ETV Bharat / state

ನೋಟಿಸ್​​ ನನ್ನ ಕೈ ಸೇರಿಲ್ಲ, ನಾನು ಯಾವುದಕ್ಕೂ ಅಂಜುವುದಿಲ್ಲ; ಯತ್ನಾಳ್ ಗುಡುಗು

ನನಗಿನ್ನೂ ನೋಟಿಸ್​​ ಬಂದಿಲ್ಲ. ಯಾವ ನೋಟಿಸ್​​ ಏನೋ, ನಾನಂತೂ ಪಕ್ಷದ ವಿರುದ್ಧ ಮಾತನಾಡಿಲ್ಲ. ರಾಷ್ಟ್ರೀಯ ನಾಯಕರ ವಿರುದ್ಧವೂ ಹೇಳಿಕೆ ಕೊಟ್ಟಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

basanagowda patil yathnal
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
author img

By

Published : Feb 12, 2021, 6:35 PM IST

Updated : Feb 12, 2021, 7:35 PM IST

ಬೆಂಗಳೂರು: ಬಿಜೆಪಿ ಹೈಕಮಾಂಡ್​ನಿಂದ ಈವರೆಗೂ ಯಾವುದೇ ನೋಟಿಸ್​​ ನನಗೆ ಬಂದಿಲ್ಲ. ನನಗೆ ಅಧಿಕೃತ ನೋಟಿಸ್​​ ಪ್ರತಿ ಬಂದ ಮೇಲೆ ಅದರಲ್ಲಿ ಏನು ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಶಾಸಕರ ಭವನದಲ್ಲಿ ಇಂದು ಸಂಜೆ ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ್​​, ನನಗಿನ್ನೂ ನೋಟಿಸ್​​ ಬಂದಿಲ್ಲ. ಯಾವ ನೋಟಿಸ್​​ ಏನೋ, ನಾನಂತೂ ಪಕ್ಷದ ವಿರುದ್ಧ ಮಾತನಾಡಿಲ್ಲ. ರಾಷ್ಟ್ರೀಯ ನಾಯಕರ ವಿರುದ್ಧವೂ ಹೇಳಿಕೆ ಕೊಟ್ಟಿಲ್ಲ ಎಂದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಇಂದು ಮಾಧ್ಯಮಗಳಲ್ಲಿ, ನನಗೆ ನೋಟಿಸ್​​ ಕೊಟ್ಟಿದ್ದಾರೆ ಅಂತಾ ಸುದ್ದಿ ಬರುತ್ತಿದೆ. ಆದರೆ ನೋಟಿಸ್​​ ಪ್ರತಿ ಇನ್ನೂ ನನ್ನ ಕೈ ಸೇರಿಲ್ಲ. ಊಹಾಪೋಹದ ಆಧಾರದಲ್ಲಿ ನಾನು ಮಾತನಾಡಲ್ಲ. ನಾನು ನಾಳೆ ಸೃಷ್ಟೀಕರಣ ನೀಡುತ್ತೇನೆ. ನೋಟಿಸ್​​ ಪ್ರತಿ ನಿಮ್ಮಲ್ಲೇನಾದರೂ ಇದ್ದರೆ ಕೊಡಿ ನಾನೂ ಓದಬೇಕು ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: ಸರ್ಕಾರಕ್ಕೆ ಮುಜುಗರ ತಂದ ಆರೋಪ; ಶಾಸಕ ಯತ್ನಾಳ್​ಗೆ ಪಕ್ಷದ ಶೋಕಾಸ್ ನೋಟಿಸ್

ನಾನು ಯಾವುದಕ್ಕೂ ಅಂಜುವುದಿಲ್ಲ. ನಾನು‌ ಸತ್ಯದ ಪರವಾಗಿ ಇರುವವನು. ಯಾವ ಶಾಕ್ ಕೂಡ ನನಗೆ ಆಗಿಲ್ಲ, ಕ್ಷಮೆ ಕೂಡ ಕೇಳುವವನಲ್ಲ. ಮಾಧ್ಯಮಗಳೇ ತಿರುಚಿ ಸುದ್ದಿ ಮಾಡಿರಬಹುದು. ನೋಟಿಸ್ ಬರಲಿ, ಬಂದ ನಂತರ ಸೂಕ್ತ ಉತ್ತರ ಕೊಡೋಣ ಎಂದರು.

ಮಂತ್ರಿ ಆಗುವ ಆಸೆ ಇಲ್ಲ: ಮಂತ್ರಿ ಆಗಿಲ್ಲ ಎನ್ನುವ ಅಸಮಧಾನದಿಂದ ಯತ್ನಾಳ್ ಹೀಗೆ ಮಾತನಾಡುತ್ತಿದ್ದಾರೆ ಅಂತಾ ಮಾಧ್ಯಮಗಳು ಸುದ್ದಿ ಮಾಡುತ್ತಿವೆ. ಆದರೆ ಅಂತಹ ಯಾವುದೇ ಉದ್ದೇಶ ನನ್ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಎಲ್ಲವನ್ನೂ ನೇರವಾಗಿ ಹೇಳುವವನು. ನಾನು ನೇರ ರಾಜಕಾರಣ ಮಾಡುವವನು, ಸತ್ಯದ ಪರವಾಗಿ ರಾಜಕಾರಣ ಮಾಡುವವನು ಎಂದು ತಿರುಗೇಟು ನೀಡಿದರು.

ನಾನು ಯಡಿಯೂರಪ್ಪರವರ ಪರ ಅಲ್ಲ : ನಾನು ಯಡಿಯೂರಪ್ಪನವರ ಪರ ಎಂದು ಎಲ್ಲೂ‌ ಹೇಳಿಲ್ಲ. ನಾನು ಯಾವಾಗಲೂ ಜನಪರವೇ. ಸಮುದಾಯ ವಿಚಾರ ಬಂದಾಗಲೂ ಎಲ್ಲಾ ಸಮುದಾಯಗಳಿಗೂ ಅವಕಾಶ ಕೊಡಿ ಅಂದಿದ್ದೇನೆ. ಕುರುಬ, ದಲಿತ, ಮರಾಠ ಮೀಸಲಾತಿ ಬಂದಾಗಲೂ ಅದನ್ನೇ‌ ಹೇಳುತ್ತಿದ್ದೇನೆ. ಮೀಸಲಾತಿ ಎಲ್ಲರಿಗೂ ಕೊಡಲಿ ಎಂದು ಹೇಳಿದರು.

ಅಸಮಾಧಾನ ಆಗಿಲ್ಲ: ನನ್ನನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾನಗೆ ಅಸಮಾಧಾನವೇ ಆಗಿಲ್ಲವಲ್ಲ ಎಂದರು. ಉತ್ತರ ಕರ್ನಾಟಕದವರು ಸಿಎಂ ಆಗದಂತೆ ಮಾಡುತ್ತಿದ್ದೀರಿ ಎಂದು ಮಾಧ್ಯಮಗಳಿಗೆ ತಿಳಿಸಿದರು.

ನಾಯಕತ್ವ ಬದಲಾವಣೆ ವಿಚಾರ: ಇನ್ನೂ ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಹೇಳಿಕೆ ಬಗ್ಗೆ ಗಂಭೀರತೆ ಇಲ್ಲವಾದರೆ ಸಿಎಂ ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಸುದ್ದಿ ಹಾಕಲೇಬೇಡಿ ಎಂದು ಉತ್ತರಿಸಿದರು.

ನಿಧಾನವಾಗಿ‌ ಸ್ಫೋಟ: ಮುಖ್ಯಮಂತ್ರಿ ಯಡಿಯೂರಪ್ಪ ಕರೆದ ಔತಣ ಕೂಟಕ್ಕೆ ಶಾಸಕರ ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, 41 ಮಂದಿ ಶಾಸಕರು ಹೋಗಿಲ್ಲ. ನಾಮಕಾವಸ್ತೆಗೆ ಕೆಲವರು ಹೋಗಿದ್ದರು. ಕ್ರಾಂತಿಯನ್ನು ಯಾರೂ ಕೂಡ ತಡೆಯೋಕೆ ಆಗಲ್ಲ. ಆದರೆ ಒಂದೇ ಬಾರಿಗೆ ಸ್ಫೋಟವಾಗಲ್ಲ. ನಿಧಾನವಾಗಿ‌ ಹೋಗಿ ಸ್ಫೋಟವಾಗುತ್ತದೆ ಎಂದರು.

ನಾನೇ ಸಿಎಂ ಆಗುತ್ತೇನೆಂದು ಹೇಳಿಲ್ಲ: ಉತ್ತರ ಕರ್ನಾಟಕದವರು ಸಿಎಂ ಆಗುತ್ತಾರೆಂದು ಹೇಳಿದ್ದೇನೆ, ನಾನೇ ಸಿಎಂ ಆಗುತ್ತೇನೆಂದು ಹೇಳಿಲ್ಲ. ನೀವು (ಮಾಧ್ಯಮ) ಪಾರದರ್ಶಕವಾಗಿ ರಾಜ್ಯದ ವಿಚಾರವನ್ನು ತೆರೆದಿಡಿ. ಆಗಲೇ ಕ್ರಾಂತಿಯಾಗುತ್ತದೆ ಎಂದು ಹೇಳಿದರು.

ಶಾಸಕಾಂಗ ಪಕ್ಷದ ಸಭೆಯನ್ನು ಯಾಕೆ‌ ಕರೆಯುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ವಿಭಾಗವಾರು ಶಾಸಕರ ಸಭೆ ಕರೆದಿದ್ದೇಕೆ? ಎಂದು ಕೇಳಿದರು.

ನಾಳೆ ಲಿಂಗಾಯತ ಮಠಾಧೀಶರ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲರಿಗೂ ಮೀಸಲಾತಿ ಕೊಡಲಿ. ಮಠಾಧೀಶರು ಕರೆದಿರುವ ಸಭೆ ಒಳ್ಳೆಯದೇ. ಇಡೀ ವೀರಶೈವ, ಲಿಂಗಾಯತರಿಗೆ ಕೊಡಲಿ. ನಮ್ಮಂತವರಿಗೆ ಅಲ್ಲ, ಬಡವರಿಗೆ ಮೀಸಲಾತಿ ಕೊಡಲಿ ಎಂದರು.

ಪಂಚಮಸಾಲಿ ಹೋರಾಟ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಕೇವಲ ಪತ್ರ ಬರೆದಿದ್ದಾರೆ. ಪತ್ರವೇನು ಎಷ್ಟು ಬೇಕಾದರೂ ಬರೆಯಬಹುದು. ಪತ್ರಕ್ಕೆ ಜೀವ ಇರಬೇಕಲ್ಲ. ಹಿಂದುಳಿದ ಆಯೋಗ ವರದಿ ಕೊಡಬೇಕಲ್ಲವೇ?. ಸಿಎಂ ಶಾಸಕರಿಗೆ ಎಷ್ಟು ಅನುದಾನದ ಪತ್ರ ಬರೆದಿಲ್ಲ. ಜಮೀರ್ ಅಹಮದ್ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಇಷ್ಟು ಅಂತ ಪತ್ರ ಸಿಎಂ ಕೊಟ್ಟಿಲ್ಲವೇ?. ನಮಗೇಕೆ ಅನುದಾನವನ್ನು ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೂವರು ಸಿ.ಡಿ ಮ್ಯಾನ್​​ಗಳು ಸಂಪುಟದೊಳಗಿದ್ದಾರೆ ಎಂದು ಪರೋಕ್ಷವಾಗಿ ನುಡಿದ ಅವರು, ಹೈಕಮಾಂಡ್ ಸೂಕ್ತ ನಿರ್ಣಯ‌ವನ್ನು ಸಮಯ ನೋಡಿ ತೆಗೆದುಕೊಳ್ಳುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಯುವರಾಜ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯುವರಾಜ್ ಎಷ್ಟು ಬಾರಿ ಸಿಎಂ ಮತ್ತು ವಿಜಯೇಂದ್ರರನ್ನು ಭೇಟಿ ಮಾಡಿಲ್ಲ. ಅವರ ಜೊತೆ ಫೋಟೋ ಅನ್ನು ಯಾಕೆ ನೀವು ಹಾಕುತ್ತಿಲ್ಲ. ನಡ್ಡಾ ಜೊತೆ ಇರುವ ಫೋಟೋ ಮಾತ್ರ ಹಾಕುತ್ತೀರ. ನಮ್ಮ ರಾಷ್ಟ್ರೀಯ ನಾಯಕರ ಮರ್ಯಾದೆ ತೆಗೆಯುತ್ತೀರಾ ಎಂದು ಮಾಧ್ಯಮಗಳ ಮೇಲೆ ಗರಂ ಆದರು.

ಕುಟುಂಬ ರಾಜಕಾರಣ ಹೊರತಾಗಿ ಮಾತನಾಡಿದ್ದೇನೆ. ಒಂದು ಕುಟುಂಬದಲ್ಲಿ ಒಬ್ಬರೇ ರಾಜಕಾರಣದಲ್ಲಿರಬೇಕು. ಕಾರ್ಯಾಕರ್ತರೇನು ಹಮಾಲಿ‌ ಕೆಲಸ ಮಾಡಲು ಇರುವುದೇ? ಕಾರ್ಯಕರ್ತರಿಗೆ ಟಿಕೆಟ್ ಕೊಡಿ. ಮನೆಮಕ್ಕಳಿಗೆಲ್ಲ ಯಾಕೆ ಟಿಕೆಟ್ ಕೊಡಬೇಕು ಎಂದು ಬಿಎಸ್​ವೈ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಅರುಣ್ ಸಿಂಗ್ ಹೇಳಿಕೆ ಸ್ವಾಗತ: ಅರುಣ್ ಸಿಂಗ್ ನೋಟಿಸ್ ಕೊಟ್ಟ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಅರುಣ್ ಸಿಂಗ್ ಹೇಳಿಕೆ‌ ಸ್ವಾಗತಿಸುತ್ತೇನೆ. ಅದಕ್ಕೆ ಬೇಕಾದ ಉತ್ತರವನ್ನೂ ನಾನು ಕೊಡುತ್ತೇನೆ. ನನಗೆ ನೋಟಿಸ್​ ಕೊಡೋಕೆ ಡಿಮ್ಯಾಂಡ್ ಇತ್ತು. ನನ್ನ ಮಾತಿಗೆ ಅಷ್ಟು ಡಿಮ್ಯಾಂಡ್ ಇದೆ ನೋಡಿ ಎಂದ ಅವರು ನಾನು ಎಲ್ಲವನ್ನೂ ಎದುರಿಸುತ್ತೇನೆ. ನನ್ನನ್ನು ಮೂರು ಬಾರಿ ಉಚ್ಛಾಟನೆ ಮಾಡಿದ್ದಾರೆ. ನಾನು ಯಾವತ್ತೂ ಹೆದರಿದವನಲ್ಲ.

ಪಕ್ಷೇತರನಾಗಿ ನಾನು ಪರಿಷತ್​ಗೆ ಬಂದಿದ್ದೆ. ನನ್ನನ್ನು ಅಮಿತ್ ಶಾ ಅವರೇ ಕರೆದು ಅವಕಾಶ ಕೊಟ್ಟರು. ಅವರ ಸೂಚನೆ ಮೇರೆಗೆ ನಾನು ಬಿಜೆಪಿಗೆ ಸೇರಿದ್ದು, ಯತ್ನಾಳ್ ಪಕ್ಷಕ್ಕೆ ಲಾಭ ಅಂತಾನೇ ತೆಗೆದುಕೊಂಡಿದ್ದು ಎಂದು ಹೇಳಿದರು.

ಸತ್ಯ ಮೇವ ಜಯತೆ: ಸತ್ಯ ಮೇವ ಜಯತೆ, ನ ದೈನಂ ನ ಪಲಾಯನಮ್ ಎಂದು ಯತ್ನಾಳ ಅವರು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

Last Updated : Feb 12, 2021, 7:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.