ETV Bharat / state

ಸೋಲಿನ ನೈತಿಕ ಜವಾಬ್ದಾರಿ ವಹಿಸಿ ರಾಜೀನಾಮೆ: ದಿನೇಶ್ ಗುಂಡೂರಾವ್

author img

By

Published : Dec 9, 2019, 5:40 PM IST

ಉಪಚುನಾವಣೆ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

dinesh-gundurao
ದಿನೇಶ್ ಗುಂಡೂರಾವ್

ಬೆಂಗಳೂರು: ಉಪಚುನಾವಣೆ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ಚುನಾವಣೆ ಪೂರ್ವದಲ್ಲಿ ಮೈತ್ರಿ ಸರ್ಕಾರದಲ್ಲಿ ರಾಹುಲ್ ಗಾಂಧಿ ಈ ಜವಾಬ್ದಾರಿ ನೀಡಿದ್ದರು. ಅಂದಿನಿಂದ ಪ್ರತಿ ದಿನ ಒಂದೊಂದು ಘಟನೆ ಆಗುತ್ತಲೆ ಇತ್ತು. ಸರ್ಕಾರ ಅಸ್ಥಿರಗೊಳಿಸುವ ಸಂಚು ನಡೆಯುತ್ತಲೇ ಇತ್ತು. ನಾನು ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಎಲ್ಲ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಸಮಾಧಾನದಿಂದ ಪಕ್ಷವನ್ನು ಕಟ್ಟಿದ್ದೇನೆ. ಫಲಿತಾಂಶದ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದರು.

ದಿನೇಶ್ ಗುಂಡೂರಾವ್

ಇದು ಉಪ ಚುನಾವಣೆಯಾದ್ದರಿಂದ ನೀವೇ ತೀರ್ಮಾನ ಮಾಡಿ ಎಂದು ಎಐಸಿಸಿಯವರು ಮಧ್ಯಸ್ಥಿಕೆ ವಹಿಸಿರಲಿಲ್ಲ, ಎಲ್ಲಾ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದರೂ ಕೂಡಾ ಅಂತಿಮವಾಗಿ ನನ್ನ ಒಪ್ಪಿಗೆ ಪಡೆಯದೇ ಯಾವುದೇ ತೀರ್ಮಾನವನ್ನು ಕೈಗೊಳ್ಳುತ್ತಿರಲಿಲ್ಲ, ಹಾಗಾಗಿ ಇದರಲ್ಲಿ ನನಗೆ ನೈತಿಕ ಹಾಗೂ ರಾಜಕೀಯ ಜವಾಬ್ದಾರಿ ಇದೆ, ಆದ್ದರಿಂದ ನಾನು ನಿನ್ನೆಯೇ ನಮ್ಮ ಹಿರಿಯ ನಾಯಕರೊಂದಿಗೆ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ್ದು, ಏನಾದರೂ ಹೆಚ್ಚು ಕಡಿಮೆ ಆದ್ರೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದೆ ಎಂದಿದ್ದಾರೆ.

ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದರಿಂದ ಇದರಲ್ಲಿ ನನಗೆ ಯಾವುದೇ ನೋವಿಲ್ಲ. ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ಮಾಡಿದ್ದೇನೆ, ಮುಂದಿನ ತೀರ್ಮಾನವನ್ನು ಎಐಸಿಸಿ ಕೈಗೊಳ್ಳಲಿದ್ದು ನನ್ನ ಸಹಕಾರ ಯಾವಾಗಲೂ ಇರಲಿದೆ. ಈ ದೇಶಕ್ಕೆ ಕಾಂಗ್ರೆಸ್ ಪಕ್ಷದ ಅವಶ್ಯಕತೆಯಿದೆ ಎಂದರು.

Intro:Body:ರಾಜ್ಯದಲ್ಲಿ ನಡೆದ ಚುನಾವಣೆಗಳಲ್ಲಿ ಸತತವಾಗಿ ಕಾಂಗ್ರೆಸ್ ಸೋಲು ಕಂಡ ಪರಿಣಾಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಸಲ್ಲಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಗುಂಡೂರಾವ್ ಮಾತನಾಡುತ್ತಿದ್ದಾರೆ.

15 ಫಲಿತಾಂಶ ಹೊರಬಂದಿದೆ.. ಫಲಿತಾಂಶ ನಾವು ನೀರಿಕ್ಷಿಸಿದ ಹಾಗಿಲ್ಲ. ಜನತಾ ನ್ಯಾಯಾಲಯ ಪಕ್ಷಾಂತರಿಗಳನ್ನು ಒಳ್ಳೆಯ ತೀರ್ಪು ನೀಡಬಹುದು ಎಂದು‌ಕೊಂಡಿದ್ದೆವು. ಸ್ಥಳೀಯ ಮಟ್ಟದ ಕಾರ್ಯಕರ್ತರ ಸಲಹೆಯಂತೆ ಅಭ್ಯರ್ಥಿಗಳ ಆಯ್ಕೆ ನಡರದಿತ್ತು. ಸಿದ್ದು, ಡಿಕೆಶೀ ಸೇರಿದಂತೆ ಕಾರ್ಯಕರ್ತರು, ನಾಯಕರು ಹಗಲಿರುಳುಲು ಪ್ರಯತ್ನಮಾಡಿದ್ಸರು.
ಅಂತಿಮವಾಗಿ ಪ್ರಜೆಗಳು ನೀಡಿದ ತೀರ್ಮಾನವೇ ಅಂತಿಮ. ಅದಕ್ಕೆ ಗೌರವಿಸಿ ಮತ್ತು ತಪ್ಪಾಗಿ ಗ್ರಹಿಸಲು ಹೋಗುವುದಿಲ್ಲ. ನೋವಾಗಿದೆ, ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ. ಜನಾಭಿಪ್ರಾಯ ಬೇರೆಯೆ ಆಗಿದೆ. ಗೆದ್ದಿರುವ ಅಭ್ಯರ್ಥಿಗಳಿಗೆ ಶುಭಾಶಯ.
ರಿಜ್ವಾನ್, ಮಂಜುನಾಥ ಹಾಗೂ ಶರತ್ ಬಚ್ಚೆಗೌಡ ಅವರಿಗೂ ಅಭಿನಂದನೆ. ಎಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂಬುದು ನನ್ನ ನಂಬಿಕೆ.
ಲೋಕಸಭಾ ಚುನಾವಣೆ ಆಗಿದ್ದರಿಂದ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ನ್ಯಾಯಾಲಯದಲ್ಲಿ ಅನರ್ಹರ ಹೋರಾಟ

ಎಐಸಿಸಿ ಕೆಪಿಸಿಸಿ ಮೇಲೆ ನಂಬಿಕೆ ಇಟ್ಟಿದ್ದರು. ಎಲ್ಲಾ ರೀತಿಯ ಮುಕ್ತ ಸಹಕಾರ ನೀಡಿದ್ದರು. ಆದರೆ, ಏನೇ
ನನ್ನ ನೈತಿಕ ಜವಾಬ್ದಾರಿ ಇದೆ. ನಾನು ಕೂಡ ನಿನ್ನೆಯೆ ಹೇಳಿದ್ದೆ. ಫಲಿತಾಂಶ ಬಗ್ಗೆ ಅನುಮಾನ ಇದೆ. ಕಳೆದ ಚುನಾವಣೆ ಪೂರ್ವದಲ್ಲಿ ಮೈತ್ರಿ ಸರ್ಕಾರದಲ್ಲಿ ರಾಹುಲ್ ಗಾಂಧಿ ಜವಾಬ್ದಾರಿ ನೀಡಿದ್ದರು.
ಪ್ರತಿ ದಿನ ಘಟನೆ ಆಗುತ್ತಲೆ ಇತ್ತು. ಚುನಾವಣೆಗಳು, ಸರ್ಕಾರ ಅಸ್ಥಿರಗೊಳಿಸುವುದು ಸೇರಿದಂತೆ ಹತ್ತು ಹಲವು.ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಹೊಂದಾಣಿಕೇ ಮಾಡಿಕೊಂಡು, ಸಮಾಧಾನದಿಂದ ಪಕ್ಷವನ್ನು ನಡೆಸಿದ್ದೇನೆ. ಆದರೂ ಈ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದೇನೆ.
ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ. ಪಕ್ಷ ಕಟ್ಟಲು
ನನ್ನ ಸಹಕಾರ ಎಂದಿಗೂ ಇದೆ. ಕಾಂಗ್ರೆಸ್ ಪಕ್ಷ ಅಗತ್ಯವಿದೆ.

ಸೋನಿಯಾ ಗಾಂಧಿ ಅವರು ಏನೇ ತೀರ್ಮಾನ ತೆಗೆದುಕೊಂಡರು ಅದಕ್ಕೆ ಬದ್ಧ. Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.