ETV Bharat / state

ಮದುವೆಯಾದ ತಿಂಗಳಲ್ಲೇ ಪತ್ನಿಗೆ ಕನ್ಯತ್ವ ಪರೀಕ್ಷೆ ಮಾಡಿಸಿದ ಭೂಪ...! - ಪತ್ನಿಯ ಕನ್ಯತ್ವ ಪರೀಕ್ಷೆ ಮಾಡಿಸಿದ ಗಂಡ

ಮದುವೆಯಾದ ಒಂದೇ ತಿಂಗಳಲ್ಲಿ ಗಂಡ ತನ್ನ ಪತ್ನಿಯ ಕನ್ಯತ್ವದ ಪರೀಕ್ಷೆ ಮಾಡಿಸಿರುವ ವಿಚಿತ್ರ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

Bangalore crime
ಬೆಂಗಳೂರು ಕ್ರೈಮ್​
author img

By

Published : Jul 24, 2020, 3:47 PM IST

Updated : Jul 24, 2020, 4:02 PM IST

ಬೆಂಗಳೂರು: ಮದುವೆಯಾದ ಒಂದೇ ತಿಂಗಳಲ್ಲಿ ಗಂಡ ತನ್ನ ಪತ್ನಿಯ ಕನ್ಯತ್ವದ ಪರೀಕ್ಷೆ ಮಾಡಿಸಿರುವ ವಿಚಿತ್ರ ಘಟನೆ ನಗರದಲ್ಲಿ ನಡೆದಿದೆ.

ಕಳೆದ ಫೆಬ್ರವರಿಯಲ್ಲಿ ನಗರದ ಬಂಡೆಪಾಳ್ಯ ನಿವಾಸಿಯಾಗಿರುವ ಮಹಿಳೆಗೆ ಕುಟುಂಬಸ್ಥರು ಖಾಸಗಿ ಹೋಟೆಲ್ ನಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಸಿದ್ದರು.

ಮದುವೆಯಾದ ಒಂದು ವಾರ ಸುಮ್ಮನಿದ್ದ ಗಂಡ ಎರಡನೇ ವಾರ ಪತ್ನಿಗೆ ಖಾಸಗಿ ಆಸ್ಪತ್ರೆಗೆ ಹೋಗಿ ಕನ್ಯತ್ವ ಪರೀಕ್ಷೆ ಮಾಡಿಸುವಂತೆ ಹಾಗೂ ಪ್ರತಿದಿನ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಪೀಡಿಸುತ್ತಿದ್ದನಂತೆ. ಅಷ್ಟು ಮಾತ್ರವಲ್ಲದೆ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ತನ್ನ ಹಣವನ್ನೆಲ್ಲ ಗಂಡನ ಮನೆಯವರೇ ಲಪಟಾಯಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಗಂಡನ ಜೊತೆ ಮನೆಯವರ ಕಾಟ:

ಸಂತ್ರಸ್ತೆಗೆ ಅತ್ತೆ-ಮಾವ, ಗಂಡನ ಅಣ್ಣ, ನಾದಿನಿ ಕೂಡ ಚಿತ್ರಹಿಂಸೆ ನೀಡುತ್ತಿದ್ದರಂತೆ. ಇತ್ತ ಪಾಪಿ ಗಂಡ ಅಶ್ಲೀಲವಾಗಿ ಫೋಟೋ ತೆಗೆದು ಪ್ರತಿದಿನ ಹಿಂಸಿಸುತ್ತಿದ್ದ ಎಂದು ನೊಂದ ಮಹಿಳೆ ಆರೋಪಿಸಿದ್ದಾಳೆ.

ಸದ್ಯ ಸಂತ್ರಸ್ತೆಯು ಗಂಡ ‌ಹಾಗೂ‌ ಕುಟುಂಬಸ್ಥರ ವಿರುದ್ಧ ಬಂಡೆಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

Last Updated : Jul 24, 2020, 4:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.