ETV Bharat / state

ಗಡಿ ವಿವಾದದಲ್ಲಿ ಮಹಾರಾಷ್ಟ್ರ ನಾಯಕರು ಬಾಯಿ ಮುಚ್ಚಿ ಕೂತರೆ ಶಾಂತಿಯಿಂದ ಬದುಕಲು ಆಗುತ್ತದೆ: ಸಚಿವೆ ಕರಂದ್ಲಾಜೆ ಚಾಟಿ - Etv bharat kannada

ದೇಶದ ಎಲ್ಲ ರಾಜ್ಯಗಳ ಗಡಿ ವಿಚಾರ ಮುಗಿದ ಅಧ್ಯಾಯ. ಗಡಿ ವಿವಾದವನ್ನು ಮತ್ತೆ ಮತ್ತೆ ಕೆದಕಿ ರಾಜಕೀಯ ಬೇಳೆ ಬೇಯಿಸಿಕೊಂಡು, ಸಮಾಜದಲ್ಲಿ ಅಶಾಂತಿ ‌ಸೃಷ್ಟಿಸಬಹುದು. ಈ ವಿಚಾರದಿಂದ ಭಾಷೆ, ಜನರು ಹಾಗೂ ರಾಜ್ಯಗಳ ನಡುವೆ ಗೊಂದಲ ಸೃಷ್ಟಿ ಮಾಡಬಹುದೇ ಹೊರತು ಇದರಿಂದ ಯಾವುದೇ ಲಾಭ ಇಲ್ಲ.

ಗಡಿ ವಿವಾದಲ್ಲಿ ಮಹಾರಾಷ್ಟ್ರ ನಾಯಕರು ಬಾಯಿ ಮುಚ್ಚಿ ಕೂತರೆ ಶಾಂತಿಯಿಂದ ಬದುಕಲು ಆಗುತ್ತದೆ: ಸಚಿವೆ ಕರಂದ್ಲಾಜೆ ಚಾಟಿ
if-maharashtra-leaders-keep-their-mouths-shut-we-will-live-in-peace-minister-karandlaje
author img

By

Published : Nov 25, 2022, 2:37 PM IST

ಬೆಂಗಳೂರು: ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡದೇ, ಬಾಯಿ ಮುಚ್ಚಿಕೊಂಡು ಕೂತರೆ ನಾವು ಶಾಂತಿಯಿಂದ ಬದುಕಲು‌ ಆಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಟಿ ಬೀಸಿದ್ದಾರೆ

ವಿಧಾನಸೌಧದಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ರಾಜ್ಯಗಳ ಗಡಿ ವಿಚಾರ ಮುಗಿದ ಅಧ್ಯಾಯ. ಗಡಿ ವಿವಾದವನ್ನು ಮತ್ತೆ ಮತ್ತೆ ಕೆದಕಿ ರಾಜಕೀಯ ಬೇಳೆ ಬೇಯಿಸಿಕೊಂಡು, ಸಮಾಜದಲ್ಲಿ ಅಶಾಂತಿ ‌ಸೃಷ್ಟಿಸಬಹುದು. ಈ ವಿಚಾರದಿಂದ ಭಾಷೆ, ಜನರು ಹಾಗೂ ರಾಜ್ಯಗಳ ನಡುವೆ ಗೊಂದಲ ಸೃಷ್ಟಿ ಮಾಡಬಹುದೇ ಹೊರತು ಇದರಿಂದ ಯಾವುದೇ ಲಾಭ ಇಲ್ಲ.

ಕನ್ನಡಿಗರು ಹಾಗೂ ಮರಾಠಿಗರು ಗಡಿ ಭಾಗದಲ್ಲಿ ಒಟ್ಟಾಗಿ ಬದುಕುತ್ತಿದ್ದೇವೆ. ಯಾವುದೇ ಭಾಷಿಗರನ್ನು ಕರ್ನಾಟಕ ಸ್ವಾಗತ ಮಾಡಿದೆ. ನಮ್ಮ ನಡುವೆ ಹೊಡೆದಾಡಿಸುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು.

ಮಂಗಳೂರು ಕುಕ್ಕರ್ ಸ್ಫೋಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಕರಾವಳಿ ಹಾಗೂ ದೇಶವನ್ನು ಬೆಚ್ಚಿ ಬೀಳಿಸುವ ಘಟನೆ. ವರ್ಷದ ಹಿಂದೆ ಗೋಡೆ ಬರಹ ಬರೆದಿದ್ದಾತನೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಕದ್ರಿ ದೇವಸ್ಥಾನ ಸ್ಫೋಟ ಮಾಡಲು‌ ತೆಗೆದುಕೊಂಡು ಹೋಗಿದ್ದಾನೆ. ಮಂಗಳೂರು ಸುತ್ತಮುತ್ತದ ಹಲವು ದೇವಸ್ಥಾನಗಳ ಮ್ಯಾಪ್ ಅವನ ಕೈಯಲ್ಲಿ ಸಿಕ್ಕಿದೆ.

ಕರಾವಳಿಯಲ್ಲಿ ದೇವಸ್ಥಾನ ಸ್ಫೋಟ, ಕೋಮು ಗಲಭೆ ಸೃಷ್ಟಿ ಮಾಡುವುದು ಅವನ ಉದ್ದೇಶ ಆಗಿತ್ತು. ಕೇರಳ ಮತ್ತು ಕರ್ನಾಟಕದ ಕರಾವಳಿ ಸಿರಿಯಾ ಟ್ರೈನಿಂಗ್ ಆಗಿ ಬಂದವರು. ಪಿಎಫ್ಐ ಸಕ್ರಿಯ ಆಗಿದ್ದವರು ಭಯೋತ್ಪಾದಕ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಈತ ಕೂಡ 40ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದ್ದಾನೆ.

ಈತ ಕೂಡ ಐಸಿಸ್​ ತರಬೇತಿ ಪಡೆದಿದ್ದಾನೆ ಎಂಬುದನ್ನು ಎನ್ಐಎ ತನಿಖೆಯಿಂದ ಹೊರಬರುತ್ತಿದೆ. ಎನ್ಐಎ ತಂಡ ರಾಜ್ಯದಲ್ಲಿ ಬೀಡು ಬಿಟ್ಟಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಎನ್ಐಎ ತಂಡಕ್ಕೆ ಕರ್ನಾಟಕ ಪೊಲೀಸರು ಸಹಕಾರ ಕೊಡಬೇಕು. ಪ್ರವೀಣ್ ಹತ್ಯೆ ತನಿಖೆಗೆ ಬಂದ ತಂಡ ಮಂಗಳೂರಿನಲ್ಲಿ ಬೀಡು ಬಿಟ್ಟಿದೆ. ಶಸ್ತ್ರಾಸ್ತ್ರ ಬಂದಿರುವ ಮತ್ತು ಉಗ್ರ ಚಟುವಟಿಕೆಗೆ ತರಬೇತಿ ನಡೆದ ಬಗ್ಗೆ ಮಾಹಿತಿ ಇದೆ. ಭಯೋತ್ಪಾದಕತೆಯನ್ನು ನಿರ್ನಾಮ ಮಾಡಲು ಕೇಂದ್ರ ಹಾಗೂ ರಾಜ್ಯ ತನಿಖಾ‌ ತಂಡ ಈ ಕೆಲಸ ಮಾಡಲಿದೆ. ಜನ ಹೆದರುವ ಅಗತ್ಯ ಇಲ್ಲ ಎಂದರು.

ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ ಸ್ಥಳಕ್ಕೆ 6 ದಿನಗಳ ಬಳಿಕ ಸಚಿವ ಸುನಿಲ್​ ಕುಮಾರ್​ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.