ETV Bharat / state

ನನಗೆ ಗೋವಿಂದರಾಜನಗರ ಇದೆ, ಮತ್ತೊಂದು ಕ್ಷೇತ್ರದ ಅಗತ್ಯ ಇಲ್ಲ: ವಿ.ಸೋಮಣ್ಣ

author img

By

Published : Mar 21, 2023, 1:13 PM IST

ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಗಾಳಿಮಾತಿಗೆ ವಿ.ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.

Minister V Somanna
ವಸತಿ ಸಚಿವ ವಿ ಸೋಮಣ್ಣ

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಚುನಾವಣೆಗೆ ನಿಲ್ಲುವ ವಿಚಾರವನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಆದರೆ ನನಗೆ ಈಗಾಗಲೇ ಗೋವಿಂದರಾಜನಗರ ಕ್ಷೇತ್ರವಿದೆ, ಕೆಲಸ ಮಾಡಲು ಚಾಮರಾಜನಗರ ಕ್ಷೇತ್ರವಿದೆ. ಹಾಗಾಗಿ ಮತ್ತೊಂದು ಕ್ಷೇತ್ರದ ಅಗತ್ಯ ನನಗಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ, ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲ್ಲ, ಕ್ಷೇತ್ರ ಬದಲಾವಣೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಸ್ಪರ್ಧೆ ವಿಚಾರ ನಿರಾಧಾರ. ಮಾಧ್ಯಮಗಳು ಯಾಕೆ ನನ್ನ ವಿಷಯದಲ್ಲಿ ಮಲತಾಯಿ ಧೋರಣೆ ತೋರಿಸ್ತೀರಿ? ಶಕ್ತಿಗಿಂತ ಅದೃಷ್ಟ ಮುಖ್ಯ, ಅದಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ರಾಜ್ಯದಲ್ಲಿ ಒಬ್ಬ ಸರ್ವೋಚ್ಛ ನಾಯಕರು, ಅವರ ವಿರುದ್ಧ ಸ್ಪರ್ಧೆ ಮಾಡುವ ಬಗ್ಗೆ ತೀರ್ಮಾನ ಮಾಡೋದು ಹೈಕಮಾಂಡ್​ಗೆ ಬಿಟ್ಟಿದ್ದು. ನಾನು ಬೇರೆಯವರ ತರಹ ಏನೂ ಮಾತನಾಡಲ್ಲ. ಅದರ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಈಗಾಗಲೇ ನನಗೆ ನನ್ನ ಕ್ಷೇತ್ರ ಇದೆ. ಗೋವಿಂದರಾಜನಗರ ಪ್ರತಿನಿಧಿಸುತ್ತಿದ್ದೇನೆ. ಅದಕ್ಕೂ ಮೀರಿ ಚಾಮರಾಜನಗರಕ್ಕೆ ಹೋಗಿ ಅಲ್ಲಿ ನೀವು ಕೆಲಸ ಮಾಡಿ ಎಂದು ನನಗೆ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಹೀಗಿರುವಾಗ ನನ್ನನ್ನು ಯಾಕೆ ವರುಣಾಗೆ ತಂದು ಹಾಕ್ತೀರಿ..? ಆ ರೀತಿಯ ಗೊಂದಲಗಳು ಬೇಡ, ನಮ್ಮ ಪಕ್ಷದಲ್ಲಿ ಸಾಕಷ್ಟು ಅಭ್ಯರ್ಥಿಗಳು ಇದ್ದಾರೆ. ಸಿದ್ದರಾಮಯ್ಯ ಎದುರು ತಕ್ಕ ಅಭ್ಯರ್ಥಿಯನ್ನು ನಮ್ಮ ಪಾರ್ಟಿ ಹಾಕುತ್ತದೆ ಎಂದರು.

ಯಡಿಯೂರಪ್ಪಗೆ 80 ವರ್ಷ, ನನಗೆ 72 ವರ್ಷ ನನಗೆ ಇನ್ನೊಂದು ಅವಕಾಶ ಸಿಗಬಹುದು, ಸಿಗದೆಯೂ ಇರಬಹುದು. ಚಾಮರಾಜನಗರಕ್ಕೆ ಹೋಗಿ ಅಲ್ಲಿ ಕೆಲಸ ಶುರು ಮಾಡಿ ಎಂದು ನನಗೆ ಹೈಕಮಾಂಡ್ ಹೇಳಿದೆ. ಹೀಗಾಗಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ನಾನು ಅಲ್ಲಿ ಕೆಲಸ ಮಾಡುತ್ತೇನೆ. ನನಗೆ ಯಾಕೆ ಬೇರೆ ಕ್ಷೇತ್ರ, ನನಗೆ ಗೋವಿಂದರಾಜನಗರ ಕ್ಷೇತ್ರವೇ ಇದೆ. ನಾನು ಎಲ್ಲಾದರೂ ನಿಲ್ಲಬೇಕು ಅಂದರೆ ಬೇರೆ ಯಾರು ಬೇಡ ಅನ್ನೋದಿಲ್ಲ, ಹನೂರಿನಲ್ಲಿ ನಿಲ್ಲಲು ಮುಂದಾದರೂ ವಿರೋಧಿಸಲ್ಲ, ಆದರೆ ಅಮಿತ್ ಶಾ ಅವರು ನನ್ನ ಕರೆದು ಮಾತನಾಡಿ ಕೆಲ ಜವಬ್ದಾರಿ ಕೊಟ್ಟಿದ್ದಾರೆ. ಆ ಜವಾಬ್ದಾರಿಯನ್ನು ನಾನು ಅಲ್ಲಿ ನಿರ್ವಹಣೆ ಮಾಡುತ್ತೇನೆ. ಹನೂರಿನಲ್ಲಿ ನಾನು ಹಿಂದೆಯೇ ಸೆಟಲ್ ಆಗಿದ್ದೆ. ಇವಾಗ ಅಲ್ಲಿ ಯಡಿಯೂರಪ್ಪ ಯಾರಿಗೆ ಟಿಕೆಟ್ ಕೊಡಿಸುತ್ತಾರೆ ಎಂದು ಅವರನ್ನೇ ಕೇಳಿ, ಆದರೆ ನನಗೆ ಗೋವಿಂದರಾಜನಗರವೇ ಇದೆ ಎಂದರು.

ಸೋಮಣ್ಣ ಜೊತೆ ಮಾತಾಡುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಆ ಪಕ್ಷದ ಹೈಕಮಾಂಡ್ ಸೂಚಿಸಿದ ವಿಚಾರವನ್ನು ಅಲ್ಲಗಳೆದ ಸೋಮಣ್ಣ, ಇದೆಲ್ಲ ನಿಮಗೆ ಯಾರು ಹೇಳಿದ್ದು ಎಂದು ಮಾಧ್ಯಮಗಳನ್ನೇ ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರ ಜೊತೆಗಿನ ಮಾತಿನ ಗುಟ್ಟು ಬಿಟ್ಟು ಕೊಡದೆ ನುಣುಚಿಕೊಂಡರು.

ವಿಜಯ ಸಂಕಲ್ಪ ರಥಯಾತ್ರೆ ಕಡೆ ಸೋಮಣ್ಣ ಗಮನ ಕೊಡದ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಸೋಮಣ್ಣ, ನನಗೆ ಅನಿಸಿದ್ದನ್ನು ನಾನು ಮಾಡುತ್ತೇನೆ. 45 ವರ್ಷಗಳ ಕಾಲ ರಾಜಕಾರಣದಲ್ಲಿ ಮಣ್ಣು ಹೊತ್ತಿದ್ದೇನೆ. ಸ್ವತಂತ್ರವಾಗಿ ಬೆಂಗಳೂರಲ್ಲಿ ಗೆದ್ದಿದ್ದೇನೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷದಿಂದ ನಿಂತು ನಾನು ಗೆದ್ದಿದ್ದೇನೆ. ನನಗೆ ಇನ್ನು ಏನೂ ಆಗಬೇಕಾಗಿಲ್ಲ. ನಾನು ಇನ್ನೊಬ್ಬರನ್ನು ತೃಪ್ತಿ ಪಡಿಸುವ ಅಗತ್ಯ ಇಲ್ಲ, ನನಗೆ ಅನಿಸಿದ್ದನ್ನು ನಾನು ಮಾಡಿದ್ದೇನೆ. ಅಂತಿಮವಾಗಿ ಅದನ್ನು ಸ್ವೀಕಾರ ಮಾಡೋದು ಪಕ್ಷಕ್ಕೆ ಬಿಟ್ಟಿದ್ದು, ಆದರೆ ನಾನೊಬ್ಬ ಶಿಸ್ತಿನ ಸಿಪಾಯಿ, ಸುಳ್ಳು ಹೇಳಿಕೊಂಡು ಯಾವತ್ತಿಗೂ ನಾನು ರಾಜಕಾರಣ ಮಾಡಿಲ್ಲ. ಪಕ್ಷ ಈ ರೀತಿ ಮಾಡು ಅಂತಾ ಹೇಳಿದೆ. ಅದನ್ನು ನಾನು ಮಾಡ್ಡಿದ್ದೇನೆ, ಪಕ್ಷ ಬೇಡ ಅಂದರೆ ಸುಮ್ಮನೆ ಆಗುತ್ತೇನೆ ಎಂದರು.

ಇದನ್ನೂ ಓದಿ: 'ಶಿಗ್ಗಾಂವಿ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ': ವದಂತಿಗಳಿಗೆ ತೆರೆ ಎಳೆದ ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.