ETV Bharat / state

ಪತ್ನಿಯಿಂದ ಕಿರುಕುಳ ಆರೋಪ: ಬೇಸತ್ತ ಪತಿ ಆತ್ಮಹತ್ಯೆ - kannada news

ಹೆಂಡತಿ ಹಾಗೂ ಆಕೆಯ‌ ಮನೆಯವರು ಕಿರುಕುಳ ನೀಡಿದ ಆರೋಪ: ಡೆತ್ ನೋಟ್ ಬರೆದು ಸೂಸೈಡ್ ಮಾಡಿಕೊಂಡ ಗಂಡ.

ಪತ್ನಿ ಕಿರುಕುಳಕ್ಕೆ ಬೆಸತ್ತ ಪತಿ ಸಾವಿಗೆ ಶರಣು
author img

By

Published : May 24, 2019, 9:59 PM IST

ಬೆಂಗಳೂರು : ಕೈ ಹಿಡಿದ ಹೆಂಡತಿ ಹಾಗೂ ಆಕೆಯ ಮನೆಯವರ ಕಿರುಕುಳಕ್ಕೆ ಬೇಸತ್ತ ಗಂಡ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಗುಂಟೆ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಪತ್ನಿ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಎಸ್.ಶ್ರೀನಿವಾಸ್‌ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ‌ ಎನ್ನಲಾಗುತ್ತಿದೆ. ವೃತ್ತಿಯಲ್ಲಿ ಚಾಲಕನಾಗಿದ್ದ ಶ್ರೀನಿವಾಸ್ ಸುಮಾ ಎಂಬುವರ ಜೊತೆ ಮದುವೆಯಾಗಿದ್ದ. ಅಣ್ಣನ ಸಂಸಾರದೊಂದಿಗೆ ಒಟ್ಟಿಗೆ ಒಂದೇ ಮನೆಯಲ್ಲಿದ್ದ ಶ್ರೀನಿವಾಸ್ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ.

ಮೃತ ಶ್ರೀನಿವಾಸನ ಅಣ್ಣ

ಶ್ರೀನಿವಾಸ್ ಕೆಲಸದಿಂದ ಬರುವುದು ತಡವಾದ್ರೆ ಫೋನ್ ಮಾಡಿ ಬೈಯ್ಯುತ್ತಿದ್ದ ಪತ್ನಿ, ತನ್ನ ತಾಯಿಯಿಂದಲೂ ಬೈಯ್ಯಿಸುವುದು, ಬೇರೆ ಮನೆ ಮಾಡುವಂತೆ ಒತ್ತಾಯಿಸುವುದು ಮಾಡುತ್ತಿದ್ದಳಂತೆ. ಇದಕ್ಕೆಲ್ಲಾ ಆಕೆಯ ತಂದೆ ಗಂಗಣ್ಣ, ತಾಯಿ ಶಾರದಾ ಹಾಗೂ ಅಣ್ಣ ಸುನೀಲ್ ಕುಮಾರ್ ಕುಮ್ಮಕ್ಕು ನೀಡುತ್ತಿದ್ದರಂತೆ. ಜಗಳ ಮಾಡಿಕೊಂಡು ಪದೇ ಪದೇ ತವರಿಗೆ ಹೋಗುತ್ತಿದ್ದ ಸುಮಾ, ಒಂದೂವರೆ ತಿಂಗಳ ಹಿಂದೆ ಮತ್ತೆ ತವರು ಸೇರಿದ್ದಳಂತೆ.

ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ಶ್ರೀನಿವಾಸ ಈ ವಿಚಾರವಾಗಿ ಅಣ್ಣನ ಬಳಿ ಹೇಳಿಕೊಂಡಿದ್ದನಂತೆ. ಅಣ್ಣ ಎರಡು ದಿನ ದೇವಸ್ಥಾನಕ್ಕೆ ಹೋಗಲು ಕರೆದಾಗ ಬಾರದೆ, ಹೆಂಡತಿ ನೆಪವನ್ನು ಹೇಳಿ ಬರುವುದಿಲ್ಲ ಎಂದಿದ್ದನಂತೆ. ಎರಡು ದಿನಗಳ ಬಳಿಕ ಮನೆಗೆ ಬಂದು ನೋಡಿದಾಗ ತಮ್ಮ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದ. ಸದ್ಯ ಪ್ರಕರಣ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Intro:Body:ಹೆಂಡತಿ ಹಾಗೂ ಆಕೆಯ‌ ಮನೆಯವರು ಕಿರುಕುಳ ನೀಡಿದ ಆರೋಪ: ಡೆತ್ ನೋಟ್ ಬರೆದು ಸೂಸೈಡ್ ಮಾಡಿಕೊಂಡ ಗಂಡ

ಬೆಂಗಳೂರು:
ಕೈ ಹಿಡಿದ ಹೆಂಡತಿ ಹಾಗೂ ಆಕೆಯ ಮನೆಯವರ ಕಿರುಕುಳಕ್ಕೆ ಬೇಸತ್ತ ಗಂಡ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಬಾಗಲಗುಂಟೆ ಠಾಣಾ ವ್ಯಾಪ್ತಿಯ ಮಂಜುನಾಥ ನಗರದ ಮನೆಯೊಂದರಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪತ್ನಿ ಸುಮಾಳ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಎಸ್.ಶ್ರೀನಿವಾಸ್‌ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾನೆ‌. ವೃತ್ತಿಯಲ್ಲಿ ಚಾಲಕನಾಗಿದ್ದ ಶ್ರೀನಿವಾಸ್ ಸುಮಾನೊಂದಿಗೆ ಮದುವೆಯಾಗಿದ್ದ. ಮದುವೆಯಾದ ನಂತರ ಅಣ್ಣನ ಸಂಸಾರದೊಂದಿಗೆ ಒಟ್ಟಿಗೆ ಒಂದೇ ಮನೆಯಲ್ಲಿದ್ದ ಶ್ರೀನಿವಾಸ್ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಆದರೆ ಶ್ರೀನಿವಾಸ್ ಕೆಲಸದಿಂದ ಬರುವುದು ತಡವಾದರೆ ಫೋನ್ ಮಾಡಿ ಬೈಯ್ಯುತ್ತಿದ್ದ ಪತ್ನಿ ತಾನು ಮಾತ್ರವಲ್ಲದೆ ತನ್ನ ತಾಯಿಯಿಂದಲೂ ಬೈಯ್ಯಿಸುವುದು, ಬೇರೆ ಮನೆ ಮಾಡುವಂತೆ ಒತ್ತಾಯಿಸುವುದು ಮಾಡುತ್ತಿದ್ದಳಂತೆ. ಇದಕ್ಕೆಲ್ಲಾ ಆಕೆಯ ತಂದೆ ಗಂಗಣ್ಣ, ತಾಯಿ ಶಾರದಾ ಹಾಗೂ ಅಣ್ಣ ಸುನೀಲ್ ಕುಮಾರ್ ಕುಮ್ಮಕ್ಕು ನೀಡುತ್ತಿದ್ದರಂತೆ. ಜಗಳ ಮಾಡಿಕೊಂಡು ಪದೇ ಪದೇ ತವರಿಗೆ ಹೋಗುತ್ತಿದ್ದ ಸುಮಾ ಒಂದೂವರೆ ತಿಂಗಳ ಹಿಂದೆ ಮತ್ತೆ ತವರು ಸೇರಿದ್ದಳು. ವಿಪರೀತ ಮಾನಸಿಕ ಕಿರಿಕಿರಿಯ ಬಗ್ಗೆ ಅಣ್ಣ ರವೀಶ್ವರ್ ಬಳಿ ಹೇಳಿಕೊಂಡಿದ್ದನಂತೆ. ಕಳೆದ ಶುಕ್ರವಾರ ರವೀಶ್ವರ್ ಕುಟುಂಬ ಸಮೇತ
ದೇವಸ್ಥಾನಕ್ಕೆ ಹೊರಟಿದ್ದಾಗ ತಮ್ಮ ಶ್ರೀನಿವಾಸ್ ನನ್ನ ಕರೆದಿದ್ದು, ಆಗಲೂ ಸಹ ಹೆಂಡತಿ ಮನೆಯವರು ಜಗಳ ಮಾಡುತ್ತಾರೆ ನಾನು ಬರುವುದಿಲ್ಲ ಅಂತಾ ಶ್ರೀನಿವಾಸ್ ನಿರಾಕರಿಸಿದ್ದು, ಎರಡು ದಿನದ ಬಳಿಕ ರವೀಶ್ವರ್ ಬಂದು ನೋಡಿದಾಗ ಶ್ರೀನಿವಾಸ್ ತನ್ನ ಸಾವಿಗೆ ಪತ್ನಿ ಹಾಗೂ ಆಕೆಯ ಮನೆಯವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇತ್ತ ತಮ್ಮನ ಸಾವಿಗೆ ಕಾರಣವಾದವರ ವಿರುದ್ಧ ಅಣ್ಣ ರವೀಶ್ವರ್ ಬಾಗಲಗುಂಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.