ಬೆಂಗಳೂರು: ಕೊರೊನಾ ಸೋಂಕು ಮಂಡ್ಯ ಜಿಲ್ಲೆಯಲ್ಲಿಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಆರೋಗ್ಯ ಸಚಿವ ಡಾ.ಸುಧಾಕರ್ ಅವರನ್ನು ಭೇಟಿ ಮಾಡಿದ್ದಾರೆ.
ಸುಧಾಕರ್ ಭೇಟಿ ಬಳಿಕ ಮಾತನಾಡಿದ ಸುಮಲತಾ, ಮಂಡ್ಯ ಜಿಲ್ಲೆ ಕೋವಿಡ್ ವಿಷಯವಾಗಿ ಚರ್ಚೆ ಮಾಡಿದ್ದೇವೆ. ಆಕ್ಸಿಜನ್ ಬೇಕಾಗುವಷ್ಟು ಪೂರೈಕೆ ಮಾಡಲು ಕೇಳಿದ್ದೇನೆ, ಸದ್ಯ ಇರುವ ರೋಗಿಗಳಿಗೆ ಆಕ್ಸಿಜನ್ ಇದೆ. ಆದರೆ ಇನ್ನಷ್ಟು ಆಕ್ಸಿಜನ್ ಬೆಡ್‌ಗಳ ಅವಶ್ಯಕತೆ ಇದೆ ಎಂದರು.
ನಮ್ಮ ಜಿಲ್ಲೆಯಲ್ಲಿ ಆಕ್ಸಿಜನ್ ಪ್ಲಾಂಟ್ ಮಾಡುವಂತೆ ಕೇಳಿದ್ದೆವು. ಮೂರು ನಾಲ್ಕು ವಾರಗಳಲ್ಲಿ ಮಾಡಿಕೊಡ್ತೀವಿ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಮಂಡ್ಯ ಮತ್ತು ಮಳವಳ್ಳಿಯಲ್ಲಿ ಆಕ್ಸಿಜನ್ ಜನರೇಟರ್ಸ್ ಮಾಡುತ್ತೇವೆ ಎಂದು ಹೇಳಿದ್ದರು ಈ ಬಗ್ಗೆ ಚರ್ಚಿಸಿದ್ದೇನೆ ಎಂದು ಹೇಳಿದರು.
ಸದ್ಯಕ್ಕೆ ಜಿಲ್ಲೆಗೆ ಸ್ವಲ್ಪ ವ್ಯಾಕ್ಸಿನ್ ಕೊರತೆ ಇದೆ. ಎರಡನೇ ಡೋಸ್ನವರಿಗೆ ಮೊದಲ ಆದ್ಯತೆ ಕೊಡುತ್ತೇವೆ. ಬಳಿಕ ವ್ಯಾಕ್ಸಿನ್ ಬಂದ ಮೇಲೆ ಮೊದಲ ಡೋಸ್ ಕೂಡ ಸಿಗುತ್ತದೆ. ಈ ಸಮಸ್ಯೆ ಇಡೀ ದೇಶದಲ್ಲಿ ಇದೆ. ನಮ್ಮ ಕರ್ನಾಟಕದಲ್ಲಿ ಸ್ವಲ್ಪ ಕೇಸ್ ಜಾಸ್ತಿಯಾಗಿದೆ. ಈ ನಿಟ್ಟಿನಲ್ಲಿ ನಾನು ಪ್ರಧಾನಿ ಕಾರ್ಯಾಲಯಕ್ಕೆ, ಕೇಂದ್ರ ಹೆಲ್ತ್ ಡಿಪಾರ್ಟೆಂಟ್ಗೆ ಲೆಟರ್ ಬರೆದಿದ್ದೇನೆ. ಆದಷ್ಟು ಬೇಗ ಆಕ್ಸಿಜನ್ ಪೂರೈಕೆ ಮಾಡಲಾಗುತ್ತದೆ. ಕರ್ನಾಟಕಕ್ಕೆ ಆದ್ಯತೆ ಮೇರೆಗೆ ಕೊಡಿ ಎಂದು ಕೇಳುತ್ತಿದ್ದೇನೆ ಎಂದು ತಿಳಿಸಿದರು.