ETV Bharat / state

ರಾಷ್ಟ್ರೀಯ ಪಕ್ಷಗಳನ್ನು ನಂಬಿ ಮತ ಹಾಕಿದ ಜನರಿಗೆ ಆ ಪಕ್ಷಗಳ ನಾಟಕ ನೋಡುವುದು ಅನಿವಾರ್ಯ : ಹೆಚ್ ಡಿ ಕುಮಾರಸ್ವಾಮಿ - ಬೆಂಗಳೂರು ಮೈಸೂರು ಹೆದ್ದಾರಿ

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿರುವ ಭರವಸೆಯಂತೆ ಬಡವರಿಗೆ 10 ಕೆ ಜಿ ಅಕ್ಕಿ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಕೇಂದ್ರ ಸರ್ಕಾರ ಅಕ್ಕಿ ಯಾಕೆ ಕೊಡಬೇಕು. ಕೇಂದ್ರ ಸರ್ಕಾರಕ್ಕೆ ಅಕ್ಕಿಗಾಗಿ ಅರ್ಜಿ ಹಾಕಿಕೊಂಡಿದ್ರಾ?: ಮಾಜಿ ಸಿಎಂ ಹೆಚ್​ಡಿಕೆ ಪ್ರಶ್ನೆ

Former Chief Minister HD Kumaraswamy spoke to reporters.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗಾರರ ಜೊತೆಗೆ ಮಾತನಾಡಿದರು.
author img

By

Published : Jun 21, 2023, 5:11 PM IST

Updated : Jun 21, 2023, 11:02 PM IST

ಸುದ್ದಿಗಾರರೊಂದಿಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಾತನಾಡಿದರು.

ಬೆಂಗಳೂರು: ನಾಡಿನ ಜನತೆ ಈ ರಾಷ್ಟ್ರೀಯ ಪಕ್ಷಗಳನ್ನು ನಂಬಿ ಮತ ಹಾಕಿದ್ದಾರೆ. ಈ ಎರಡೂ ರಾಷ್ಟ್ರೀಯ ಪಕ್ಷಗಳ ನಾಟಕ ಜನ ನೋಡಲೇ ಬೇಕು, ಇದು ಅನಿವಾರ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

ಜೆಪಿ ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜನತೆಗೆ ಯಾವ ರೀತಿ ಟೋಪಿ ಹಾಕುತ್ತಾರೆಂದು ನೋಡಿ. ಕಾಂಗ್ರೆಸ್ ಅಧ್ಯಕ್ಷರು ಅರ್ಜಿ ಪ್ರದರ್ಶನ ಮಾಡಿ ಕೇಂದ್ರವನ್ನು ದೂಷಣೆ ಮಾಡಿದ್ದಾರೆ. ಜನರ ಮುಂದೆ ಮಾತು ಕೊಟ್ಟಾಗ ಸಮಸ್ಯೆ ಬಗ್ಗೆ ಅರಿವಿರಲಿಲ್ವಾ? ಎಂದು ಪ್ರಶ್ನಿಸಿದ್ದಾರೆ.

ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಜನತೆಗೆ ನೀಡಿರುವ ಭರವಸೆಯಂತೆ ಬಡವರಿಗೆ 10 ಕೆ ಜಿ ಅಕ್ಕಿ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಕೇಂದ್ರ ಸರ್ಕಾರ ಅಕ್ಕಿ ಯಾಕೆ ಕೊಡಬೇಕು. ಕೇಂದ್ರ ಸರ್ಕಾರಕ್ಕೆ ಅಕ್ಕಿಗಾಗಿ ಅರ್ಜಿ ಹಾಕಿಕೊಂಡಿದ್ರಾ? ಎಂದು ಕುಟುಕಿದರು.

ವಿದ್ಯುತ್ ಉಚಿತವಾಗಿ ಕೊಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ವಿದ್ಯುತ್ ಬಿಲ್ ದು ಇದೇ ಕಥೆ ಆಗಿದೆ. 35 ಲಕ್ಷ ಬಿಲ್ ಕಟ್ಟಬೇಕು ಅಂತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್​ ಹೇಳುತ್ತಿದ್ದಾರೆ. ಎಷ್ಟೋ ಕುಟುಂಬಗಳಿಗೆ ಇನ್ನೂ ಬಿಲ್ ಬಂದಿಲ್ಲ. ಜನ ಆತಂಕದಲ್ಲಿದ್ದಾರೆ. ಜನರು ತೀರ್ಮಾನ ಮಾಡಬೇಕಾದಾಗ, ಬದುಕು ಕಟ್ಟಿಕೊಳ್ಳಲು ಸರಿಯಾಗಿ ತೀರ್ಮಾನ ಮಾಡದಿದ್ದರೆ, ಇನ್ನೂ ಕೆಟ್ಟ ದಿನಗಳು ಬರಬೇಕಾಗುತ್ತದೆ ಎಂದ ಕುಮಾರಸ್ವಾಮಿ, ಕೋಲಾರದಲ್ಲಿ ಡಿಸಿಸಿ ಬ್ಯಾಂಕ್ ಗಲಾಟೆ ನಡೆದಿದೆ. ಇದರಲ್ಲಿ ತನಿಖೆ ನಡೆದರೆ ಯಾರ್ಯಾರು ಜೈಲಿಗೆ ಹೋಗ್ತಾರೋ ಗೊತ್ತಿಲ್ಲ ಎಂದರು.

ಬಾಯಿ ಚಪಲಕ್ಕೆ ಜಾರಕಿಹೊಳಿ ಹೇಳಿಕೆ: ಸಚಿವ ಸತೀಶ್ ಜಾರಕಿಹೊಳಿ ಅವರು ನೀಡಿದ ಸರ್ವರ್ ಹ್ಯಾಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್ ಡಿ ಕುಮಾರಸ್ವಾಮಿ, ಅವರು ಬಾಯಿ ಚಪಲಕ್ಕೆ ಮಾತಾಡುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಅವರಿಗೆ ಏನು ಗೊತ್ತಿದೆ. ಇವರೆಲ್ಲಾ ಮಂತ್ರಿಗಳು?. ಏಕೆ ಹ್ಯಾಕ್ ಮಾಡುತ್ತಾರೆ. ನಿಮ್ಮ ಸರ್ವರ್ ಬಲಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಜಾರಕಿಹೊಳಿಗೆ ಟಾಂಗ್​ ನೀಡಿದರು.

ಯಾರೋ ಬಂದು ಚುನಾವಣಾ ತಂತ್ರಗಾರಿಕೆ ಐಡಿಯಾ ಕೊಟ್ಟರು. ನೀವು ಉಚಿತ, ಉಚಿತ ಎಂದು ಹೇಳಿದಿರಿ, ಸಚಿವರ ಹೆಂಡ್ತಿಗೂ ಉಚಿತ ಅರ್ಜಿ ಹಾಕಿಕೊಳ್ಳಬಹುದು ಎಂದು ಹೇಳಿದರು. ಇದೇನು ಹುಡುಗಾಟಿಕೆನಾ? ಕೊಡೋಕೆ ಸಾಧ್ಯವಾಗುತ್ತೋ ಇಲ್ಲವೋ ಅನ್ನುವುದು ಪ್ರಶ್ನೆಯಲ್ಲ. ಗ್ಯಾರಂಟಿ ಆಧಾರದಲ್ಲಿ ಘೋಷಣೆ ಮಾಡಿದ್ದಾರೆ. ಅದರ ಆಧಾರವಾಗಿ ಕೊಡಬೇಕಿರುವುದು ಅವರ ಜವಾಬ್ದಾರಿ. ಮೊದಲು ಈ ಬಗ್ಗೆ ಯೋಚನೆ ಮಾಡಿರಲಿಲ್ಲವೇ? ಎಂದು ಪ್ರಶ್ನಿಸಿದರು.

ನಾನು ಪಂಚರತ್ನ ಯೋಜನೆ ಘೋಷಣೆ ಮಾಡಿದ್ದೆ. ರೂಪುರೇಷ ಸಿದ್ಧಮಾಡಿಕೊಂಡಿದ್ದೆ. ಹಣ ಹೊಂದಿಸಿ 5 ವರ್ಷ ಹೇಗೆ ಕೊಡಬೇಕು ಅಂತ ನಾನು ರೂಪು ರೇಷೆ ಮಾಡಿದ್ದೆ. ಆದರೆ, ಜನರು ನನ್ನನ್ನು ನಂಬಿಲ್ಲ. ಪಾಪ ಇವರ 5 ಘೋಷಣೆ ನಂಬಿದರು. ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂ. ಹೇಗೆ ಕೊಡುತ್ತಾರೆ ಕಾದು ನೋಡೋಣ ಎಂದು ಹೆಚ್​ಡಿಕೆ ಹೇಳಿದ್ರು.

ಪ್ರಣಾಳಿಕೆಯಲ್ಲಿ ಕೂಡ ಅದೆಷ್ಟೋ ವಿಷಯ ಹೇಳಿದ್ದಾರೆ. ನಾನಿನ್ನು ಟೈಮ್ ಕೊಡ್ತೀನಿ. ಬಜೆಟ್ ಅಧಿವೇಶನದಲ್ಲಿ ಏನು ಘೋಷಣೆ ಮಾಡ್ತಾರೆ ನೋಡೋಣ. ಅಧಿಕಾರ ಹಂಚಿಕೆ ವಿಷಯ ಅವರಿಗೆ ಸೇರಿದ್ದು 5 ವರ್ಷ ಮುಂದುವರೆಯುತ್ತಾರೋ, ಇಲ್ಲವೋ ಗೊತ್ತಿಲ್ಲ ಎಂದು ತಿಳಿಸಿದರು.

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಜನ ಅಪಘಾತದಿಂದ ಸಾಯುತ್ತಿದ್ದಾರೆ. ಇದರ ಬಗ್ಗೆ ಪರಿಹಾರ ಏನು ಅಂತ ಯಾರೂ ಯೋಚನೆ ಮಾಡಿಲ್ಲ. ಕೇಂದ್ರ ಸರ್ಕಾರವಾಗಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ಯೋಚನೆ ಮಾಡಿಲ್ಲ. ಬಂದು ದುಡ್ಡು ಮಾಡಿಕೊಂಡು ಹೋದರು ಎಂದು ಕಿಡಿಕಾರಿದರು.

ಸಿಎಂ ಅಧಿಕಾರ ಶೇರಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಅದು ಅವರಿಗೆ ಸೇರಿದ ವಿಚಾರ. 5 ವರ್ಷ ಮುಂದುವರೆಯುತ್ತಾರೋ ಗೊತ್ತಿಲ್ಲ. ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ಸಿಎಂ ಆಗಿದ್ದ ಕಾಲದಲ್ಲಿ ಚೇರ್, ಮೇಜು ಎಸೆದುಕೊಂಡು ಕುಸ್ತಿ ಮಾಡಿದ್ರು. ಈಗ ಹಾಗೆ ಮಾಡ್ತಾರೋ?. ಎಲ್ಲವೂ ಮುಂದೆ ಗೊತ್ತಾಗಲಿದೆ ಎಂದರು.

ಮಕ್ಕಳ ಬದುಕಿನ ಜೊತೆ ಚೆಲ್ಲಾಟ : ಶಾಲೆಗಳಲ್ಲಿ ಮೊಟ್ಟೆ, ಬಾಳೆಹಣ್ಣು ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಚ್ ಡಿಕೆ, ಒಂದು ಮೊಟ್ಟೆ, ಒಂದು ಬಾಳೆಹಣ್ಣು ಅದು ಕೂಡ ಇರಲ್ವೇನೊ, ಇನ್ನೂ ಸ್ವಲ ದಿನ ಹೋದರೆ ಅದು ಇರಲ್ವೆನೋ ಎಂದು ವ್ಯಂಗ್ಯವಾಡಿದರು. ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಮಕ್ಕಳ ಬದುಕಿನ ಜೊತೆಗೆ ಎರಡು ರಾಷ್ಟ್ರೀಯ ಪಕ್ಷಗಳು ಚೆಲ್ಲಾಟ ಆಡುತ್ತಿವೆ. ನಾಳೆ ಬೆಳಗ್ಗೆ ಯಾರ ಬಗ್ಗೆ ಓದಬೇಕು ಅನ್ನೊ ಗೊಂದಲದಲ್ಲಿ ಮಕ್ಕಳು ಮತ್ತು ಪೋಷಕರು ಇದ್ದಾರೆ. ಪರಿಶುದ್ಧ ಮಕ್ಕಳ ಮನಸ್ಸಲ್ಲಿ ಇಂತಹ ವಾತಾವರಣ ನಿರ್ಮಾಣ ಮಾಡೋದು ಸರಿಯಲ್ಲ ಎಂದು ಮಾಜಿ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂಓದಿ:ಜಂಟಿ ಅಧಿವೇಶನದಲ್ಲಿ ಮೋದಿ ಭಾಷಣಕ್ಕೆ ಬೆಂಗಾವಲಾಗ್ತಿರೋದು ದೊಡ್ಡ ಗೌರವ": ಭಾರತೀಯ - ಅಮೆರಿಕನ್, ಕನ್ನಡಿಗ ಥಾನೇದಾರ್ ಸಂತಸ

Last Updated : Jun 21, 2023, 11:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.