ಬೆಂಗಳೂರು: ನಗರದಲ್ಲಿ ಕೋವಿಡ್ನಿಂದ ಆಸ್ಪತ್ರೆಗಳ ತೀವ್ರ ನಿಗಾ ಘಟಕಕ್ಕೆ ದಾಖಲಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ತಿಂಗಳ ಆರಂಭದ ದಿನಗಳಲ್ಲಿ ತೀವ್ರ ನಿಗಾ ಘಟಕ (ಐಸಿಯು)ಕ್ಕೆ ದಾಖಲಾದವರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ.
ನವೆಂಬರ್, ಡಿಸೆಂಬರ್ನಲ್ಲಿ ಇನ್ನಷ್ಟು ಜನರನ್ನು ಕೊರೊನಾ ಬಾಧಿಸುವ ಆತಂಕ ಎದುರಾಗಿದೆ. ಅಸ್ತಮಾ, ಉಸಿರಾಟದ ಸಮಸ್ಯೆ ಇರುವವರಿಗೆ ಕೊರೊನಾ ಬಾಧಿಸಿದರೆ, ಐಸಿಯು ಸೇರಿದಂತೆ ಬೆಡ್ ಸಮಸ್ಯೆ ಕೂಡ ಶುರುವಾಗಲಿದೆ.
ಐಸಿಯುಗೆ ದಾಖಲಾಗುತ್ತಿರುವವರ ಸಂಖ್ಯೆ:
1.ಅಕ್ಟೋಬರ್ 1- 268 ಮಂದಿ.
2.ಅಕ್ಟೋಬರ್ 2- 285 ಮಂದಿ.
3.ಅಕ್ಟೋಬರ್ 3- 291 ಮಂದಿ.
4.ಅಕ್ಟೋಬರ್ 4- 293 ಮಂದಿ.
5.ಅಕ್ಟೋಬರ್ 5- 299 ಮಂದಿ.
6.ಅಕ್ಟೋಬರ್ 6- 302 ಮಂದಿ.
7.ಅಕ್ಟೋಬರ್ 7- 303 ಮಂದಿ.
8.ಅಕ್ಟೋಬರ್ 8- 313 ಮಂದಿ.
9.ಅಕ್ಟೋಬರ್ 9- 335 ಮಂದಿ.
10.ಅಕ್ಟೋಬರ್ 10- 349 ಮಂದಿ.
![Increasing in number ICU Patients](https://etvbharatimages.akamaized.net/etvbharat/prod-images/9137181_icu.jpg)
ಐಸಿಯು ದಾಖಲಾತಿ ಹೆಚ್ಚಳ ಏಕೆ?
ಹೋಮ್ ಐಸೋಲೇಷನ್ನಲ್ಲಿ ಇರುವವರ ಆರೋಗ್ಯ ಉತ್ತಮ ರೀತಿಯಲ್ಲಿ ನಿರ್ವಹಣೆ ಆಗದೆ ಇರುವುದು ಒಂದೆಡೆಯಾದ್ರೆ, ಹೃದಯ ಸಂಬಂಧಿ ಸಮಸ್ಯೆಗಳಿರುವ ರೋಗಿಗಳ ಸಂಖ್ಯೆ ಹೆಚ್ಚಳವಾಗಿರೋದು ಕೂಡಾ ಕಾರಣ. ಇನ್ನೂ ಅಸ್ತಮಾ ರೋಗಿಗಳು, SARI ಪ್ರಕರಣಗಳ ಸಂಖ್ಯೆ ಹೆಚ್ಚಳ ಕೂಡ ಐಸಿಯು ದಾಖಲಾತಿ ಹೆಚ್ಚಾಗಲು ಕಾರಣವಾಗ್ತಿದೆ.