ETV Bharat / state

ತಾಕತ್ತಿದ್ದರೆ ಆರ್​ಎಸ್ಎಸ್, ಬಜರಂಗದಳ ನಿಷೇಧಿಸಲಿ: ಕಾಂಗ್ರೆಸ್​ಗೆ ಮಾಜಿ ಸಿಎಂ ಬೊಮ್ಮಾಯಿ ಸವಾಲು

ಇಬ್ಬರ ನಾಯಕರ ನಡುವೆ ಇರುವ ಭಿನ್ನಾಭಿಪ್ರಾಯದಿಂದ ಮೊದಲ ಹಂತದ ಮಂತ್ರಿಮಂಡಲ ರಚನೆಗೆ ರಾತ್ರಿ ಮೂರರವರೆಗೂ ಹಗ್ಗ ಜಗ್ಗಾಟ ನಡೆಯಿತು. ಈಗ ಎರಡನೇ ಹಂತದ ಪೈಪೋಟಿ ನಡೆಯುತ್ತಿದೆ. ಇದನ್ನೆಲ್ಲ ನೋಡಿದರೆ ಸಮ್ಮಿಶ್ರ ಸರ್ಕಾರ ಇದ್ದಂತಿದೆ. ಈಗ ಒಂದೇ ಪಕ್ಷ ಇದ್ದರೂ ಸಮ್ಮಿಶ್ರ ಸರ್ಕಾರ ಇದ್ದಂತಿದೆ. ಇದರ ಆಯಸ್ಸು ಬರುವ ಲೋಕಸಭೆ ಚುನಾವಣೆ ವರೆಗೆ ಮಾತ್ರ. ಇದು ಅಲ್ಪಾಯುಷಿ ಸರ್ಕಾರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
author img

By

Published : May 26, 2023, 4:05 PM IST

Updated : May 26, 2023, 4:54 PM IST

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಆರ್​ಎಸ್​ಎಸ್​ ಮತ್ತು ಬಜರಂಗದಳ ನಿಷೇಧ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ತುಷ್ಟೀಕರಣಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆಯೂ ಆರ್​ಎಸ್​ಎಸ್​ ಅನ್ನು ನಿಷೇಧ ಮಾಡುವ ಕೆಲಸ ನಡೆದಿತ್ತು. ಅವರನ್ನು ಜನತೆ ಮನೆಗೆ ಕಳಿಸಿದ್ದಾರೆ. ಸಂಘ ಪರಿವಾರವನ್ನು ನಿಷೇಧ ಮಾಡುವ ಶಕ್ತಿ ಯಾರಿಗೂ ಇಲ್ಲ. ಅವರಿಗೆ ತಾಕತ್ತಿದ್ದರೆ ಆರ್​ಎಸ್​ಎಸ್ ಮತ್ತು ಬಜರಂಗದಳವನ್ನು ನಿಷೇಧಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಸರ್ಕಾರ ರಚನೆ ಆಗಿದೆ. ಸಿಎಂ, ಡಿಸಿಎಂ ಜೊತೆ 8 ಜನರು ಕೂಡ ಸಚಿವರು ಆಗಿದ್ದಾರೆ. ಆ 8 ಸಚಿವರು ಮಾತಾಡೋದು ನೋಡಿದರೆ ದ್ವೇಷದ, ಸೇಡಿನ ರಾಜಕಾರಣ ಮಾಡಲು ಪ್ರಾರಂಭ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಭಿವೃದ್ಧಿಗಿಂತ ಸೇಡು, ದ್ವೇಷದ ರಾಜಕಾರಣ ಅವರಿಗೆ ಮುಖ್ಯವಾಗಿದೆ. ಅವರು ಏನೇ ಮಾಡಿದರೂ ಅದನ್ನು ಎದರಿಸಲು ನಾವು ಸಿದ್ದರಿದ್ದೇವೆ. ಇದನ್ನು ನಾವು ಸಮರ್ಥವಾಗಿ ಎದುರಿಸುವುದಲ್ಲದೇ ಅವರ ವಿಚಾರವನ್ನು ನಾವು ಹಿಮ್ಮೆಟ್ಟಿಸುತ್ತೇವೆ ಎಂದು ಟಾಂಗ್ ನೀಡಿದರು.

ಸಮಸ್ಯೆಗಳನ್ನು ಬಗೆಹರಿಸಲು ತುರ್ತಾದ ನಿರ್ಣಯ ಎಲ್ಲೂ ಕಾಣುತ್ತಿಲ್ಲ. ರಾಜ್ಯದಲ್ಲಿ ಇವತ್ತು ಕುಡಿಯುವ ನೀರಿನ ಸಮಸ್ಯೆ ದೊಡ್ಡದಾಗಿದೆ. ಆದರೆ ಸಮಸ್ಯೆ ಬಗೆಹರಿಸುವ ಬಗ್ಗೆ ಗಮನ ಕೊಟ್ಟಿಲ್ಲ. ಬರೀ ಸೂಚನೆ ಕೊಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಹಣ ಕೂಡ ಬಿಡುಗಡೆ ಮಾಡಿಲ್ಲ. ಬರಪೀಡಿತ ತಾಲೂಕುಗಳು, ಕುಡಿಯುವ ನೀರಿನ ಕೊರತೆ ಇರುವ ತಾಲೂಕುಗಳ ಬಗ್ಗೆ ಪತ್ತೆ ಹಚ್ಚಿಲ್ಲ. ಡಿಸಿ ಅಕೌಂಟ್​​ನಲ್ಲಿ ಸಾಕಷ್ಟು ಹಣ ಇದೆ. ನೀರಿನ ಸಮಸ್ಯೆಯನ್ನು ಬಗೆಹರಿಸಿ ಎಂದು ಸಿಎಂ ಅವರಿಂದ ನಿರ್ದೇಶನ ಹೋಗಿಲ್ಲ ಎಂದು ಆರೋಪಿಸಿದರು.

ಸಚಿವರಿಗೆ ಇನ್ನೂ ಖಾತೆಯೇ ಹಂಚಿಕೆ ಆಗಿಲ್ಲ. ಅವರಿಗೆ ಇನ್ನೂ ಅಧಿಕಾರನೇ ಸಿಕ್ಕಿಲ್ಲ. ಕೇವಲ ಇವರು ಅಧಿಕಾರಕ್ಕಾಗಿ ಬಡಿದಾಡುತ್ತಿದ್ದಾರೆ. ನಾನು ಅಸೆಂಬ್ಲಿಯಲ್ಲೂ ಈ ಮಾತು ಕೇಳಿದೆ. ಆದರೆ, ಸಿಎಂ ಸಂಪುಟ ವಿಸ್ತರಣೆ ನಂತರವೇ ಖಾತೆ ಹಂಚಿಕೆ ಎಂದರು. ನಾನು ನನಗೋಸ್ಕರ ಈ ಮಾತು ಕೇಳಲಿಲ್ಲ. ಜನರಿಗಾಗಿ ಈ ಮಾತು ಕೇಳಿದ್ದು ,ಈ ರೀತಿಯ ಆಡಳಿತವನ್ನು ನಾನು ಹಿಂದೆಂದೂ ನೋಡಿಲ್ಲ ಎಂದು ವ್ಯಂಗ್ಯವಾಗಿ ಟೀಕಿಸಿದರು.

ಪ್ರತಿ ನಿತ್ಯ ಕೇಸ್ ಹಾಕುತ್ತಿದ್ದಾರೆ. ಅಶ್ವತ್ಥ ನಾರಾಯಣ್, ಹರಿಶ್ ಪೂಂಜಾ ವಿರುದ್ಧ ಕೇಸ್ ಹಾಕಿದ್ದಾರೆ. ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನ ವಾಕ್ ಸ್ವಾತಂತ್ರ್ಯ ಕೊಟ್ಟಿದೆ. ರಾಜಕೀಯ ಟೀಕೆ ಮಾಡಿದರೆ ಕೇಸ್ ಹಾಕುತ್ತೇವೆ ಅಂತಿದ್ದೀರಲ್ಲ ಇದು ಒಂದು ದುರಹಂಕಾರದ ಆಡಳಿತ, ದ್ವೇಷದ ಆಡಳಿತ, ದಮನಕಾರಿ ಆಡಳಿತ ಎನ್ನುವುದು ಪ್ರಾರಂಭದಲ್ಲಿ ಕಾಣಿಸುತ್ತದೆ. ಜನರನ್ನು ಭಯಪಡಿಸಿ ಆಡಳಿತ ಮಾಡುವ ಭ್ರಮೆ ಇವರಲ್ಲಿದೆ. ಜನ ಮನ್ನಣೆ ಪಡೆದ ಸರ್ಕಾರ ಕೆಲವೇ ದಿನಗಳಲ್ಲಿ ಜನರ ಆಕ್ರೋಶಕ್ಕೆ ಒಳಗಾಗುತ್ತದೆ ಎಂದು ಟೀಕಿಸಿದರು.

ಆರ್ ಎಸ್ ಎಸ್ ಮತ್ತು ಭಜರಂಗದಳ ಬ್ಯಾನ್ ಬಗ್ಗೆ ಹೇಳುತ್ತಿದ್ದಾರೆ. ಯಾವುದೇ ಸಂಘ ಸಂಸ್ಥೆಯನ್ನು ಬ್ಯಾನ್ ಮಾಡುವ ಅಧಿಕಾರ ಇವರಿಗಿಲ್ಲ, ಅದನ್ನು ಮಾಡೋದು ಕೇಂದ್ರ ಸರ್ಕಾರ. ಇದೆಲ್ಲ ಗೊತ್ತಿದ್ದರೂ ತುಷ್ಟೀಕರಣ ರಾಜಕಾರಣ ಮಾಡಲು ಹೊರಟ್ಟಿದ್ದಾರೆ. ಯಾರಿಗೆ ತುಷ್ಟೀಕರಣ ಮಾಡುತ್ತಿದ್ದಾರೋ ಅವರಿಗೂ ಇವರು ಯಾಮಾರಿಸುತ್ತಿದ್ದಾರೆ.

ನಾವು ಸವಾಲಾಗಿ ಸ್ವೀಕರಿಸುತ್ತೇವೆ: ಈ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಹೇಳಿ ಎಂದು ಸಿದ್ದರಾಮಯ್ಯರನ್ನು ಕೇಳುತ್ತೇನೆ..? ನಿಮ್ಮ ಸಚಿವರ ಮಾತಿಗೆ ಒಪ್ಪಿಗೆ ಕೊಡ್ತಿರಾ..? ಹೇಗೆ ಎಂದು ರಾಜ್ಯದ ಜನರಿಗೆ ಸ್ಪಷ್ಟ ಪಡಿಸಬೇಕು. ಸಂಘ ಪರಿವಾರವನ್ನು ಬ್ಯಾನ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಬ್ಯಾನ್ ಮಾಡಲು ಹೊರಟವರನ್ನು ಈಗಾಗಲೇ ಮನೆಗೆ ಕಳುಹಿಸಿದ್ದಾರೆ, ಅವರು ಈ ಹೇಳಿಕೆಯನ್ನು ನಾವು ಸವಾಲಾಗಿ ಸ್ವೀಕಾರ ಮಾಡಿ, ರಾಜಕೀಯವಾಗಿ ಎದುರಿಸುತ್ತೇವೆ ಎಂದರು.

ಇಬ್ಬರ ನಾಯಕರ ನಡುವೆ ಇರುವ ಭಿನ್ನಾಭಿಪ್ರಾಯದಿಂದ ಮೊದಲ ಹಂತದ ಮಂತ್ರಿಮಂಡಲ ಮಾಡಲು ರಾತ್ರಿ ಮೂರರ ವರೆಗೂ ಹಗ್ಗಾ ಜಗ್ಗಾಟ ನಡೆಯಿತು. ಈಗ ಎರಡನೇ ಹಂತದ ಪೈಪೋಟಿ ನಡೆಯುತ್ತಿದೆ. ಇದನ್ನೆಲ್ಲ ನೋಡಿದರೆ ಇದೂ ಒಂದು ರೀತಿಯಲ್ಲಿ ಸಮ್ಮಿಶ್ರ ಸರ್ಕಾರ ಇದ್ದಂತಿದೆ. ಕಳೆದ ಬಾರ ಎರಡು ಪಕ್ಷಗಳಿಂದ ಸಮ್ಮಿಶ್ರ ಸರ್ಕಾರ ಇತ್ತು. ಆ ಸರ್ಕಾರದ್ದು ಕಳೆದ ಲೋಕಸಭೆ ಚುನಾವಣೆವರೆಗೂ ಇತ್ತು. ಈಗ ಒಂದೇ ಪಕ್ಷ ಇದ್ದರೂ ಎರಡು ಪಕ್ಷಗಳ ರೀತಿ ಸಮ್ಮಿಶ್ರ ಸರ್ಕಾರ ಇದ್ದಂತಿದೆ, ಇದರ ಆಯಸ್ಸು ಕೂಡ ಬರುವ ಲೋಕಸಭೆ ಚುನಾವಣೆವರೆಗೆ ಎಂದು ಇದು ಅಲ್ಪಾಯುಷಿ ಸರ್ಕಾರ ಎಂದು ಮಾಜಿ ಸಿಎಂ ಭವಿಷ್ಯ ನುಡಿದರು.

ಹಿಂದಿನ ಬಿಜೆಪಿ ಸರ್ಕಾರದ ಟೆಂಡರ್ ಗಳೆನ್ನಲ್ಲ ನಿಲ್ಲಿಸಿದ್ದಾರೆ, ಇದರ ಬಗ್ಗೆ ನಮಗೆ ಯೋಚನೆ ಇಲ್ಲ. ಆದರೆ ಜನರ ಸಮಸ್ಯೆಗಳ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ವ್ಯವಸ್ಥೆ ಅನ್ನೋದು ರಾಜ್ಯದ ಜನರ ಪರವಾಗಿ ಇರಬೇಕು. ಕನಿಷ್ಠ ಜನರಿಗೆ ಬೇಕಾಗುವ ಕೆಲಸ ಕಾರ್ಯಗಳಿಗಾದರೂ ತೊಂದರೆ ಆಗಬಾರದು ಎಂದರು.

ಪ್ರಿಯಾಂಕಾ ಖರ್ಗೆ ನಮ್ಮನ್ನು ಪ್ರಚೋದನೆ ಮಾಡುತ್ತಿದ್ದಾರೆ. ಪ್ರಣಾಳಿಕೆಯಲ್ಲಿ ಬಜರಂಗ ಬ್ಯಾನ್ ಬಗ್ಗೆ ಹಾಕಿದ್ದೇ ಅವರು, ಹೀಗಾಗಿ ಸಿಎಂ ಇದರ ಬಗ್ಗೆ ನಿಲುವು ತಿಳಿಸಬೇಕು. ಅದನ್ನೇ ಹೇಳಿಕೊಂಡು ಕಾಲ ಕಳೆಯಬೇಡಿ. ನೀವು ಕೆಲಸ ಮಾಡಿ ಗ್ಯಾರಂಟಿಗಳ ಬಗ್ಗೆ ಜನರ ಗಲಾಟೆ ಆರಂಭವಾಗಿದೆ. ಈಗಾಗಲೇ ಕರೆಂಟ್ ಬಿಲ್ ಕಟ್ಟಲ್ಲ. ಬಸ್ ಟಿಕೆಟ್ ತೆಗೆದುಕೊಳ್ಳಲ್ಲ ಎಂದು ಜನ ಸ್ವಯಂಪ್ರೇರಿತವಾಗಿ ತೀರ್ಮಾನ ಮಾಡಬೇಕಾದರೆ ಅವರ ಪರವಾಗಿ ನಾವು ನಿಲ್ಲಬೇಕಾಗುತ್ತದೆ ಎಂದರು.

ಎರಡನೇ ಕ್ಯಾಬಿನೆಟ್ ವರೆಗೂ ಅವರು ಯಾಕೆ ಕಾಯಬೇಕು? ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅಂದು ಹೇಳಿದವರು, ಈಗ ಯಾಕೆ ಕಂಡಿಷನ್ ಅಂತಿದ್ದಾರೆ. ಇದು ಕೇವಲ ಯಾಮಾರಿಸುವ ಕೆಲಸ, ತಮಿಳುನಾಡಿನಿಂದ ಬಂದವರನ್ನು ಹೇಗೆ ಗುರುತಿಸುತ್ತಾರೆ? ಒಲ್ಲದ ಗಂಡನಿಗೆ ನೂರಾರು ಕುಂಟು ನೆಪ ಎನ್ನುವ ಹಾಗಾಗಿದೆ ಇವರ ಕಥೆ. ಜನರ ಜೊತೆ ನಾವು ಕೈಜೋಡಿಸಿ ಗ್ಯಾರಂಟಿ ಜಾರಿಗೆ ಹೋರಾಟ ಮಾಡುತ್ತೇವೆ ಎಂದರು.

ಬಿಜೆಪಿಯಲ್ಲಿ ಮೊದಲು ವಿರೋಧ ಪಕ್ಷದ ನಾಯಕ ಆಯ್ಕೆಯಾಗಲಿ ಎಂಬ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಬೊಮ್ಮಾಯಿ ಅವರು, ನಮ್ಮ ಬಗ್ಗೆ ಅವರಿಗೆ ಯಾಕೆ ಇಷ್ಟು ಚಿಂತೆ..? ಅವರನ್ನು ಜನರು ಗೆಲ್ಲಿಸಿದ್ಸಾರೆ. ಮೊದಲು ಅವರು ಜನ ಕೇಳುತ್ತಿರುವ ಬೇಡಿಕೆ ಈಡೇರಿಸಲಿ. ನಮಗೆ ಗೊತ್ತಿದೆ ಯಾವಾಗ ವಿರೋಧ ಪಕ್ಷದ ನಾಯಕ ನೇಮಕ ಮಾಡಬೇಕೆಂದು, ಬರುವ ಅಸೆಂಬ್ಲಿ ಒಳಗೆ ವಿರೋಧ ಪಕ್ಷದ ನಾಯಕ ಯಾರೆಂದು ಆಯ್ಕೆ ಆಗುತ್ತದೆ. ಹೀಗಾಗಿ ನಮ್ಮ ಬಗ್ಗೆ ಚಿಂತೆ ಬಿಡಿ. ನೀವು ನಿಮ್ಮ ಕೆಲಸ ಮಾಡಿ ತೋರಿಸಿ ಎಂದು ಕಾಂಗ್ರೆಸ್​ಗೆ ತಿರುಗೇಟು ನೀಡಿದರು.

ಇದನ್ನೂಓದಿ:ನೂತನ ಸಂಸತ್ ಭವನ ಉದ್ಘಾಟನೆ ಸಂಘರ್ಷದ ವಿಷಯವಾಗಬಾರದು: ಎಸ್.ಜೈಶಂಕರ್

Last Updated : May 26, 2023, 4:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.