ಬೆಂಗಳೂರು: ಪಾಸಿಟಿವ್ ಬಂದ ತಕ್ಷಣ ಗಾಬರಿ ಆಗಬೇಡಿ. ಮನೆಯಲ್ಲೇ ಇದ್ದು, ನಿಗಾ ವಹಿಸಬೇಕು. ಒಂದು ವೇಳೆ ಸ್ಯಾಚುರೇಷನ್ ಮಟ್ಟ ಕಡಿಮೆಯಾದರೆ ಮನೆಯಲ್ಲೇ ಸರಳ ಉಸಿರಾಟದ ವ್ಯಾಯಾಮ ಮಾಡಬೇಕು ಎಂದು ವಿಕ್ಟೋರಿಯಾ ಆಸ್ಪತ್ರೆ ಜನರಲ್ ಫಿಸಿಷಿಯನ್ ಡಾ.ಕೆ.ರವಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜತೆಗೂಡಿ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಆತಂಕ ಹಾಗೂ ಸ್ಯಾಚುರೇಷನ್ ಡ್ರಾಪ್ ಆಗುವ ಆತಂಕದಿಂದ ಪಾರಾಗುವ ಬಗ್ಗೆ ಕೆಲ ಮಹತ್ವದ ಟಿಪ್ಸ್ ಗಳನ್ನು ನೀಡಿದ್ದಾರೆ.
ಕೋವಿಡ್ ಪಾಸಿಟಿವ್ ಬಂದರೆ ಆತಂಕಗೊಳ್ಳದೇ ಮೊದಲಿಗೆ ಮಾಡಬೇಕಾಗಿರುವ ಸರಳ ವಿಧಾನಗಳ ಬಗ್ಗೆ ಅತ್ಯಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಪಾಸಿಟಿವ್ ಬಂದ ತಕ್ಷಣ ಗಾಬರಿ ಆಗಬಾರದು. ಮೈ, ಕೈ ನೋವು, ಸ್ಮೆಲ್ ಹೋಗುವುದು, ಜ್ವರ, ತಲೆನೋವು, ಮೈಲ್ಡ್ ಸಿಂಟಮ್ಸ್ ಇದ್ದವರು ಮನೆಯಲ್ಲೇ ಐಸೋಲೇಟ್ ಆಗಬೇಕು ಎಂದು ಸೂಚಿಸಿದ್ದಾರೆ.
ಡಾ.ಕೆ.ರವಿ ನೀಡಿದ ಸಲಹೆಗಳೇನು?:
- ಮೈಕೈ ನೋವಿದ್ದರೆ, ಜ್ವರ ಇದ್ದರೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಪ್ಯಾರಸಿಟಮಾಲ್ ತೆಗೆದುಕೊಳ್ಳಬೇಕು.
- ಪಾಸಿಟಿವ್ ಬಂದ ತಕ್ಷಣ ಅವರು ತಮ್ಮ ಸ್ಯಾಚುರೇಷನ್ ನೋಡಬೇಕು
- 6 ನಿಮಿಷ ವಾಕ್ ಟೆಸ್ಟ್ ಅಥವಾ 3 ನಿಮಿಷ ವಾಕ್ ಟೆಸ್ಟ್ ಮಾಡಬೇಕು. ಆರು ನಿಮಿಷ ಅಥವಾ ಮೂರು ನಿಮಿಷ ವಾಕ್ ಮಾಡಿದ ಬಳಿಕ ಸ್ಯಾಚುರೇಷನ್ ನೋಡಬೇಕು. ಆಗ ಸ್ಯಾಚುರೇಷನ್ ಕಡಿಮೆ ಇಲ್ಲದಿದ್ದರೆ ಅವರಿಗೆ ಏನೂ ಸಮಸ್ಯೆ ಇಲ್ಲ
- ವಾಕ್ ಟೆಸ್ಟ್ ಮಾಡಿದ ಬಳಿಕ ಸ್ಯಾಚುರೇಷನ್ 4-5% ಕಡಿಮೆ ಆದರೆ ಆಗ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ
- ಎಲ್ಲರಿಗೂ ಸ್ಯಾಚುರೇಷನ್ ಕಡಿಮೆಯಾದರೆ ಆಕ್ಸಿಜನ್ ಬೇಕಾಗಿಲ್ಲ
- ಎಲ್ಲರಿಗೂ ರೆಮ್ಡಿಸಿವಿರ್ ಅಗತ್ಯ ಇಲ್ಲ. ಇದು ರಾಮಬಾಣ ಅಲ್ಲ . ಸಾರ್ವಜನಿಕರು ಆತಂಕದಲ್ಲಿ ಇದನ್ನು ಪಡೆಯಬಾರದು, ಇದೊಂದು ಆಂಟಿ ವೈರಲ್ ಇಂಜಕ್ಷನ್ ಆಗಿದೆ.
- ವೈದ್ಯರೂ ಎಲ್ಲರಿಗೂ ರೆಮ್ಡಿಸಿವಿರ್ ಔಷಧ ರೆಫರ್ ಮಾಡಬಾರದು. ಅದನ್ನು ವೈಜ್ಞಾನಿಕವಾಗಿ ಬಳಸಬೇಕು.
ಸ್ಯಾಚುರೇಷನ್ ಮಟ್ಟ ಹೆಚ್ಚು ಮಾಡುವ ಸಿಂಪಲ್ ಟಿಪ್ಸ್:
- 30 ನಿಮಿಷದಿಂದ ಎರಡು ತಾಸು ಹೊಟ್ಟೆಯನ್ನು ಕೆಳಗೆ ಹಾಕಿ ಮಲಗಬೇಕು
- ಬಳಿಕ 30 ನಿಮಿಷದಿಂದ 2 ತಾಸು ನಿಮ್ಮ ಬಲ ಬದಿಗೆ ಒತ್ತಿ ಮಲಗಬೇಕು
- ಬಳಿಕ 30 ನಿಮಿಷದಿಂದ 2 ತಾಸು ವರಗಿ ಕೂತುಕೊಳ್ಳಬೇಕು
- ನಂತರ 30 ನಿಮಿಷದಿಂದ 2 ತಾಸು ನಿಮ್ಮ ಎಡ ಕೈ ಒತ್ತಿ ಮಲಗಬೇಕು
- ಕೊನೆಯದಾಗಿ ಮತ್ತೆ ಹೊಟ್ಟೆ ಭಾಗವನ್ನು ಕೆಳಗೆ ಹಾಕಿ ಮಲಗಬೇಕು
- ಈ ಐದು ಸಿಂಪಲ್ ಸ್ಟೆಪ್ ಮಾಡಿದರೆ ನಿಮ್ಮ ಸ್ಯಾಚುರೇಷನ್ ಮಟ್ಟ 8% ವರೆಗೆ ಹೆಚ್ಚಾಗುತ್ತದೆ.