ETV Bharat / state

ನಾನೊಬ್ಬನೇ ತೀರ್ಮಾನ ಕೈಗೊಳ್ಳಲ್ಲ,‌ ಶಾಸಕರ ವಿಶ್ವಾಸದೊಂದಿಗೆ ಮುನ್ನಡೆಯುತ್ತೇನೆ: ಆರ್. ಅಶೋಕ್ - ಕಾಂಗ್ರೆಸ್​ ಭ್ರಷ್ಟಾಚಾರಕ್ಕೆ ಬೇಸತ್ತ ಜನ

Leader of opposition R Ashok: ''ನಾನೊಬ್ಬನೇ ತೀರ್ಮಾನ ಕೈಗೊಳ್ಳಲ್ಲ,‌ ದ್ವೇಷಭಾವ ಮಾಡಲ್ಲ, ಶಾಸಕರ ವಿಶ್ವಾಸದೊಂದಿಗೆ ಮುನ್ನಡೆಯುತ್ತೇನೆ'' ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

R. Ashok
ನಾನೊಬ್ಬನೇ ತೀರ್ಮಾನ ಕೈಗೊಳ್ಳಲ್ಲ,‌ ಶಾಸಕರ ವಿಶ್ವಾಸದೊಂದಿಗೆ ಮುನ್ನಡೆಯುತ್ತೇನೆ ಆರ್. ಅಶೋಕ್
author img

By ETV Bharat Karnataka Team

Published : Nov 18, 2023, 7:20 AM IST

Updated : Nov 18, 2023, 8:39 AM IST

ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದರು

ಬೆಂಗಳೂರು: ''ವಿಶ್ವಾಸವಿಟ್ಟು ಪ್ರತಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದ್ದೀರಿ. ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ. ನಾನೊಬ್ಬನೇ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ನಿಮ್ಮೆಲ್ಲರ ಸಹಕಾರ ಪಡೆದು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇನೆ. ನಾನು ಯಾವುದೇ ರೀತಿಯ ದ್ವೇಷ ಭಾವನೆ ಮಾಡದೆ, ನಮ್ಮೆಲ್ಲಾ ಶಾಸಕರನ್ನು ಪ್ರೀತಿಯಿಂದ ವಿಶ್ವಾಸದಿಂದ ನಡೆಸಿಕೊಳ್ಳುತ್ತೇನೆ'' ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಬಿಜೆಪಿ ಶಾಸಕರಿಗೆ ಅಭಯ ನೀಡಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು,‌ ''ಪ್ರತಿಪಕ್ಷ ನಾಯಕನ ಆಯ್ಕೆಯಾಗದೇ ಇದ್ದರೂ ನಾವು ಸದನದಲ್ಲಿ ಹೋರಾಟ ಮಾಡಿಕೊಂಡೇ ಬಂದಿದ್ದೇವೆ. ಆ ಹೋರಾಟದಲ್ಲಿ ಸದನದಿಂದ 10 ಮಂದಿಯನ್ನು ಅಮಾನತು ಮಾಡಲಾಗಿತ್ತು. ಆ ರೀತಿ ಪ್ರಬಲವಾದ ಹೋರಾಟವನ್ನು ಬಿಜೆಪಿ ಮಾಡಿತ್ತು. ಇವತ್ತು ಅಲ್ಲ, ಬಹಳ ಹಿಂದಿನಿಂದಲೂ ಇದೇ ರೀತಿ ಹೋರಾಟ ಮಾಡಿಕೊಂಡೇ ಬಂದಿದ್ದೇವೆ. ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. 34 ಸ್ಥಾನ ಇದ್ದಾಗಲೂ ಕೆಲಸ ಮಾಡಿದ್ದಾರೆ. 79 ಜನ ಇದ್ದಾಗಲೂ ಕೆಲಸ ಮಾಡಿದ್ದಾರೆ. ಅವರ ಮಾರ್ಗದರ್ಶನ ಪಡೆಯುತ್ತೇವೆ. ಅದೇ ರೀತಿ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದಾರೆ. ಅವರ ಸಹಕಾರ ಇವೆಲ್ಲವನ್ನು ಪಡೆದು ನಾವು ಮುನ್ನಡೆಯಬೇಕಿದೆ. ಅಟಲ್ ಬಿಹಾರಿ ವಾಜಪೇಯಿ ಹೇಳಿದಂತೆ ನಾವು ಸೋತಿದ್ದೇವೆ ಎನ್ನುವ ಭಯ ಬಿಟ್ಟು ಮತ್ತೆ ಸೂರ್ಯ ಉದಯಿಸುತ್ತಾನೆ. ಕಮಲ ಅರಳುತ್ತದೆ ಎನ್ನುವ ಧೈರ್ಯವನ್ನು ಕಾರ್ಯಕರ್ತರಿಗೆ ಕೊಡುವ ಮುಖಾಂತರ ಮತ್ತೆ ಮುಂದೆ ಬರುವ ಚುನಾವಣೆ ಎದುರಿಸಬೇಕು'' ಎಂದು ಶಾಸಕರಿಗೆ ಕರೆ ನೀಡಿದರು.

''ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಬಿಬಿಎಂಪಿ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ತರುವ ರೀತಿಯ ಪ್ರಯತ್ನವನ್ನು ನಾವು ಮಾಡಬೇಕಿದೆ. ನಾನು ಕೂಡ ಸಾಮಾನ್ಯ ಕಾರ್ಯಕರ್ತನಾಗಿ ಕಳೆದ 45 ವರ್ಷ ಕೆಲಸ ಮಾಡಿದ್ದೇನೆ. ಯಡಿಯೂರಪ್ಪ ನೇತೃತ್ವದಲ್ಲಿ ಈದ್ಗಾ ಮೈದಾನದ ಹೋರಾಟದಲ್ಲಿ ಭಾಗಿಯಾಗಿದ್ದೆ. ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ವಿರುದ್ಧ ಹೋರಾಟ ಮಾಡಿ ಒಂದು ತಿಂಗಳು ಜೈಲುವಾಸ ಅನುಭವಿಸಿದ್ದೆ. ಅಯೋಧ್ಯೆ ವಿಷಯದಲ್ಲಿ ಹೋರಾಟ ಮಾಡಿದ್ದೆ. ನಮ್ಮೆಲ್ಲ ಕಾರ್ಯಕರ್ತರು ಪಕ್ಷವನ್ನು ಈ ಮಟ್ಟಕ್ಕೆ ತಂದಿದ್ದಾರೆ, ಅವರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡೋಣ'' ಎಂದರು.

ಕಾಂಗ್ರೆಸ್​ ಭ್ರಷ್ಟಾಚಾರಕ್ಕೆ ಜನ ಬೇಸತ್ತಿದ್ದಾರೆ- ಆರ್. ಅಶೋಕ್: ''ನಮಗೆ ಜೆ.ಪಿ. ನಡ್ದಾ, ಅಮಿತ್ ಶಾ, ನರೇಂದ್ರ ಮೋದಿ ಅಂತ ಪ್ರಬಲ ನಾಯಕತ್ವ ಸಿಕ್ಕಿದೆ. ಕಳೆದ ಆರು ತಿಂಗಳಲ್ಲಿ ಕಾಂಗ್ರೆಸ್​ನ ದುರಾಡಳಿತ, ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಗಳ ಮಗ ವರ್ಗಾವಣೆ ದಂಧೆಯಲ್ಲಿ ಪಾಲ್ಗೊಂಡಿರುವುದು ನೋಡಿ ಜನಕ್ಕೆ ಬೇಸರವಾಗಿದೆ. ಹಾಗಾಗಿ 28ಕ್ಕೆ 28 ಕ್ಷೇತ್ರ ಬಿಜೆಪಿ ಗೆಲ್ಲಲಿದೆ. ಎಲ್ಲಾ ಕಡೆ ನಾವು ಗೆಲ್ಲುವುದು ಖಚಿತ. ಕಳೆದ ಬಾರಿ ಕಾಂಗ್ರೆಸ್ ಒಂದೇ ಒಂದರಲ್ಲಿ ಗೆದ್ದಿತ್ತು. ಅಲ್ಲಿಯೂ ಬಿಜೆಪಿ ಗೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಕಳೆದ ಬಾರಿ 25 ಗೆದ್ದಿದ್ದರೆ, ಈ ಬಾರಿ 28 ಸ್ಥಾನ ಗೆದ್ದು ದೇಶಕ್ಕೆ ಕರ್ನಾಟಕದ ಕೊಡುಗೆ ಕೊಡಬೇಕಿದೆ'' ಎಂದು ಹೇಳಿದರು.

''ವಿಧಾನ ಸಭೆಯ ಒಳಗಡೆ ನಮ್ಮ ಹೋರಾಟ ಪ್ರಾರಂಭ ಮಾಡೋಣ. ಚಳಿಗಾಲದ ಅಧಿವೇಶನದಿಂದಲೇ ಹೋರಾಟ ಪ್ರಾರಂಭ ಮಾಡೋಣ. ಹೋರಾಟದ ಮುಖಾಂತರವೇ ನಾವು ಗೆಲುವನ್ನು ಸಾಧಿಸಬೇಕು. ದೂರಾಡಳಿತದ ಕಾಂಗ್ರೆಸ್ ವಿರುದ್ಧ ನಿರಂತರವಾಗಿ ಹೋರಾಟವನ್ನು ಮಾಡಬೇಕು'' ಎಂದು ಹೇಳಿದರು.

''ನಾನು ಯಾವುದೇ ರೀತಿಯ ದ್ವೇಷ ಭಾವನೆ ಮಾಡದೇ ನಮ್ಮೆಲ್ಲಾ ಶಾಸಕರನ್ನು ಪ್ರೀತಿ ವಿಶ್ವಾಸದಿಂದ ಅವರ ಸಹಕಾರ ಪಡೆದುಕೊಂಡು ಹೋಗುತ್ತೇನೆ. ಹಿರಿಯರ ಆಶೀರ್ವಾದ, ಕಿರಿಯರ ಸಹಕಾರ ಪಡೆದು ಎಲ್ಲರೂ ಕೆಲಸ ಮಾಡೋಣ. ರೈತ ನಾಯಕರಾಗಿ ಯಡಿಯೂರಪ್ಪ ಯಾವ ರೀತಿ ರಾಜ್ಯ ಸುತ್ತಿದ್ದಾರೋ, ಕೆಲಸ ಮಾಡಿದ್ದಾರೋ, ಅವರ ಮಾರ್ಗದರ್ಶನವನ್ನು ನಾವು ಪಡೆದು ಅದೇ ರೀತಿ ಕೆಲಸ ಮಾಡೋಣ. ನಾವೆಲ್ಲರೂ ಪಕ್ಷವನ್ನು ಬೆಳೆಸೋಣ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ನಿಮ್ಮೆಲ್ಲರ ಸಹಕಾರ ಅಗತ್ಯ ರಾಜ್ಯದ ಜನ ನಮ್ಮ ಜೊತೆಗೆ ಇದ್ದಾರೆ. ಜನ ಸಹಕಾರ ಕೊಟ್ಟರೆ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಆಡಳಿತವನ್ನು ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ'' ಎಂದು ಆರ್​ ಅಶೋಕ್​ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕನಕಪುರದಲ್ಲಿ ಹೀನಾಯವಾಗಿ ಸೋತವರು ಈಗ ವಿಪಕ್ಷ ನಾಯಕ: ಕಾಂಗ್ರೆಸ್ ಟೀಕೆ

Last Updated : Nov 18, 2023, 8:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.