ETV Bharat / state

ಸಮ್ಮಿಶ್ರ ಸರ್ಕಾರಕ್ಕೆ ನೈತಿಕತೆ ಇದ್ದರೆ ಸಚಿವ ಜಮೀರ್​ರನ್ನು ಬಂಧಿಸಲಿ: ಈಶ್ವರಪ್ಪ ಆಗ್ರಹ

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಇಡಿ ನೋಟಿಸ್​ ತೆಗೆದುಕೊಂಡಿರುವ ಶಾಸಕ ರೋಷನ್​ ಬೇಗ್​ ಅವರನ್ನು ಎಸ್​ಐಟಿ ಬಂಧಿಸಿದೆ. ಆದರೆ ಸಚಿವ ಜಮೀರ್​ ಅಹ್ಮದ್ ಅವರನ್ನು ಯಾಕೆ ಬಂಧಿಸಿಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಮೈತ್ರಿ ವಿರುದ್ಧ ಕಿಡಿಕಾರಿದರು.

ಸಮ್ಮಿಶ್ರ ಸರ್ಕಾರಕ್ಕೆ ನೈತಿಕತೆ ಇದ್ದರೆ ಸಚಿವ ಜಮೀರ್ ಅಹ್ಮದ್​ರನ್ನು ಬಂಧಿಸಲಿ
author img

By

Published : Jul 16, 2019, 1:57 PM IST

ಬೆಂಗಳೂರು: ಐಎಂಎ ಬಹುಕೋಟಿ ಹಗರಣದಲ್ಲಿ ಸಿಲುಕಿರುವ ಶಾಸಕ ರೋಷನ್​ ಬೇಗ್​ ಅವರನ್ನು ಎಸ್​ಐಟಿ ಬಂಧಿಸಿದೆ, ಹಾಗೇ ಇಡಿಯಿಂದ ನೋಟಿಸ್​ ಪಡೆದಿರುವ ಸಚಿವ ಜಮೀರ್​ ಅಹ್ಮದ್​ರನ್ನು ಬಂಧಿಸಬೇಕು ಎಂದು ಶಾಸಕ ಕೆ.ಎಸ್​.ಈಶ್ವರಪ್ಪ ಆಗ್ರಹಿಸಿದ್ದಾರೆ.

ಸಮ್ಮಿಶ್ರ ಸರ್ಕಾರಕ್ಕೆ ನೈತಿಕತೆ ಇದ್ದರೆ ಸಚಿವ ಜಮೀರ್ ಅಹ್ಮದ್​ರನ್ನು ಬಂಧಿಸಲಿ

ಬಿಜೆಪಿ ಶಾಸಕರು ತಂಗಿದ್ದ ರಮಡ ರೆಸಾರ್ಟ್​ಗೆ ಶಾಸಕ ಕೆ.ಎಸ್.ಈಶ್ವರಪ್ಪ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ಕೈಗೊಂಬೆಯಾಗಿರುವ ಎಸ್​ಐಟಿ ಸಮ್ಮಿಶ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ರೋಷನ್​ ಬೇಗ್ ಅವರನ್ನು ಮಾತ್ರ ಬಂಧಿಸಿದೆ. ದೋಸ್ತಿ ಸರ್ಕಾರಕ್ಕೆ ಪ್ರಾಮಾಣಿಕತೆ, ನೈತಿಕತೆ ಇದ್ದರೆ ಸಚಿವ ಜಮೀರ್​ ಅವರನ್ನು ಬಂಧಿಸಬೇಕಿತ್ತು ಎಂದು ಕಿಡಿಕಾರಿದರು.

ರಾಜಕೀಯ ಕುತಂತ್ರ ಮಾಡುತ್ತಿರುವ ಮೈತ್ರಿ ಸರ್ಕಾರ ನಡೆಯನ್ನು ಜನತೆ ನೋಡುತ್ತಿದೆ. ಐಎಂಎ ಹಗರಣದ ಮುಖ್ಯ ಆರೋಪಿ ಮನ್ಸೂರ್​ ಜೀವ ಭಯ ಇರುವುದಾಗಿ ವಿಡಿಯೊ ಒಂದರಲ್ಲಿ ಹೇಳಿಕೊಂಡಿದ್ದಾರೆ. ಅವರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯಾವ ಕ್ರಮವನ್ನು ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು.

ಮುಸ್ಲಿಮರ ರಕ್ಷಣೆಯ ನೆಪ ಹೇಳಿ ಕಾಂಗ್ರೆಸ್​ ಇಷ್ಟು ವರ್ಷ ರಾಜಕೀಯ ಮಾಡಿದೆ. ಐಎಂಎ ಪ್ರಕರಣದಲ್ಲೂ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ದೂರಿದರು.

Intro:ಸಚಿವ ಜಮೀರ್ ಬಂಧನಕ್ಕೆ ಈಶ್ವರಪ್ಪ ಆಗ್ರಹ

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಪ್ರಾಮಾಣಿಕತೆ ಇದ್ದರೆ, ಸಚಿವ ಜಮೀರ್ ಅಹ್ಮದ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.

ರಮಡ ರೆಸಾರ್ಟ್ ಆಗಮಿಸ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ರೋಷನ್ ಬೇಗ್ ಹಾಗೂ ಜಮೀರ್ ಅಹಮದ್ ಗೆ ಇಡಿ ನೋಟೀಸ್ ನೀಡಿದೆ. ಆದರೆ, ಜಮೀರ್ ಅಹ್ಮದ್ ಅವರನ್ನು ಏಕೆ ಬಂಧಿಸಿಲ್ಲವೇಕೆ ಎಂದು ಪ್ರಶ್ನಿಸಿದರು.

ಲೂಟಿಕೋರರನ್ನು ಬಂಧಿಸಿ, ಹಣ ಕಳೆದುಕೊಂಡಿರುವ ಅತಿಹೆಚ್ಚು ಮುಸಲ್ಮಾನ ಸಂತ್ರಸ್ತರಿಗೆ ಹಣ ಹಿಂದಿರುಗಿಸಬೇಕಿತ್ತು.ಮೈತ್ರಿ ಸರ್ಕಾರ ಐಎಂಎ ಪ್ರಕರಣವನ್ನು ರಾಜಕೀಯ ದಾಳ ಮಾಡಿಕೊಳ್ಳುವ ನಿಟ್ಟಿನಲ್ಲಿ ಎಸ್.ಐ.ಟಿ ಗೆ ವಹಿಸಿದ್ದಾರೆ. ರೋಷನ್ ಬೇಗ್ ಮೈತ್ರಿ ಸರ್ಕಾರದ ವಿರುದ್ಧ ಇದ್ದಾರೆ ಎನ್ನುವ ಕಾರಣಕ್ಕೆ ಬಂಧಿಸಿ ರಾಜಕೀಯ ಕುತಂತ್ರ ಮಾಡುತ್ತಿದೆ ಎಂದು ದೂರಿದರು.

Body:ಮೈತ್ರಿ ಸರ್ಕಾರಕ್ಕೆ ಪ್ರಾಮಾಣಿಕತೆ ಇದ್ದರೆ, ಜಮೀರ್ ಬಂಧಿಸಿ ವಿಚಾರಣೆಗೊಳಪಡಿಸಲಿ. ಮನ್ಸೂರ್ ತನಗೆ ಜೀವ ಭಯವಿದೆ ಎಂದು ಹೇಳಿದ್ದಾನೆ. ಆದರೆವಾವನ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.ಕಾಂಗ್ರೆಸ್ ನವರು ಮುಸಲ್ಮಾನರ ರಕ್ಷಣೆ ಮಾಡುತ್ತೇವೆ ಎನ್ನುವ ನೆಪ ಹೇಳಿಕೊಂಡು ಇಷ್ಟು ವರ್ಷ ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.

Conclusion:ಐಎಂಎ ಪ್ರಕರಣದಲ್ಲೂ ಕೂಡಾ ಇದನ್ನೆ ಮುಂದುವರೆಸಿದ್ದಾರೆ. ಸರ್ಕಾರದ ವಿರುದ್ಧ ಇರುವ ರೋಷನ್ ಬೇಗ್ ಅವರನ್ನು ಬಂಧಿಸುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.