ಬೆಂಗಳೂರು: ಎಟಿಎಂ ಯಂತ್ರದ ತರಹ ಇರುವ ಯಂತ್ರದಲ್ಲಿ ನಿಮಗೆ ಬಿಸಿಬಿಸಿ ಇಡ್ಲಿ ಸಾಂಬಾರ್ ಸಿಗಲಿದೆ. ಎಟಿಎಂನಲ್ಲಿ ಹಣ ಬರುವುದನ್ನು ನಾವು ನೀವೆಲ್ಲಾ ಕಂಡಿದ್ದೇವೆ ಮತ್ತು ಬಳಸುತ್ತಿದ್ದೇವೆ. ಮುಂದುವರೆದು ಕೂಲ್‌ಡ್ರಿಂಕ್ಸ್ ಟಿನ್, ಜಿಸ್ಟ್ ಪ್ಯಾಕೆಟ್ ಸಿಗುವುದನ್ನೂ ನೋಡಿದ್ದೇವೆ. ಆದರೆ ಇದೀಗ ಇಡ್ಲಿ, ಚಟ್ನಿ, ಸಾಂಬಾರ್ ಸಿಗುವ ಕಾಲ ಕೂಡ ಬಂದಿದೆ.
ಬೆಂಗಳೂರಿನ ಫ್ರೆಶ್ ಶಾಟ್ ಎಂಬ ಸ್ಟಾರ್ಟ್‌ಅಪ್ ಕಂಪನಿ ಇಡ್ಲಿ ಬೋಟ್ ಹೆಸರಿನ ಯಂತ್ರವನ್ನು ತಯಾರಿಸಿದೆ. ಹೀರಾಮತ್ ಮತ್ತು ಸುರೇಶ್ ಚಂದ್ರಶೇಖರನ್ ಇದನ್ನು ಆವಿಷ್ಕರಿಸಿದ್ದಾರೆ. ಪ್ರಸ್ತುತ ಬಿಳೇಕಳ್ಳಿಯಲ್ಲಿ ಸ್ಟಾರ್ಟ್ ಅಪ್ ಪ್ರಾರಂಭಿಸಲಾಗಿದ್ದು, ಆವರಣದಲ್ಲಿಯೇ ಇಡ್ಲಿ ಬೋಟ್ ಸ್ಥಾಪಿಸಲಾಗಿದೆ.
-
Idli ATM in Bangalore... pic.twitter.com/NvI7GuZP6Y
— B Padmanaban (padmanaban@fortuneinvestment.in) (@padhucfp) October 13, 2022 " class="align-text-top noRightClick twitterSection" data="
">Idli ATM in Bangalore... pic.twitter.com/NvI7GuZP6Y
— B Padmanaban (padmanaban@fortuneinvestment.in) (@padhucfp) October 13, 2022Idli ATM in Bangalore... pic.twitter.com/NvI7GuZP6Y
— B Padmanaban (padmanaban@fortuneinvestment.in) (@padhucfp) October 13, 2022
24 ಗಂಟೆ ಇಡ್ಲಿ ಸಪ್ಲೈ: ದಿನದ 24 ಗಂಟೆಯೂ ಇವುಗಳಲ್ಲಿ ಗ್ರಾಹಕರಿಗೆ ಇಡ್ಲಿಯನ್ನು ತಯಾರಿಸಿ ಪ್ಯಾಕ್ ಮಾಡಿ ತಲುಪಿಸಲಾಗುತ್ತಿದೆ. ಫೋಡಿ ಇಡ್ಲಿ, ಪೇರಿ ಪೇರಿ ಇಡ್ಲಿ, ಇಟಾಲಿಯನ್ ಹರ್ಬ್ಸ್ ಇಡ್ಲಿ ಹಾಗೂ ಚಾಕೊಲೇಟ್ ಇಡ್ಲಿಗಳು ಈ ಯಂತ್ರದಲ್ಲಿ ದೊರೆಯಲಿವೆ. ಕೇವಲ 25 ರಿಂದ 30 ರೂಪಾಯಿಗೆ ಎರಡು ಇಡ್ಲಿ ಸಿಗಲಿವೆ. ಇವುಗಳಿಗೆ ಕ್ಯಾರೆಟ್, ಪಾಲಕ್ ಸೊಪ್ಪು ಬಳಸಲಾಗುತ್ತದೆಯಲ್ಲದೆ, ಸಿರಿಧಾನ್ಯಗಳನ್ನೂ ಬಳಸಿ ತಯಾರಿಸಲಾಗುತ್ತಿದೆ ಎಂಬುದು ವಿಶೇಷ.
ಇದನ್ನೂ ಓದಿ: ಬೆಂಗಳೂರಲ್ಲಿ ತಟ್ಟೆ ಇಡ್ಲಿ, ಬಟನ್ ಇಡ್ಲಿ ಬಳಿಕ ಈಗ ಕ್ಯಾಂಡಿ ಇಡ್ಲಿ! ಈ ಐಡಿಯಾಗೆ ನೀವೇನಂತೀರಿ?
ದೋಸೆ, ಪಾನಿಪೂರಿ ಬೋಟ್ ಪರಿಚಯ: ಸ್ಟಾರ್ಟ್ ಅಪ್ನಿಂದ ಇಡ್ಲಿ ಬೋಟ್ಗಳನ್ನು ಬಸ್ ನಿಲ್ದಾಣ, ಕಚೇರಿಗಳು, ರೈಲ್ವೆ, ವಿಮಾನ ನಿಲ್ದಾಣಗಳ ಪ್ರದೇಶಗಳಿಗೆ ಉಪಯುಕ್ತವೆನಿಸುವ ಈ ಯಂತ್ರದೊಂದಿಗೆ ದೋಸೆ ಬೋಟ್ ಹಾಗೂ ಪಾನಿಪೂರಿ ಬೋಟ್‌ಗಳನ್ನೂ ಪರಿಚಯಿಸಲು ಫ್ರೆಶ್ ಶಾಟ್ ಮುಂದಾಗಿದೆ.