಾವು, ಕಾರು ಚಾಲಕ ಪಾರು