ETV Bharat / state

ಘರ್ ವಾಪಸಿ ಅಂತ ಮಾಡಿದರೆ ಅರ್ಧ ಬಿಜೆಪಿ ಜೆಡಿಎಸ್ ಖಾಲಿ ಆಗುತ್ತೆ: ಸಚಿವ ಪ್ರಿಯಾಂಕ್ ಖರ್ಗೆ - ಸಚಿವ ಪ್ರಿಯಾಂಕ್ ಖರ್ಗೆ

Congress Ghar Wapsi: ಕಾಂಗ್ರೆಸ್​ ಪಕ್ಷ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಘರ್​ ವಾಪ್ಸಿ ಪ್ಲ್ಯಾನ್​ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ.

Minister Priyank Kharge
ಸಚಿವ ಪ್ರಿಯಾಂಕ್​ ಖರ್ಗೆ
author img

By

Published : Aug 19, 2023, 3:42 PM IST

ಬೆಂಗಳೂರು: ನಾವು 'ಘರ್ ವಾಪ್ಸಿ' ಅಂತ ಮಾಡೋಕೆ ಹೋದರೆ, ಅರ್ಧ ಬಿಜೆಪಿ, ಅರ್ಧ ಜೆಡಿಎಸ್ ಖಾಲಿಯಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿದರೆ ಯಾರಿಗಾದರೂ ಸ್ವಾಗತ. ಕಂಡೀಷನ್ ಇಲ್ಲದೆ ಯಾರು ಬಂದ್ರೂ ಸ್ವಾಗತ. ನಾವು ಆಪರೇಷನ್ ಹಸ್ತ ಮಾಡುವುದಕ್ಕೆ ಹೊರಟಿಲ್ಲ. ಬಿಜೆಪಿ, ಜೆಡಿಎಸ್ ಒಡೆಯಲು ಹೋಗ್ತಿಲ್ಲ.‌ ಯಾರ ಅಸ್ತಿತ್ವ ಏನು ಅನ್ನೋದನ್ನು ಜನರೇ ತೋರಿಸಿದ್ದಾರೆ. ಬಿಜೆಪಿ, ಜೆಡಿಎಸ್ ಅವರ ಅಸ್ತಿತ್ವ ಕಾಪಾಡಿಕೊಳ್ಳಲಿ. ಸಚಿವ ಚೆಲುವರಾಯಸ್ವಾಮಿಗೆ ಕೆಲವರು ಸಂಪರ್ಕದಲ್ಲಿ ಇರಬಹುದು. ಕೆಲವರು ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಬಹಿರಂಗ ಪಡಿಸಿದರು.

ಅಲ್ಲಿ ಕ್ಯಾಪ್ಟನ್ ಆಗಲು ಯಾರೂ ಸಿದ್ಧರಿಲ್ಲ : ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸಭೆ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ಯಡಿಯೂರಪ್ಪ ಅವರನ್ನು ಹೇಗೆ ನಡೆಸಿಕೊಂಡ್ರು ಅಂತ ಗೊತ್ತಿದೆ. ಈಗ ಅಲ್ಲಿ ಕ್ಯಾಪ್ಟನ್ ಆಗೋಕೆ ಯಾರೂ ಕೂಡ ರೆಡಿ ಇಲ್ಲ. ಪ್ರಸ್ತುತ ಅಲ್ಲಿ ಕ್ಯಾಪ್ಟನ್ ಕೂಡ ಇಲ್ಲ. ಯಡಿಯೂರಪ್ಪ ಅವರ ಮಾತು ಈಗ ಬಿಜೆಪಿ ಪಾಳಯದಲ್ಲಿ ನಡೆಯುತ್ತಾ? ಎಂದು ಪ್ರಶ್ನಿಸಿದರು.

ನಡೆದಿದ್ರೆ ಇಷ್ಟು ಜನ ಬಿಜೆಪಿ ಬಿಟ್ಟು ಬರ್ತಾ ಇದ್ರಾ? ಚುನಾವಣೆ ವೇಳೆ ಹೆಗಲ ಮೇಲೆ ಕೈಹಾಕಿ ಮಾತನಾಡಿದ್ರು. ಯಡಿಯೂರಪ್ಪ ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡಿದ್ರು. ಬಿ ಎಸ್​ ವೈ ಹೇಳಿದ ಎಷ್ಟು ಜನರಿಗೆ ಟಿಕೆಟ್ ಕೊಟ್ರು. ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಇಳಿಸಿದ್ರು. ಬಿಜೆಪಿ ಈಗ ಮುಳುಗುತ್ತಿರುವ ಹಡಗು ಎಂದು ವಾಗ್ದಾಳಿ ನಡೆಸಿದರು.

ಸುಧಾಮ್ ದಾಸ್ ಪರ ಬ್ಯಾಟಿಂಗ್ : ಸುಧಾಮ್​ ದಾಸ್ ಅವರ ನಾಮನಿರ್ದೇಶನಕ್ಕೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಸುಧಾಮ್​ ದಾಸ್ ಅವರಿಗೆ ಕೊಡಲೇಬಾರದು ಅಂತ ಹೇಳಿಲ್ಲ. ಪರಿಶೀಲಿಸಿ ಅಂತಾ ಪತ್ರ ಬರೆದಿದ್ದಾರೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ. 3 ತಿಂಗಳ ಹಿಂದಷ್ಟೇ ಕಾಂಗ್ರೆಸ್​ಗೆ ಬಂದಿದ್ದಾರೆ ಅನ್ನೋದು ಬೇಡ. ಪಕ್ಷದಲ್ಲಿ ಅವರೂ ಶ್ರಮ ಹಾಕಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದು ಸುಧಾಮ್​ ದಾಸ್ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್ ಮಾಡಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪಕ್ಷದಿಂದ ಪಕ್ಷಾಂತರಗೊಂಡು ಬಿಜೆಪಿ ಹಾಗೂ ಜೆಡಿಎಸ್​ ಶಾಸಕರಾಗಿರುವವರನ್ನು ಮತ್ತೆ ತಮ್ಮತ್ತ ಕರೆದುಕೊಳ್ಳಲು ಕಾಂಗ್ರೆಸ್ ಘರ್​ ವಾಪ್ಸಿ ಪ್ಲ್ಯಾನ್​ ಮಾಡುತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್​ ಆರೋಪ ಮಾಡುತ್ತಿವೆ.

ಇದನ್ನೂ ಓದಿ : ಬಿಜೆಪಿ ಬಿಡಲ್ಲ, ಸಿಎಂ ಭೇಟಿಯಾಗಿದ್ದು ಸಾಬೀತುಪಡಿಸಿದರೆ ಬಹಿರಂಗವಾಗಿ ನೇಣಿಗೇರಲು ಸಿದ್ದ: ಬಿಜೆಪಿ ಶಾಸಕ ಗೋಪಾಲಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.