ಬೆಂಗಳೂರು: ಅಕ್ರಮವಾಗಿ ಕುದುರೆ ರೇಸ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸತ್ಯನಾರಾಯಣ, ಕುಮಾರ, ಶ್ರೀಕಾಂತ್, ಸಂದೇಪ್ ಬಂಧಿತರು. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ ನಾಲ್ವರು ಜೂಜುಕೋರರು ಯಾವುದೇ ಲೈಸೆನ್ಸ್ ಇಲ್ಲದೇ ಸಾರ್ವಜನಿಕರಿಂದ ಹಣ ಪಣವಾಗಿ ಕಟ್ಟಿಕೊಂಡು ಕುದುರೆ ಜೂಜಾಟ ಆಡುತ್ತಿದ್ದರು. ಈ ಕುರಿತ ಖಚಿತ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ ವಿಶೇಷ ದಳ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ 7ಮೊಬೈಲ್ ಫೋನ್ಗಳು, 20 ಲಕ್ಷದ 6 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.