ಬೆಂಗಳೂರು: ಹೈದರಾಬಾದ್ ಕರ್ನಾಟಕದಲ್ಲಿ ವರುಣನ ರೌದ್ರವತಾರ ಜೋರಾಗಿದೆ. ಒಂದು ದಿನದ ಮಳೆಯ ಅಬ್ಬರಕ್ಕೆ ಕೋಟ್ಯಂತರ ಮೌಲ್ಯದ ಆಸ್ತಿ-ಪಾಸ್ತಿ, ಬೆಳೆ ನಷ್ಟವಾಗಿದೆ.
ನಿನ್ನೆಯಿಂದ ಸುರಿಯುತ್ತಿರುವ ಮಳೆಗೆ ಪ್ರಾಥಮಿಕ ವರದಿ ಪ್ರಕಾರ ಒಂದು ಸಾವು ಸಂಭವಿಸಿದೆ. ಸುಮಾರು 1,04418.82 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿ ಸಂಭವಿಸಿದೆ. 3,481.93 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಸುಮಾರು 2,712 ಮನೆಗಳು ಭಾಗಶ: ಹಾನಿಯಾಗಿದ್ದರೆ, 318 ಮನೆಗಳು ಸಂಪೂರ್ಣ ಹಾನಿಯಾಗಿವೆ. ಈವರೆಗೆ ಒಟ್ಟು 517 ಪ್ರಾಣಿಗಳು ಮಳೆಗೆ ಕೊಚ್ಚಿಹೋಗಿವೆ.
ಒಟ್ಟು 54 ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, 7,776 ನಿರಾಶ್ರಿತರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಕಲಬುರ್ಗಿಯಲ್ಲಿ 7,603 ನಿರಾಶ್ರಿತರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ನಷ್ಟ?
ಬೆಳಗಾವಿ- 3,035.33 ಹೆಕ್ಟೇರ್ ಬೆಳೆ ಹಾನಿ
ಬಾಗಲಕೋಟೆ- 25,236 ಹೆಕ್ಟೇರ್ ಬೆಳೆ ಹಾನಿ
ರಾಯಚೂರು- 77,067 ಹೆಕ್ಟೇರ್ ಬೆಳೆ ಹಾನಿ
ಯಾದಗಿರಿ- 2562.17 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ.