ಬೆಂಗಳೂರು: ನಾನು ತಿನ್ನುತ್ತೇನೆ, ನೀವೂ ತಿನ್ನಿ.. ಇದು ಜೆಡಿಎಸ್ ಜೀವನ ಶೈಲಿಯಾಗಿದೆ. ಹಾಗಾಗಿಯೇ ಮೊಹಮ್ಮದ್ ಮನ್ಸೂರ್ ತರದ ವಂಚಕರು ತಿಂದು ಲೂಟಿ ಮಾಡಿ ಪರಾರಿಯಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.
![bjp tweet](https://etvbharatimages.akamaized.net/etvbharat/prod-images/kn-bng-02-11-bjp-tweet-script-prashanth-9021933_11062019143512_1106f_1560243912_197.jpg)
ಐಎಂಎ ವಂಚಕ ಮೊಹಮ್ಮದ್ ಮನ್ಸೂರ್ ಜೊತೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಿರಿಯಾನಿ ತಿನ್ನುತ್ತಿರುವ ಫೋಟೋ ಟ್ಯಾಗ್ ಮಾಡಿ, ಕುಮಾರಸ್ವಾಮಿ ಅವರ ಬಿರಿಯಾನಿ ಡೇ ವಿತ್ ಫ್ರಾಡ್ಸ್. ಈ ಫೋಟೋ ಎಲ್ಲವನ್ನೂ ಹೇಳುತ್ತಿದೆ. ಆದರೆ, ಇದನ್ನು ಒಪ್ಪಿಕೊಳ್ಳುವುದು ಅವರಿಗೆ ಕಷ್ಟವಾಗುತ್ತಿದೆ ಎಂದು ಟಾಂಗ್ ನೀಡಿ ಟ್ವೀಟ್ ಮಾಡಿದೆ.