ಬೆಂಗಳೂರು: ನಮ್ಮ ಬೇಡಿಕೆ ಈಡೇರಿಸುವವರೆಗೆ ನಾವು ಸದನದಲ್ಲಿ ಧರಣಿ ಮುಂದುವರೆಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ನ್ಯಾಯಯುತವಾದ ಡಿಮ್ಯಾಂಡ್ ಮಾಡಿದ್ದೇವೆ. ಸಂತ್ರಸ್ತ ಹೆಣ್ಣುಮಗಳಿಗೆ ರಕ್ಷಣೆ ನೀಡಬೇಕು. ಕೂಡಲೇ ಆಕೆಯನ್ನು ಪತ್ತೆ ಹಚ್ಚಿ ಕರೆತರಬೇಕು. ಆಕೆ ವಿಡಿಯೋದಲ್ಲಿ ರಮೇಶ್ ಜಾರಕಿಹೊಳಿ ನನ್ನನ್ನು ಬಳಸಿಕೊಂಡ್ರು ಅಂತ ಹೇಳಿದ್ದಾಳೆ. ಸಮ್ಮತಿ ಇಲ್ಲದೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಹೀಗಾಗಿ ರಮೇಶ್ ವಿರುದ್ಧ ರೇಪ್ ಕೇಸ್ ದಾಖಲಿಸುವಂತೆ ಒತ್ತಾಯಿಸಿದ್ದೇನೆ. ಜೊತೆಗೆ ಆರು ಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಹೀಗಾಗಿ ಹೈಕೋರ್ಟ್ ಸಿಜೆ ನೇತೃತ್ವದಲ್ಲಿ ತನಿಖೆ ಆಗಬೇಕು. ಎಸ್ಐಟಿ ಮೇಲೆ ನಮಗೆ ನಂಬಿಕೆ ಇಲ್ಲ. ಎಸ್ಐಟಿಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ. ನಮಗೆ ಹೆಣ್ಣುಮಗಳಿಗೆ ರಕ್ಷಣೆ ಕೊಡಲಾಗದಿದ್ರೆ ನಾವು ಯಾಕೆ ಅಸೆಂಬ್ಲಿಗೆ ಬರಬೇಕು. ಎಲ್ಲಿ ಹೆಣ್ಣುಮಕ್ಕಳನ್ನ ಪೂಜಿಸ್ತಾರೆ ಅಲ್ಲಿ ಗೌರವ ಹೆಚ್ಚುತ್ತೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು.
ಮೇಟಿ ವಿಚಾರದಲ್ಲಿ ಬೆಣ್ಣೆ, ಜಾರಕಿಹೊಳಿ ವಿಚಾರದಲ್ಲಿ ಸುಣ್ಣ ಎಂಬ ಗೃಹ ಸಚಿವ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೇಟಿ ವಿಚಾರದಲ್ಲಿ ಅವರ ರಾಜೀನಾಮೆ ಪಡೆದು ತನಿಖೆ ಮಾಡಲಾಗಿತ್ತು. ತನಿಖೆ ನಡೆಸಿದ ಬಳಿಕ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಮಾಧ್ಯಮದವರ ಮೇಲೆ ಗರಂ ಆದರು.
ನಿರ್ಭಯ ಕೇಸಲ್ಲಿ ಏನ್ ಹೇಳಿದ್ದಾರೆ. ಎಫ್ಐಆರ್ ದಾಖಲು ಮಾಡಬೇಕು. ಅವರ ಡಿಮ್ಯಾಂಡ್‌ಗೆ ನಾನೂ ಒಪ್ಪಿದ್ದೆ. ನಾನು ಸಿಎಂ ಆಗಿದ್ದಾಗ ಒಪ್ಪಿ ಸಿಬಿಐಗೆ ಐದಾರು ಪ್ರಕರಣ ಕೊಟ್ಟಿದ್ದೆ. ಇವರು ಒಂದಾದ್ರೂ ತನಿಖೆಯನ್ನು ಸಿಬಿಐಗೆ ನೀಡಿದ್ದಾರಾ.? ಸೋಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್ಐಟಿ ಮಾಡಿ ಸರ್ಕಾರಕ್ಕೆ ವರದಿ ಕೊಡುವಂತೆ ಹೇಳಿದ್ದಾರೆ. ಎಸ್ಐಟಿ ಕೋರ್ಟ್ಗೆ ವರದಿ ನೀಡಬೇಕೇ ಹೊರತು ಸರ್ಕಾರಕ್ಕೆ ಅಲ್ಲ. ಹೀಗಾಗಿ ನಾವು ನಮ್ಮ ಧರಣಿ ಮುಂದುವರೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ.. ಗೋಡೆ ಕುಸಿದು ಸೂರತ್ನಲ್ಲಿ ಐವರು ಮೃತಪಟ್ಟಿರುವ ಶಂಕೆ.. ದೇಶದಲ್ಲಿಂದು ಜವರಾಯನ ಅಟ್ಟಹಾಸಕ್ಕೆ ಇನ್ನೆಷ್ಟು ಬಲಿ?