ಬೆಂಗಳೂರು: ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ ಚಿಂತನೆ ವಿಚಾರವಾಗಿ ನಾನು ಸ್ಪೀಕರ್ ಜತೆ ಚರ್ಚೆ ನಡೆಸುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಅಧಿವೇಶನಕ್ಕೆ ಕ್ಯಾಮರಾಗಳ ನಿರ್ಬಂಧ ಸಂಬಂಧ ಪ್ರತಿಕ್ರಿಯಿಸಿದ ಅವರು, ಸ್ಪೀಕರ್ ಕಾಗೇರಿ ಅವರ ನಿರ್ಧಾರದ ಬಗ್ಗೆ ನನಗೆ ಗೊತ್ತಿಲ್ಲ. 7-8 ವರ್ಷಗಳಿಂದಲೂ ವಿಧಾನಸಭೆಗೆ ಮಾಧ್ಯಮ ನಿರ್ಬಂಧದ ಕುರಿತು ಚರ್ಚೆ ನಡೆದಿತ್ತು. ಮಾಧ್ಯಮಗಳನ್ನು ಒಳಗೆ ಬಿಡದಿರುವ ಬಗ್ಗೆ ನಾಳೆ ಸ್ಪೀಕರ್ ಜತೆ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಸಿಎಂ, ಸ್ಪೀಕರ್ ನಡುವಿನ ಅಸಮಾಧಾನ ಕುರಿತು ಮಾತನಾಡಿ, ಸ್ಪೀಕರ್ ಹಾಗೂ ಸಿಎಂ ನಡುವೆ ಯಾವುದೇ ಬೇಸರ, ಸಮಸ್ಯೆ ಇಲ್ಲ ಎಂದು ತಿಳಿಸಿದರು.