ಬೆಂಗಳೂರು: ಕೋವಿಡ್ ಹಿನ್ನೆಲೆ ಸರಳವಾಗಿ ನಡೆದ ತಿಂಗಳ ಚಿತ್ರಸಂತೆಯನ್ನು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಸುಧಾಮೂರ್ತಿ ವರ್ಚುಯಲ್ ಮೂಲಕ ಉದ್ಘಾಟಿಸಿದರು. ಆನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ತಾನು ಬಡ ಕಲಾವಿದರಿಗೆ ಸಹಾಯ ಮಾಡಲು ತಯಾರಿರುವುದಾಗಿ ತಿಳಿಸಿದರು.
ಪ್ರತಿ ವರ್ಷ ರಸ್ತೆಯ ಇಕ್ಕೆಲಗಳಲ್ಲಿ ಚಿತ್ರರಾಶಿ ತುಂಬಿಕೊಂಡು ಕಲಾ ರಸಿಕರನ್ನು ತನ್ನತ್ತ ಸೆಳೆಯುತ್ತಿದ್ದ ಚಿತ್ರಸಂತೆ. ಈ ಸಲ ಅತ್ಯಂತ ಸರಳವಾಗಿ ನಡೆಯಿತು. ಕಲಾ ಉಪನ್ಯಾಸಕರು ಮತ್ತು ಲಕ್ಷಾಂತರ ಜನರು ಚಿತ್ರಸಂತೆಯನ್ನು ಅನ್ಲೈನ್ ಮೂಲಕ ವೀಕ್ಷಿಸಿದರು. ಕೋವಿಡ್ ವಾರಿಯರ್ಸ್ಗೆಂದೇ ಸಮರ್ಪಿಸಲಾದ 18ನೇ ಚಿತ್ರಸಂತೆಯು ಕಣ್ಮನ ಸೆಳೆಯಿತು.
ಕರ್ನಾಟಕ ಚಿತ್ರ ಕಲಾ ಪರಿಷತ್ ತುಂಬಾ ಈಡೀ ವಿಶ್ವಕ್ಕೆ ಕಂಟಕವಾಗಿದ್ದ ಕೋವಿಡ್ 19 ಆಕೃತಿಗಳು, ಕೊರೊನಾ ವಾರಿಯರ್ಸ್ನ ಚಿತ್ರಗಳು, ಘೋಷವಾಕ್ಯಗಳು ಎದ್ದು ಕಾಣುತ್ತಿದ್ದವು. 18ನೇ ಚಿತ್ರಸಂತೆ ಕೊರೊನಾ ಸಮಯದಲ್ಲಿ ನಿಜವಾದ ಯೋಧರಾಗಿ ಸೇವೆ ಸಲ್ಲಿಸಿದ ಕೊರೊನಾ ವಾರಿಯರ್ಸ್ಗೆ ಸಮರ್ಪಣೆ ಮಾಡಲಾಗಿತ್ತು.
ಇನ್ನು ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್, ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಜಯದೇವ ಆಸ್ಪತ್ರೆ ನಿರ್ದೇಶಕ ಸಿ. ಎನ್. ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರತಿ ವರ್ಷದಂತೆ ಈ ವರ್ಷವು ಕೂಡ ಚಿತ್ರ ಕಲಾ ಸನ್ಮಾನ ಪ್ರಶಸ್ತಿಯನ್ನು ಕೊಡ ಮಾಡಲಾಯಿತು. ಕೇಜ್ರಿವಾಲ್ ಪ್ರಶಸ್ತಿಯನ್ನು ಡಾ. ಚುಡಾಮಣಿ ನಂದಾಗೋಪಾಲ್ ಮತ್ತು ದೇವರಾಜ್ ಅರಸು ಪ್ರಶಸ್ತಿಯನ್ನು ಪಿಎಸ್ ಕುಮಾರ್ ಅವರಿಗೆ ನೀಡಿ ಸನ್ಮಾನಿಸಲಾಯಿತು.
ಇನ್ನು ಈ ಬಾರಿಯ ಚಿತ್ರ ಸಂತೆಗೆ ಸುಮಾರು 1000 ಕ್ಕೂ ಹೆಚ್ಚು ಕಾಲವಿದರು, ಅನ್ಲೈನ್ ಮೂಲಕ ಭಾಗಿಯಾಗಿದ್ದರು. ಸುಮಾರು 22ಕ್ಕೂ ಹೆಚ್ಚು ದೇಶಗಳ ಕಲಾವಿದರು ಭಾಗಿಯಾಗಿದ್ದು ವಿಶೇಷವಾಗಿತ್ತು. ಅಷ್ಟೇ ಅಲ್ಲದೆ, ಚಿತ್ರಕಲಾ ಪರಿಷತ್ 10 ಗ್ಯಾಲರಿಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಆಯ್ದ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು .
ಈ ಬಾರಿಯ ಚಿತ್ರಸಂತೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿಲ್ಲದಿರೋದು ವಿಶೇಷವಾಗಿದೆ. ಮುಂದಿನ ಒಂದು ತಿಂಗಳ ಕಾಲ ಆನ್ಲೈನ್ ಮೂಲಕ ಚಿತ್ರಸಂತೆ ನಡೆಯಲಿದ್ದು, ಮನೆಗೊಂದು ಕಲಾಕೃತಿ ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿದೆ. Chitrasante. org ಜಾಲತಾಣಕ್ಕೆ ಭೇಟಿ ನೀಡಿ ಸಾವಿರಾರು ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಬಹುದು. ನಿಮ್ಮಿಷ್ಟದ ಚಿತ್ರವನ್ನು ಕೂಡ ಖರೀದಿಸಬಹುದು.