ETV Bharat / state

ಸಿಸಿಬಿ ವಿಚಾರಣೆಗೆ ಮುನೇಶ್ವರ ವಾರ್ಡ್​ನ ಕಾರ್ಪೊರೇಟರ್ ಪತಿ ಹಾಜರು..!

author img

By

Published : Aug 24, 2020, 1:51 PM IST

ಮುಜಾಮಿಲ್ ಪಾಷಾಗೂ ನಮಗೂ ಯಾವುದೇ ಸಂಬಂಧ ಇಲ್ಲ. ಸಗಾಯ್​ಪುರ ವಾರ್ಡ್​ನ ಬೈ ಎಲೆಕ್ಷನ್ ವೇಳೆ ಆತನನ್ನ ನೋಡಿದ್ದು, ಎಂದು ಸಿಸಿಬಿ ವಿಚಾರಣೆಯಲ್ಲಿ ನಾಸೀರ್ ತಿಳಿಸಿದ್ದಾರೆ.

CBI enquiry
ಸಾಜೀದ ಪತಿ ನಾಸೀರ್

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಮುನೇಶ್ವರ ವಾರ್ಡ್​ನ ಕಾರ್ಪೊರೇಟರ್ ಸಾಜೀದ ಪತಿ ನಾಸೀರ್ ಅವರನ್ನ ಇಂದು ವಿಚಾರಣೆಗೆ ಸಿಸಿಬಿ ಒಳಪಡಿಸಿ ತದ ನಂತರ ಬಿಟ್ಟು ಕಳುಹಿಸಿದ್ದಾರೆ.

ವಿಚಾರಣೆ ಮುಗಿಸಿ ಹೊರಗಡೆ ಬಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಸಿಬಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗೆ ಉತ್ತರ ನೀಡಿದ್ದೇನೆ. ನಮ್ಮ‌ ಮೊಬೈಲ್ ಸೀಜ್ ಮಾಡಿ ಪರಿಶೀಲನೆ ಮಾಡಿದ್ದಾರೆ. ಈಗಾಗಲೇ ಬಂಧಿತನಾದ ಮುಜಾಮಿಲ್ ಪಾಷಾಗೂ ನಮಗೂ ಯಾವುದೇ ಸಂಬಂಧ ಇಲ್ಲ. ಸಗಾಯ್​ಪುರ ವಾರ್ಡ್​ನ ಬೈ ಎಲೆಕ್ಷನ್ ವೇಳೆ ಆತನನ್ನ ನೋಡಿದ್ದು, ಮತ್ತೆ ಮುಜಾಮಿಲ್ ಪಾಷಾನನ್ನ ಭೇಟಿ ಮಾಡಿಯೇ ಇಲ್ಲ. ಮತ್ತೆ ವಿಚಾರಣೆಗೆ ಫೋನ್​​‌ ಮಾಡಿ ಕರೆಯುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಫೋನ್​​ ಮಾಡಿದ್ರೆ ಮತ್ತೆ ವಿಚಾರಣೆಗೆ ಬರ್ತೀವಿ ಎಂದು ವಿಚಾರಣೆ ಮುಗಿದ ಬಳಿಕ ಕಾರ್ಪೋರೇಟರ್ ಪತಿ ತಿಳಿಸಿದ್ದಾರೆ.

ಈಗಾಗಲೇ ಬಂಧಿತನಾಗಿರುವ ಮುಜಾಮಿಲ್ ಪಾಷಾ ಹಲವಾರು ಕಾರ್ಪೊರೇಟರ್ ಜೊತೆ ಸಂಪರ್ಕ ಹೊಂದಿದ ಆರೋಪ ಇತ್ತು. ಹೀಗಾಗಿ ಆರೋಪಿಗಳ ಜೊತೆ ಯಾರೆಲ್ಲಾ ಸಂಪರ್ಕ ಹೊಂದಿದ್ರು ಅವರನ್ನೆಲ್ಲ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.