ಬೆಂಗಳೂರು: ಪ್ರಸಕ್ತ ಬಜೆಟ್ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ನೀಡಿಲ್ಲ ಎಂಬ ಆರೋಪವಿತ್ತು. ಇದೀಗ ಸಿಎಂ 10 ಸಾವಿರ ಕೋಟಿ ಘೋಷಿಸಿದ್ದಾರೆ ಎಂದು ಡಿಸಿಎಂ ಗೋವಿಂದ ಎಂ. ಕಾರಜೋಳ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಜೆಟ್ನಲ್ಲಿ ನೀರಾವರಿಗೆ 21 ಸಾವಿರ ಕೋಟಿ ಅನುದಾನ ಇಡಲಾಗಿದೆ. 20 ಹಳ್ಳಿಗಳ ಸ್ಥಳಾಂತರದ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಸಿಎಂ ಅವರ ಘೋಷಣೆಗೆ ಅಭಿನಂದನೆ ಸಲ್ಲಿಸುತ್ತೇನೆ. ಕೃಷ್ಣಾ ನೀರನ್ನು ಬಳಸಿಕೊಳ್ಳಲು ಅವಕಾಶ ಸಿಕ್ಕಿದೆ. ಏಳು ವರ್ಷದಲ್ಲಿ ಒಂದು ರೂಪಾಯಿ ಹಿಂದಿನ ಸರ್ಕಾರ ಕೊಟ್ಟಿರಲಿಲ್ಲ. 173 ಟಿಎಂಸಿ ನೀರನ್ನ ಬಳಸಿಕೊಳ್ಳಲು ಅವಕಾಶ ಸಿಕ್ಕಿದೆ. ಜಮೀನು ಪರಿಹಾರ ಕೊಡೋದಕ್ಕೂ ಅವಕಾಶ ಸಿಗಲಿದೆ ಎಂದರು.
ಕೃಷ್ಣಾ 3ನೇ ಹಂತದ ಯೋಜನೆಗೆ ಪ್ರತ್ಯೇಕ ಘೋಷಣೆ ಮಾಡಿದ್ದಾರೆ. ಹಣವನ್ನೂ ಕ್ರೋಢೀಕರಣ ಮಾಡಿಕೊಳ್ಳುತ್ತೇವೆ. ಸದನದ ಕೊನೆಯಲ್ಲಿ ಇದರ ಅನುಮೋದನೆ ಪಡೆಯುತ್ತೇವೆ ಎಂದು ತಿಳಿಸಿದರು.