ETV Bharat / state

ಬಾಡಿಗೆ ಕರಾರು ಒಪ್ಪಂದ ನೋಂದಣಿ ಇಲ್ಲದಿದ್ದರೆ ರೆಂಟ್​ ಹೆಚ್ಚಿಸುವಂತಿಲ್ಲ: ಹೈಕೋರ್ಟ್

author img

By

Published : Apr 24, 2023, 8:45 PM IST

ಬಾಡಿಗೆ ಕರಾರು ಕುರಿತು ಹೈಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು : ಬಾಡಿಗೆ ಕರಾರು ಒಪ್ಪಂದದ ಪ್ರತಿಯು ನೋಂದಣಿಯಾಗದಿದ್ದರೆ ಅದನ್ನು ಬಾಡಿಗೆ ಹೆಚ್ಚಳಕ್ಕೆ ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಬಾಡಿಗೆ ಹೆಚ್ಚಳದ ಮೊತ್ತ ಪಾವತಿಸಲು ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಶ್ರೀನಿವಾಸ್ ಎಂಟರ್​ಪ್ರೈಸಸ್​ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ಸಿ ಎಂ ಪೂಣಚ್ಚ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಮಾಡಿದೆ. ಜತೆಗೆ, ಬಾಡಿಗೆ ಅವಧಿಯು 11 ತಿಂಗಳುಗಳಿಗಿಂತ ಹೆಚ್ಚಾಗಿ ಕರಾರು ಒಪ್ಪಂದದ ಪ್ರತಿಯು ನೋಂದಣಿಯಾಗದಿದ್ದರೆ, ಅದನ್ನು ಸಾಲಕ್ಕೆ ಅಡಮಾನ ಇಟ್ಟಿರುವುದು (ಕೊಲ್ಯಾಟ್ರಲ್ ಪರ್ಪಸ್) ಎಂದು ಪರಿಗಣಿಸಲಾಗುತ್ತದೆ. ಆದರೆ, ಬಾಡಿಗೆ ಹೆಚ್ಚಳಕ್ಕೆ ಪರಿಗಣಿಸಲಾಗದು ಎಂದು ತಿಳಿಸಿದೆ.

ಅಲ್ಲದೆ, ಹೆಚ್ಚುವರಿ ಬಾಡಿಗೆ ಪಾವತಿಸುವಂತೆ ವಿಚಾರಣಾಧೀನ ನ್ಯಾಯಾಲಯ ನೀಡಿರುವ ಆದೇಶ ದೋಷಪೂರಿತವಾಗಿದೆ. ದೂರುದಾರರು ಶ್ರೀನಿವಾಸ್ ಎಂಟರ್​ಪ್ರೈಸಸ್ 2002ರ ಸೆಪ್ಟೆಂಬರ್ 23ರಂದು ಮಾಡಲಾಗಿರುವ ಬಾಡಿಗೆ ಕರಾರು ಹೊರತುಪಡಿಸಿ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಈ ಮೂಲಕ ತಾನು ಹೆಚ್ಚುವರಿ ಬಾಡಿಗೆ ಪಡೆಯಲು ಅರ್ಹ ಎಂಬುದನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು? : ಬೆಂಗಳೂರಿನ ಶ್ರೀನಿವಾಸ ಎಂಟರ್​ಪ್ರೈಸಸ್​ ನೆಡುಂಗಡಿ ಬ್ಯಾಂಕ್ (ಪಂಜಾಬ್ ನ್ಯಾಷನಲ್ ಬ್ಯಾಂಕ್​ನೊಂದಿಗೆ ವಿಲೀನ)ಗೆ ತನ್ನ ಕಟ್ಟಡವನ್ನು ಬಾಡಿಗೆಗೆ ನೀಡಿತ್ತು. ಈ ವೇಳೆ ಮಾಸಿಕ 13,574 ಬಾಡಿಗೆ ಹಾಗೂ 81,444 ಅಡ್ವಾನ್ಸ್ ನೀಡಲಾಗಿತ್ತು. 1998ರ ಸೆಪ್ಟೆಂಬರ್ 1ರಿಂದ ಪೂರ್ವಾನ್ವಯವಾಗುವಂತೆ 2002 ಸೆಪ್ಟೆಂಬರ್ 23ರಂದು ಐದು ವರ್ಷಗಳ ಅವಧಿಗೆ ವಿವಾದಾತ್ಮಕವಾದ ಕರಾರು ಪತ್ರ ಮಾಡಲಾಗಿದ್ದು, ಇದರ ಪ್ರಕಾರ ಮಾಸಿಕ 23,414 ಬಾಡಿಗೆ ಎಂದು ಹೇಳಲಾಗಿತ್ತು. ಅಲ್ಲದೇ, ಪ್ರತಿ ಮೂರು ವರ್ಷಕ್ಕೊಮ್ಮೆ ಶೇ. 20ರಷ್ಟು ಬಾಡಿಗೆ ಮತ್ತು ಹೆಚ್ಚುವರಿಯಾಗಿ 1,32,969 ಅಡ್ವಾನ್ಸ್ ಮೊತ್ತ ನೀಡಬೇಕು ಎಂದು ಕರಾರಿನಲ್ಲಿ ಉಲ್ಲೇಖಿಸಲಾಗಿತ್ತು.

ಕರಾರಿನ ಪ್ರಕಾರ, ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ಹೆಚ್ಚುವರಿ ಬಾಡಿಗೆ ಹಣ ಪಾವತಿಸುವಂತೆ ಶ್ರೀನಿವಾಸ್ ಎಂಟರ್​​ಪ್ರೈಸಸ್​ ಮನವಿ ಸಲ್ಲಿಸಿತ್ತು. ಇದಕ್ಕೆ ಬ್ಯಾಂಕ್ ಒಪ್ಪದ ಹಿನ್ನೆಲೆಯಲ್ಲಿ ಬಾಡಿಗೆ ಕರಾರು ಪತ್ರದ ಅನ್ವಯ 1998ರ ಸೆಪ್ಟೆಂಬರ್ 1ರಿಂದ ಹೆಚ್ಚುವರಿ ಬಾಡಿಗೆ ಮೊತ್ತ ಪಾವತಿಸಲು ಪಿಎನ್​ಬಿಗೆ ನಿರ್ದೇಶಿಸಬೇಕು ಎಂದು ಕೋರಿ ಶ್ರೀನಿವಾಸ್ ಎಂಟರ್​ಪ್ರೈಸಸ್​​​ 2006 ಸೆಪ್ಟೆಂಬರ್​ನಲ್ಲಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು.

ನ್ಯಾಯಾಲಯದ ಮುಂದೆ ಹಾಜರಾಗಿದ್ದ ಪಿಎನ್​ಬಿಯು 2002 ಸೆಪ್ಟೆಂಬರ್ 23ರ ಕರಾರು ಪತ್ರವು ನೋಂದಣಿಯಾಗಿಲ್ಲ. ಅಲ್ಲದೇ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಟಾಂಪ್​ ಮಾಡಲಾಗಿಲ್ಲ ಎಂದು ದೂರು ದಾಖಲಿಸಿತ್ತು. ಉಭಯ ಪಕ್ಷಕಾರರ ವಾದ ಆಲಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಶ್ರೀನಿವಾಸ್ ಎಂಟರ್​ಪ್ರೈಸಸ್​ ಅಸಲು ದಾವೆಯನ್ನು ಭಾಗಶಃ ಮಾನ್ಯ ಮಾಡಿ, 5,19,148 ರೂಪಾಯಿ ಹಾಗೂ ವಾರ್ಷಿಕ ಶೇ. 18ರಷ್ಟು ಬಡ್ಡಿ ಪಾವತಿಸುವಂತೆ ಪಿಎನ್​ಗೆ ಆದೇಶ ಮಾಡಿತ್ತು. ಇದನ್ನು ಪಿಎನ್​ಬಿಯು ಹೈಕೋರ್ಟ್​ನಲ್ಲಿ ಪ್ರಶ್ನಿಸಿತ್ತು.

ಇದನ್ನೂ ಓದಿ: ಸರ್ಕಾರಿ ನೌಕರನಿಗೆ ವಿಧಿಸಿದ್ದ ಒಂದು ವರ್ಷದ ಶಿಕ್ಷೆಯನ್ನು ಒಂದು ದಿನಕ್ಕೆ ಇಳಿಕೆ ಮಾಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.