ETV Bharat / state

ಬೆಂಜ್ ಕಾರ್, 5ಕೆಜಿ ಚಿನ್ನಾಭರಣ ಕೊಟ್ಟರೂ ನೀಗದ ವರದಕ್ಷಿಣೆ ದಾಹ: ಫಸ್ಟ್ ನೈಟ್ ದಿನವೇ ಪತಿಯ ಮೃಗೀಯ ಕೃತ್ಯ - bangalore Husband slaps his wife news

ಮೊದಲ ರಾತ್ರಿಯ ದಿನವೇ ಗಂಡನೋರ್ವ ಪತ್ನಿಯ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಆದ್ರೆ ಇದೀಗ ಸಂತ್ರಸ್ತೆ ಮನೆಯವರು ಆರೋಪಿಗೆ ಎಷ್ಟು ವರದಕ್ಷಿಣೆ ನೀಡಿದ್ದರು ಎಂಬ ಮಾಹಿತಿ ಬಯಲಾಗಿದೆ.

1 ಕೋಟಿಯ E ಕ್ಲಾಸ್ ಬೆಂಜ್ ಕಾರ್
1 ಕೋಟಿಯ E ಕ್ಲಾಸ್ ಬೆಂಜ್ ಕಾರ್
author img

By

Published : Dec 3, 2020, 2:35 PM IST

Updated : Dec 3, 2020, 7:29 PM IST

ಬೆಂಗಳೂರು: ಫಸ್ಟ್ ನೈಟ್​ ದಿನವೇ ಪತಿ ಮದ್ಯ ಸೇವಿಸಿ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಪ್ರಕರಣದ ತನಿಖೆ ಮುಂದುವರಿದಿದೆ. ಮತ್ತೊಂದೆಡೆ ಸಂತ್ರಸ್ತೆಯ ಮನೆಯವರು ಹುಡುಗ ಭರತ್​ಗೆ ವರದಕ್ಷಿಣೆ ನೀಡಿದ ವಿಚಾರ ಇದೀಗ ಬಯಲಾಗಿದೆ.

ಬೆಂಜ್ ಕಾರ್, 5ಕೆಜಿ ಚಿನ್ನಾಭರಣ ಕೊಟ್ಟರೂ ನೀಗದ ವರದಕ್ಷಿಣೆ ದಾಹ

ಸಂತ್ರಸ್ತೆ ವಿದ್ಯಾವಂತೆಯಾಗಿದ್ದು, ಆರೋಪಿ ಎಸ್​​ಎಸ್​ಎಲ್​​ಸಿ ಫೇಲಾಗಿದ್ದಾನೆ. ಆದ್ರೂ ಕೂಡ ಎಂಜಿನಿಯರ್ ಅಂತ ಹೇಳಿ ಮೋಸ ಮಾಡಿದ್ದಾನೆ ಎನ್ನಲಾಗ್ತಿದೆ. ಬ್ರೋಕರ್ ಮುಖಾಂತರ ಈತನ ಪರಿಚಯವಾಗಿದ್ದು, ನಿಶ್ಚಿತಾರ್ಥ ಸಂದರ್ಭದಲ್ಲಿ ಸಂತ್ರಸ್ತೆಗೆ ಹುಡುಗ ಸರಿಯಿಲ್ಲವೆಂದು ಸ್ನೇಹಿತರು ತಿಳಿಸಿದ್ದರು. ಆದ್ರೆ ಭರತ್ ಮನೆಯವರು ಅತ್ತು ಕರೆದು, ದೇವರ ಮೇಲೆ ಪ್ರಮಾಣ ಮಾಡಿ ಸುಳ್ಳು ಎಂದು ನಂಬಿಸಿದ್ದರು ಎನ್ನಲಾಗ್ತಿದೆ.

ಇದನ್ನು ಓದಿ: ಫಸ್ಟ್ ನೈಟ್​ನಲ್ಲೇ ಗಂಡ ಫುಲ್​ ಟೈಟ್: ಮದ್ಯದ ಅಮಲಿನಲ್ಲಿ ಪತ್ನಿಗೆ ಏಟು!

ಹೀಗಾಗಿ ಸಂತ್ರಸ್ತೆ ತಂದೆ-ತಾಯಿ, ಮಗಳು ಗಂಡನ ಮನೆಯಲ್ಲಿ ಖುಷಿಯಾಗಿರಲಿ ಎಂದು ಐದು ಲಕ್ಷದ ಡೈಮಂಡ್ ರಿಂಗ್, ಐದು ಕೆಜಿ ಚಿನ್ನಾಭರಣ, 1 ಕೋಟಿಯ E ಕ್ಲಾಸ್ ಬೆಂಜ್ ಕಾರ್ ಹಾಗೂ ಸುಮಾರು ಮೂರು ಕೋಟಿ ರೂ. ಖರ್ಚು ಮಾಡಿ ಮದುವೆ ಮಾಡಲಾಗಿತ್ತು. ಆದರೆ ಭರತ್ ಮದುವೆಯಾದ ದಿನವೇ ತನ್ನ ಇನ್ನೊಂದು ಮುಖವಾಡ ತೋರಿಸಿ ಚಿತ್ರ ಹಿಂಸೆ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಭರತ್​ನನ್ನ ಪೊಲೀಸರು ಬಂಧಿಸಿದ್ದಾರೆ.

Last Updated : Dec 3, 2020, 7:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.